alex Certify BIG NEWS: ವಿಶೇಷ ಚೇತನ ವ್ಯಕ್ತಿಯ ಮೇಲೆ ಹರಿದ KSRTC ಬಸ್; ವ್ಯಕ್ತಿ ದುರ್ಮರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ವಿಶೇಷ ಚೇತನ ವ್ಯಕ್ತಿಯ ಮೇಲೆ ಹರಿದ KSRTC ಬಸ್; ವ್ಯಕ್ತಿ ದುರ್ಮರಣ

ಮೈಸೂರು: ವಿಶೇಷ ಚೇತನ ವ್ಯಕ್ತಿಯ ಮೇಲೆ ಕೆ ಎಸ್ ಆರ್ ಟಿ ಸಿ ಬಸ್ ಹರಿದು ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆಯ ಹೆಚ್.ಡಿ. ಕೋಟೆ ತಾಲೂಕಿನ ಹ್ಯಾಂಡ್ ಪೋಸ್ಟ್ ಬಳಿ ಸಂಭವಿಸಿದೆ.

ಸಾಗರೆ ಗ್ರಾಮದ ಚಿಕ್ಕಿ ಪುಟ್ಟ ಮೃತ ದುರ್ದೈವಿ. ರಸ್ತೆಯ ಪಕ್ಕದಲ್ಲಿ ಭಿಕ್ಷೆ ಬೇಡುತ್ತಾ ಸಾಗಿದ್ದ ವಿಶೇಷ ಚೇತನನ ಮೇಲೆ ಬಸ್ ಹರಿದಿದ್ದು, ಅಪಘಾತದ ರಭಸಕ್ಕೆ ವ್ಯಕ್ತಿಯ ತಲೆ ಛಿದ್ರವಾಗಿದೆ. ಸ್ಥಳದಲ್ಲೇ ಆತ ಸಾವನ್ನಪ್ಪಿದ್ದಾನೆ.

ಕೆ ಎಸ್ ಆರ್ ಟಿ ಸಿ ಬಸ್ ಸರಗೂರಿನಿಂದ ಮೈಸೂರಿಗೆ ತೆರಳುತ್ತಿತ್ತು. ಬಸ್ ಚಾಲಕನ ಅಜಾಗರೂಕತೆಯೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಹೆಚ್.ಡಿ. ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...