alex Certify BIG NEWS: ಮನೆಗಳಿಗೆ ಹೊತ್ತಿಕೊಂಡ ಬೆಂಕಿ; 8 ಮಂದಿ ಸಜೀವ ದಹನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಮನೆಗಳಿಗೆ ಹೊತ್ತಿಕೊಂಡ ಬೆಂಕಿ; 8 ಮಂದಿ ಸಜೀವ ದಹನ

ಮನೆಗೆಳಿಗೆ ಬೆಂಕಿ ತಗುಲಿದ ಪರಿಣಾಮ 8 ಮಂದಿ ಸಜೀವ ದಹನವಾದ ಘಟನೆಯು ಪಶ್ಚಿಮ ಬಂಗಾಳದ ಭಿರ್ಭೂಮ್​ ಜಿಲ್ಲೆಯ ರಾಮ್​ಪುರಹತ್​​ನಲ್ಲಿ ಇಂದು ಮುಂಜಾನೆ ಸಂಭವಿಸಿದೆ.

ನಿನ್ನೆ ಮುಂಜಾನೆ ತೃಣಮೈಲ ಕಾಂಗ್ರೆಸ್​​ನ ಪಂಚಾಯ್ತಿ ಮಟ್ಟದ ನಾಯಕನ ಹತ್ಯೆ ನಡೆದ ಬಳಿಕ ಈ ಘಟನೆ ನಡೆದಿದೆ ಎಂದು ಡಿಜಿಪಿ ಮನೋಜ್​​ ಮಾಳವಿಯಾ ಕೋಲ್ಕತ್ತಾದಲ್ಲಿ ಮಾಹಿತಿ ನೀಡಿದ್ದಾರೆ. ಬೆಂಕಿಗಾಹುತಿಯಾಗಿದ್ದ ಮನೆಯೊಂದರಿಂದ ಏಳು ಸುಟ್ಟು ದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ. ಗಾಯಗೊಂಡಿರುವ ವ್ಯಕ್ತಿಯು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಮಾಳವಿಯಾ ಹೇಳಿದರು.

ಪರಿಸ್ಥಿತಿಯು ಈಗ ನಿಯಂತ್ರಣದಲ್ಲಿದೆ, ನಿನ್ನೆ ರಾತ್ರಿಯಿಂದ ಗ್ರಾಮದಲ್ಲಿ ಪೊಲೀಸ್​ ತಂಡವನ್ನು ನಿಯೋಜಿಸಿದ್ದೇವೆ. ಮನೆಗಳಿಗೆ ಹೇಗೆ ಬೆಂಕಿ ಹೊತ್ತಿಕೊಂಡಿದೆ ಹಾಗೂ ಈ ಅವಘಡಕ್ಕೂ ಮತ್ತು ಪಂಚಾಯತ್​​ ಉಪಾಧ್ಯಕ್ಷರ ಸಾವಿಗೂ ಏನಾದರೂ ಸಂಬಂಧವಿದೆಯೇ ಎಂಬುದರ ಬಗ್ಗೆ ನಾವು ತನಿಖೆ ನಡೆಸುತ್ತಿದ್ದೇವೆ ಎಂದು ಮಾಳವಿಯಾ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...