alex Certify BIG NEWS: ರಾಷ್ಟ್ರಧ್ವಜ ಕಟ್ಟುವಾಗ ಕಟ್ಟಡದಿಂದ ಬಿದ್ದ ಟೆಕ್ಕಿ ದುರ್ಮರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ರಾಷ್ಟ್ರಧ್ವಜ ಕಟ್ಟುವಾಗ ಕಟ್ಟಡದಿಂದ ಬಿದ್ದ ಟೆಕ್ಕಿ ದುರ್ಮರಣ

ಬೆಂಗಳೂರು: ರಾಷ್ಟ್ರಧ್ವಜ ಕಟ್ಟುವಾಗ ಕಟ್ಟಡದಿಂದ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಟೆಕ್ಕಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಹೆಚ್.ಎಸ್.ಆರ್. ಲೇಔಟ್ ನಲ್ಲಿ ನಡೆದಿದೆ.

ಸುಳ್ಯ ಮೂಲದ ವಿಶುಕುಮಾರ್ (33) ಮೃತ ದುರ್ದೈವಿ. ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ʼಹರ್ ಘರ್ ತಿರಂಗಾʼ ಅಭಿಯಾನದ ಅಂಗವಾಗಿ ಮನೆಯ ಟೆರೇಸ್ ಮೇಲೆ ರಾಷ್ಟ್ರಧ್ವಜ ಕಟ್ಟಲೆಂದು ಹೋಗಿದ್ದ ವಿಶುಕುಮಾರ್, ಧ್ವಜಕಟ್ಟುವಾಗ ಟೆರೇಸ್ ಮೇಲಿನಿಂದ ಕೆಳಗೆ ಬಿದ್ದಿದ್ದಾರೆ.

ಗಂಭೀರವಾಗಿ ಗಾಯಗೊಂಡಿದ್ದ ವಿಶುಕುಮಾರ್ ರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಇಂದು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...