alex Certify BIG NEWS: ಮತ್ತೆ ಮಾಜಿ ಸಚಿವ ಡಾ. ಸುಧಾಕರ್ ವಿರುದ್ಧ ಕಿಡಿಕಾರಿದ ಎಂಟಿಬಿ ನಾಗರಾಜ್; ಆತನೂ ಸೋತ ನನ್ನನ್ನೂ ಸೋಲಿಸಿದ ಎಂದು ಆಕ್ರೋಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಮತ್ತೆ ಮಾಜಿ ಸಚಿವ ಡಾ. ಸುಧಾಕರ್ ವಿರುದ್ಧ ಕಿಡಿಕಾರಿದ ಎಂಟಿಬಿ ನಾಗರಾಜ್; ಆತನೂ ಸೋತ ನನ್ನನ್ನೂ ಸೋಲಿಸಿದ ಎಂದು ಆಕ್ರೋಶ

ಬೆಂಗಳೂರು: ಮಾಜಿ ಸಚಿವ ಎಂಟಿಬಿ ನಾಗರಾಜ್ ವಿಧಾನಸಭಾ ಚುನಾವಣೆ ಸೋಲಿನ ಆಘಾತದಿಂದ ಹೊರಬರಲಾಗದೇ ಮಾಜಿ ಸಚಿವ ಡಾ.ಕೆ. ಸುಧಾಕರ್ ವಿರುದ್ಧ ಪದೇ ಪದೇ ಆರೋಪಗಳನ್ನು ಮಾಡುತ್ತಲೇ ಇದ್ದಾರೆ. ಮಾಜಿ ಸಚಿವ ಸುಧಾಕರ್ ಅವರೇ ತನ್ನ ಸೋಲಿಗೆ ಕಾರಣ ಎಂದು ಮತ್ತೆ ಕಿಡಿಕಾರಿದ್ದಾರೆ.

ನಾನು ಕಾಂಗ್ರೆಸ್ ನಲ್ಲಿದ್ದಾಗ ಮೂರು ಬಾರಿ ಗೆದ್ದಿದ್ದೆ, ಬಿಜೆಪಿಗೆ ಬಂದು ಎರಡು ಬಾರಿ ಸೋತೆ. ಮಾಜಿ ಸಿಎಂ ಯಡಿಯೂರಪ್ಪ ಮಾತಿಗೆ ಗೌರವ ಕೊಟ್ಟು ನಾನು ಬಿಜೆಪಿ ಸೇರಿದ್ದೆ. ಬಿಜೆಪಿ ಸೇರಿದ ಬಳಿಕ ಎರಡು ಬಾರಿ ಸ್ಪರ್ಧಿಸಿ ಎರಡು ಬಾರಿಯೂ ಸೋತಿದ್ದೇನೆ ಎಂದು ಬೇಸರ ವ್ಯಕ್ತಪಡಿಸಿದರು.

ಬೆಂಗಳೂರು ಗ್ರಾಮಾಂತರ ಉಸ್ತುವಾರಿಯನ್ನು ಡಾ.ಕೆ. ಸುಧಾಕರ್ ಗೆ ಕೊಟ್ಟಿದ್ದರು. ಅವರು ಸಮರ್ಥವಾಗಿ ನಿಭಾಯಿಸಲಿಲ್ಲ. ಚುನಾವಣೆಯಲ್ಲಿ ಆತನೂ ಸೋತ. ನಮ್ಮನ್ನೂ ಸೋಲಿಸಿದ. ನನ್ನ ಹಾಗೂ ಚಿಂತಾಮಣಿ ಬಿಜೆಪಿ ಅಭ್ಯರ್ಥಿಯ ಸೋಲಿಗೆ ಸುಧಾಕರ್ ಕಾರಣ. ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರನ್ನು ಗಣನೆಗೆ ತೆಗೆದುಕೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...