alex Certify BIG NEWS: ಮಾಲಿನ್ಯದಲ್ಲಿ ದೆಹಲಿಯನ್ನು ಹಿಂದಿಕ್ಕಿದ ಮುಂಬೈ; ಜಗತ್ತಿನ 2ನೇ ಅತ್ಯಂತ ಕಲುಷಿತ ನಗರವೆಂಬ ಕುಖ್ಯಾತಿ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಮಾಲಿನ್ಯದಲ್ಲಿ ದೆಹಲಿಯನ್ನು ಹಿಂದಿಕ್ಕಿದ ಮುಂಬೈ; ಜಗತ್ತಿನ 2ನೇ ಅತ್ಯಂತ ಕಲುಷಿತ ನಗರವೆಂಬ ಕುಖ್ಯಾತಿ…..!

ವಾಣಿಜ್ಯ ನಗರಿ ಮುಂಬೈ ಭಾರತದ ಅತ್ಯಂತ ಕಲುಷಿತ ಸ್ಥಳವೆಂಬ ಕುಖ್ಯಾತಿಗೆ ಗುರಿಯಾಗಿದೆ. ಈ ಮೊದಲು ದೆಹಲಿ ಅತ್ಯಂತ ಮಾಲಿನ್ಯಯುಕ್ತ ನಗರ ಎನಿಸಿಕೊಂಡಿತ್ತು. ಈ ಪಟ್ಟವೀಗ ಮುಂಬೈ ನಗರದ ಪಾಲಾಗಿದೆ.

ಸ್ವಿಸ್ ಏರ್ ಟ್ರ್ಯಾಕಿಂಗ್ ಸೂಚ್ಯಂಕ IQAir  ಪ್ರಕಾರ ಮುಂಬೈ, ರಾಷ್ಟ್ರ ರಾಜಧಾನಿ ದೆಹಲಿಯನ್ನು ಹಿಂದಿಕ್ಕಿದ್ದು, ಜನವರಿ 29 ಮತ್ತು ಫೆಬ್ರವರಿ 8ರ ನಡುವೆ ವಿಶ್ವದ ಅತ್ಯಂತ ಮಾಲಿನ್ಯಯುಕ್ತ ನಗರಗಳ ಪೈಕಿ ಎರಡನೇ ಸ್ಥಾನದಲ್ಲಿದೆ.

ಮಾಲಿನ್ಯದ ವಿಚಾರದಲ್ಲಿ ದೆಹಲಿ ಹಾಗೂ ಮುಂಬೈ ಪರಸ್ಪರ ಪೈಪೋಟಿಗಿಳಿದಿವೆ. ಫೆಬ್ರವರಿ 2ರಂದು ಮೆಗಾಸಿಟಿ ಮುಂಬೈ ಅತಿ ಹೆಚ್ಚು ಕಲುಷಿತ ನಗರ ಎನಿಸಿಕೊಂಡಿತ್ತು. ನಂತರದ ದಿನಗಳಲ್ಲಿ ಮಾಲಿನ್ಯ ಕೊಂಚ ಕಡಿಮೆಯಾಗಿದ್ದರೂ ಮತ್ತೆ ಫೆಬ್ರವರಿ 8 ರಂದು ದೆಹಲಿಯನ್ನು ಹಿಂದಿಕ್ಕಿದೆ. ಭಾರತದ ಅತ್ಯಂತ ಕಲುಷಿತ ನಗರವೆಂಬ ಹಣೆಪಟ್ಟಿಗೆ ಗುರಿಯಾಗಿದೆ.

IQAir ಯುಎನ್‌ಇಪಿ ಮತ್ತು ಗ್ರೀನ್‌ಪೀಸ್‌ನೊಂದಿಗೆ ಸಹಕರಿಸುತ್ತದೆ ಮತ್ತು ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ (ಸಿಪಿಸಿಬಿ) ಡೇಟಾವನ್ನು ಬಳಸಿಕೊಂಡು ಭಾರತದಲ್ಲಿ ಗಾಳಿಯ ಗುಣಮಟ್ಟವನ್ನು ಅಳೆಯುತ್ತದೆ. CPCB ಅಂಕಿಅಂಶಗಳ ಪ್ರಕಾರ, ನವೆಂಬರ್‌ನಿಂದ ಜನವರಿವರೆಗೆ ಮುಂಬೈನಲ್ಲಿದೆ.

NEERI ಮತ್ತು IIT-B 2020ರ ಸಂಶೋಧನೆಯ ಪ್ರಕಾರ ಮುಂಬೈನ ಗಾಳಿಯಲ್ಲಿ ಶೇ.71ಕ್ಕಿಂತ ಹೆಚ್ಚು ಕಣಗಳಿಗೆ ರಸ್ತೆ ಅಥವಾ ನಿರ್ಮಾಣ ಧೂಳು ಕಾರಣವಾಗಿದೆ. ಉಳಿದವು ಕಾರ್ಖಾನೆಗಳು, ವಿದ್ಯುತ್ ಸ್ಥಾವರಗಳು, ವಿಮಾನ ನಿಲ್ದಾಣಗಳು ಮತ್ತು ತ್ಯಾಜ್ಯ ಡಂಪ್‌ಗಳಿಂದ ಉತ್ಪತ್ತಿಯಾಗುತ್ತವೆ. ಸದ್ಯ ಪೆಸಿಫಿಕ್ ಸಾಗರದ ಮೇಲ್ಮೈ ತಾಪಮಾನದಲ್ಲಿ ಅಸಾಮಾನ್ಯ ಇಳಿಕೆಯಾಗಿದ್ದು, ಪಶ್ಚಿಮ ಕರಾವಳಿಯಲ್ಲಿ ಗಾಳಿಯ ವೇಗವನ್ನು ಕಡಿಮೆ ಮಾಡಿದೆ. ಇದರಿಂದಾಗಿ ಮಾಲಿನ್ಯಕಾರಕಗಳ ಪ್ರಸರಣವನ್ನು ಕೊಂಚ ಕಡಿಮೆಯಾದಂತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...