alex Certify BIG NEWS: ವರುಣಾರ್ಭಟಕ್ಕೆ ಭೀಕರ ಅಪಘಾತ; ಹೇಮಾವತಿ ನದಿಗೆ ಉರುಳಿಬಿದ್ದ ಎರಡು ಕಾರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ವರುಣಾರ್ಭಟಕ್ಕೆ ಭೀಕರ ಅಪಘಾತ; ಹೇಮಾವತಿ ನದಿಗೆ ಉರುಳಿಬಿದ್ದ ಎರಡು ಕಾರು

ಚಿಕ್ಕಮಗಳೂರು: ಚಿಕ್ಕಮಗಳೂರಿನಾದ್ಯಂತ ಧಾರಾಕಾರ ಮಳೆಯಾಗುತ್ತಿದ್ದು, ವರುಣಾರ್ಭಟದ ನಡುವೆ ಅಪಘಾತಗಳ ಸಂಖ್ಯೆಯೂ ಹೆಚ್ಚಳವಾಗುತ್ತಿದೆ. ಭೀಕರ ಅಪಘಾತದಲ್ಲಿ ಎರಡು ಕಾರುಗಳು ಹೇಮಾವತಿ ನದಿಗೆ ಉರುಳಿಬಿದ್ದ ಘಟನೆ ನಡೆದಿದೆ.

ಚಾಲಕರ ನಿಯಂತ್ರಣ ತಪ್ಪಿದ ಕಾರುಗಳು ಬಣಕಲ್ ಸಮೀಪದ ಹೇಮಾವತಿ ನದಿಗೆ ಉರುಳಿ ಬಿದ್ದಿವೆ. ಸ್ವಿಫ್ಟ್ ಹಾಗೂ ಇನ್ನೋವಾ ಕಾರುಗಳು ಅಪಘಾತಕ್ಕೀಡಾಗಿ ನದಿಗೆ ಬಿದ್ದಿವೆ.

ಇನ್ನೋವಾ ಕಾರು ಪುತ್ತೂರಿನಿಂದ ಚಿಕ್ಕಮಗಳೂರಿನ ಕಡೆಗೆ ತೆರಳುತ್ತಿತ್ತು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ನದಿಗೆ ಬಿದ್ದಿದೆ. ಎರಡೂ ಕಾರಿನಲ್ಲಿದ್ದ ಪ್ರಯಾಣಿಕರಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...