alex Certify BIG NEWS: ಮತದಾನ ವಿಳಂಬ; ಯಶವಂತಪುರ ಮತಗಟ್ಟೆಯಲ್ಲಿ ಗಲಾಟೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಮತದಾನ ವಿಳಂಬ; ಯಶವಂತಪುರ ಮತಗಟ್ಟೆಯಲ್ಲಿ ಗಲಾಟೆ

ಬೆಂಗಳೂರು: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ 224 ಕ್ಷೇತ್ರಗಳಲ್ಲಿ ಮತದಾನ ಆರಂಭವಾಗಿದೆ. ಆದರೆ ಬೆಂಗಳೂರಿನ ಯಶವಂತಪುರದ ರೋಟರಿ ಮತಗಟ್ಟೆಯಲ್ಲಿ ಮತದಾನ ವಿಳಂಬವಾಗಿ ಆರಂಭವಾಗಿದ್ದಕ್ಕೆ ಮತದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯಶವಂತಪುರದ ರೋಟರಿ ಮತಗಟ್ಟೆಯಲ್ಲಿ ಮತದಾರರು ಗಲಾಟೆ ಆರಂಭಿಸಿದ್ದು, ಮತದಾನ ವಿಳಂಬವಾಗುತ್ತಿರುವುದಕ್ಕೆ ಮತಗಟ್ಟೆ ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ.

ಉಳಿದಂತೆ ಬೆಳಿಗ್ಗೆ 7 ಗಂಟೆಯಿಂದ ರಾಜ್ಯದಲ್ಲಿ ಮತದಾನ ಆರಂಭವಾಗಿದ್ದು, ಸಂಜೆ 6 ಗಂಟೆಯವರೆಗೂ ಮತದಾನ ನಡೆಯಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...