alex Certify BIG NEWS: ವಿಧಾನ ಪರಿಷತ್ ಗೆ 7 ಸದಸ್ಯರು ಅವಿರೋಧ ಆಯ್ಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ವಿಧಾನ ಪರಿಷತ್ ಗೆ 7 ಸದಸ್ಯರು ಅವಿರೋಧ ಆಯ್ಕೆ

ಬೆಂಗಳೂರು: ವಿಧಾನ ಪರಿಷತ್ ಗೆ 7 ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಹೆಚ್ಚುವರಿ ನಾಮಪತ್ರ ಬಾರದ ಹಿನ್ನೆಲೆಯಲ್ಲಿ 7 ಸದಸ್ಯರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.

ಪರಿಷತ್ ನ 7 ಸ್ಥಾನಗಳಿಗೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಯ ನಾಲ್ಕು, ಕಾಂಗ್ರೆಸ್ ನ ಎರಡು ಹಾಗೂ ಜೆಡಿಎಸ್ ನ ಓರ್ವ ಅಭ್ಯರ್ಥಿ ನಾಮಪತ್ರ ಸಲ್ಲಿಸಿದ್ದರು. ಇಂದು ನಾಮಪತ್ರ ವಾಪಸ್ ಗೆ ಕೊನೆ ದಿನವಾಗಿತ್ತು. ಆದರೆ 7ಕ್ಕಿಂತ ಹೆಚ್ಚು ನಾಮಪತ್ರ ಸಲ್ಲಿಕೆಯಾಗದ ಹಿನ್ನೆಲೆಯಲ್ಲಿ 7 ಸದಸ್ಯರನ್ನು ಅವಿರೋಧ ಆಯ್ಕೆ ಮಾಡಲಾಗಿದೆ.

ಪರಿಷತ್ ನ ನೂತನ ಸದಸ್ಯರಾಗಿ ಬಿಜೆಪಿಯ ಲಕ್ಷ್ಮಣ ಸವದಿ, ಛಲವಾದಿ ನಾರಾಯಣಸ್ವಾಮಿ, ಕೇಶವ ಪ್ರಸಾದ್, ಹೇಮಲತಾ ನಾಯಕ್, ಕಾಂಗ್ರೆಸ್ ನ ಅಬ್ದುಲ್ ಜಬ್ಬಾರ್, ನಾಗರಾಜ್ ಯಾದವ್ ಹಾಗೂ ಜೆಡಿಎಸ್ ನ ಟಿ.ಎ.ಶರವಣ ಅವಿರೋಧ ಆಯ್ಕೆಯಾಗಿದ್ದು, ಕಾರ್ಯದಶಿ ವಿಶಾಲಾಕ್ಷಿ ಪ್ರಮಾಣಪತ್ರ ವಿತರಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...