alex Certify BIG NEWS: ರಾಷ್ಟ್ರ ರಾಜಧಾನಿಯ ʼಮಾಲಿನ್ಯʼ ಕುರಿತು ಆಘಾತಕಾರಿ ಮಾಹಿತಿ ಬಹಿರಂಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ರಾಷ್ಟ್ರ ರಾಜಧಾನಿಯ ʼಮಾಲಿನ್ಯʼ ಕುರಿತು ಆಘಾತಕಾರಿ ಮಾಹಿತಿ ಬಹಿರಂಗ

ಜಗತ್ತಿನ ಅತ್ಯಂತ ಕಲುಷಿತ ರಾಜಧಾನಿ ಎಂಬ ಕುಖ್ಯಾತಿಗೆ ದೆಹಲಿ ಪಾತ್ರವಾಗಿದೆ. ಅಷ್ಟೇ ಅಲ್ಲ ವಿಶ್ವದಲ್ಲೇ ಅತಿ ಹೆಚ್ಚು ಮಾಲಿನ್ಯ ಹೊಂದಿರುವ ನಗರಗಳಲ್ಲಿ ದೆಹಲಿಗೆ ನಾಲ್ಕನೇ ಸ್ಥಾನ. 2021 ರಲ್ಲಿ PM2.5 ಸಾಂದ್ರತೆಯಲ್ಲಿ ಶೇಕಡಾ 14.6 ರಷ್ಟು ಹೆಚ್ಚಳದೊಂದಿಗೆ ದೆಹಲಿ ಮತ್ತಷ್ಟು ವಿಷಕಾರಿಯಾಗಿ ಪರಿಣಮಿಸಿದೆ. ಸ್ವಿಡ್ಜರ್ಲೆಂಡ್‌ ನ IQAir 2021 ನಡೆಸಿರುವ ಸಮೀಕ್ಷೆಯಲ್ಲಿ ಬಹಿರಂಗವಾಗಿರೋ ಆಘಾತಕಾರಿ ಸಂಗತಿ ಇದು.

ವಿಶ್ವದ 35 ಅತ್ಯಂತ ಕಲುಷಿತ ನಗರಗಳು ಭಾರತದಲ್ಲಿವೆ ಅಂತಾ ಸಮೀಕ್ಷೆ ಹೇಳಿದೆ. ಅಷ್ಟೇ ಅಲ್ಲ ಅತ್ಯಧಿಕ ಮಾಲಿನ್ಯಯುಕ್ತ 100 ನಗರಗಳಲ್ಲಿ 63 ಭಾರತದ ಸಿಟಿಗಳು ಸೇರಿವೆ. ಆದ್ರೆ ಭಾರತದ ರಾಜಧಾನಿ ದೆಹಲಿಯ ಮಾಲಿನ್ಯದ ಕುರಿತಂತೆ ನೈಜ ವರದಿ ಆಗಸ್ಟ್‌ 1ರಿಂದ ಲಭ್ಯವಾಗಲಿದೆ ಅಂತಾ ದೆಹಲಿ ಸರ್ಕಾರ ಹೇಳಿಕೊಂಡಿದೆ. ನೈಜ ಸಮಯದಲ್ಲಿ ಮಾಲಿನ್ಯದ ಮೂಲಗಳನ್ನು ಗುರುತಿಸಲು ಜುಲೈ ಅಂತ್ಯದ ವೇಳೆಗೆ ಸೆಂಟ್ರಲ್ ದೆಹಲಿಯ ಪಂಡರ ರಸ್ತೆಯಲ್ಲಿ ಸೂಪರ್‌ಸೈಟ್ ಅನ್ನು ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

ಇದರೊಂದಿಗೆ ದೆಹಲಿ, ತನ್ನ ಹಂಚಿಕೆ ವ್ಯವಸ್ಥೆಯ ಮೂಲಕ ವಾಯು ಮಾಲಿನ್ಯದ ನೈಜ-ಸಮಯದ ಮೂಲವನ್ನು ಗುರುತಿಸುವ ದೇಶದ ಮೊದಲ ನಗರವಾಗಲಿದೆ. ದೆಹಲಿಯ ಯಾವುದೇ ನಿರ್ದಿಷ್ಟ ಸ್ಥಳದಲ್ಲಿ ವಾಯು ಮಾಲಿನ್ಯದ ಹೆಚ್ಚಳಕ್ಕೆ ಕಾರಣಗ್ತಿರೋ ಅಂಶಗಳನ್ನು ಗುರುತಿಸಲು ಈ ಯೋಜನೆ ಸಹಾಯ ಮಾಡುತ್ತದೆ. ವಾಹನಗಳು, ಧೂಳು, ಜೀವರಾಶಿ ಸುಡುವಿಕೆ, ಕಟ್ಟಿಗೆ ಸುಡುವುದು ಮತ್ತು ಕೈಗಾರಿಕೆಗಳ ಹೊರಸೂಸುವಿಕೆಯಂತಹ ಮಾಲಿನ್ಯ ಮೂಲಗಳ ಪರಿಣಾಮವನ್ನು ಅರ್ಥಮಾಡಿಕೊಳ್ಳಲು ಇದು ಸಹಾಯ ಮಾಡುತ್ತದೆ.

ಈ ಫಲಿತಾಂಶಗಳ ಆಧಾರದ ಮೇಲೆ, ಮಾಲಿನ್ಯದ ನಿರ್ದಿಷ್ಟ ಮೂಲಗಳನ್ನು ನಿಗ್ರಹಿಸಲು ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಬಹುದು. ಶಾಲೆಗಳ ಮುಚ್ಚುವಿಕೆ, ಕಟ್ಟಡ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಕೆಲವು ನಿರ್ಬಂಧಗಳು ಹಾಗೂ ವಾಹನಗಳ ಓಡಾಟಕ್ಕೂ ಕೆಲವೊಂದು ನಿರ್ಬಂಧಗಳನ್ನು ದೆಹಲಿ ಸರ್ಕಾರ ಹೇರುವ ಸಾಧ್ಯತೆ ಇದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...