alex Certify BIG NEWS: ರಾಜವಂಶಸ್ಥರ ಜತೆ ಉಪಹಾರ ಸೇವಿಸಿದ ಪ್ರಧಾನಿ ಮೋದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ರಾಜವಂಶಸ್ಥರ ಜತೆ ಉಪಹಾರ ಸೇವಿಸಿದ ಪ್ರಧಾನಿ ಮೋದಿ

ಮೈಸೂರು: ಎರಡು ದಿನಗಳ ರಾಜ್ಯ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಮೈಸೂರಿನಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡ ಬಳಿಕ ರಾಜವಂಶಸ್ಥರ ಜತೆ ಉಪಹಾರ ಸೇವಿಸಿದ್ದಾರೆ.

ಅರಮನೆ ಮೈದಾನದಲ್ಲಿ ನಡೆದ 8ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಸ್ವತ: ಯೋಗಾಸನಗಳನ್ನು ಮಾಡುವ ಮೂಲಕ ವಿಶ್ವಕ್ಕೆ ಯೋಗದ ಮಹತ್ವ ಸಾರಿದ ಪ್ರಧಾನಿ ಮೋದಿಯವರನ್ನು ರಾಜವಂಶಸ್ಥೆ ಪ್ರಮೋದಾ ದೇವಿ ಉಪಹಾರಕ್ಕೆ ಆಹ್ವಾನಿಸಿದ್ದರು.

ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಮೈಸೂರು ಅರಮೆನೆಗೆ ತೆರಳಿ ರಾಜವಂಶಸ್ಥರೊಂದಿಗೆ ಉಪಹಾರ ಸೇವಿಸಿದ್ದಾರೆ. ಬೆಳ್ಳಿ ತಟ್ಟೆಯಲ್ಲಿ ಅವಲಕ್ಕಿ, ಉಪ್ಪಿಟ್ಟು, ಇಡ್ಲಿ ಸಾಂಬಾರ್, ಮೈಸೂರು ಪಾಕ್ ಸೇರಿದಂತೆ ಬಗೆ ಬಗೆಯ ಉಪಹಾರ, ಸಿಹಿ ತಿಂಡಿಗಳನ್ನು ಪ್ರಧಾನಿಗಾಗಿ ಸಿದ್ಧಪಡಿಸಲಾಗಿದ್ದು, ಉಪಹಾರ, ಸಿಹಿ ತಿಂಡಿಗಳನ್ನು ಪ್ರಧಾನಿ ಸವಿದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...