alex Certify BIG NEWS: ಮಕ್ಕಳ ಸುರಕ್ಷಿತ ಪ್ರಯಾಣಕ್ಕಾಗಿ ಕೇಂದ್ರ ಸಾರಿಗೆ ಸಚಿವಾಲಯದಿಂದ ಮಹತ್ವದ ಪ್ರಸ್ತಾವನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಮಕ್ಕಳ ಸುರಕ್ಷಿತ ಪ್ರಯಾಣಕ್ಕಾಗಿ ಕೇಂದ್ರ ಸಾರಿಗೆ ಸಚಿವಾಲಯದಿಂದ ಮಹತ್ವದ ಪ್ರಸ್ತಾವನೆ

ಅಪ್ರಾಪ್ತ ಪ್ರಯಾಣಿಕರ ಪ್ರಯಾಣ ಸುರಕ್ಷತೆಯನ್ನು ಇನ್ನಷ್ಟು ಹೆಚ್ಚಿಸುವ ಸಲುವಾಗಿ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯವು ಬೈಕ್​ಗಳ ವೇಗಕ್ಕೆ ಮಿತಿಯ ಮೇಲೆ ಕಡಿವಾಣ ಹಾಕುವ ಬಗ್ಗೆ ಪ್ರಸ್ತಾವನೆಯನ್ನು ಸಲ್ಲಿಸಿದೆ.

ಟೀಂ ಇಂಡಿಯಾದ ಈ ಆಟಗಾರನಿಗೆ ಕೊನೆಯಾಗಲಿದೆ ಟಿ-20 ವಿಶ್ವಕಪ್…..?

ನಾಲ್ಕು ವರ್ಷದವರೆಗಿನ ಮಕ್ಕಳನ್ನು ಮೋಟಾರ್​ ಸೈಕಲ್​ನಲ್ಲಿ ಕರೆದುಕೊಂಡು ಹೋಗುವ ವೇಳೆ ಬೈಕ್​ಗಳ ವೇಗದ ಮಿತಿ ಪ್ರತಿ ಗಂಟೆಗೆ 40 ಕಿ.ಮೀ. ದಾಟುವಂತಿಲ್ಲ ಹಾಗೂ 9 ತಿಂಗಳಿನಿಂದ 4 ವರ್ಷ ಪ್ರಾಯದ ಮಕ್ಕಳು ಕ್ರ್ಯಾಶ್​ ಹೆಲ್ಮೆಟ್​ ಕಡ್ಡಾಯವಾಗಿ ಧರಿಸಬೇಕು ಎಂಬುದರ ಬಗ್ಗೆ ಪ್ರಸ್ತಾವನೆಯನ್ನು ಸಲ್ಲಿಸಿದೆ.

ಸಚಿವಾಲಯವು ಹೊರಡಿಸಿರುವ ಕರಡು ಅಧಿಸೂಚನೆಯ ಪ್ರಕಾರ, 4 ವರ್ಷದ ಒಳಗಿನ ಮಗುವನ್ನು ಮೋಟಾರ್​ ಬೈಕಿನಲ್ಲಿ ಸಾಗಿಸುವ ವೇಳೆ ವೇಗದ ಮಿತಿ ಗಂಟೆಗೆ 40 ಕಿಲೋಮೀಟರ್​ ಮೀರಬಾರದು. ಅಲ್ಲದೇ 9 ತಿಂಗಳಿನಿಂದ 4 ವರ್ಷದ ಮಕ್ಕಳಿಗೆ ಕಡ್ಡಾಯವಾಗಿ ಕ್ರ್ಯಾಶ್​ ಹೆಲ್ಮೆಟ್​ ಹಾಕಿಸಬೇಕು ಎಂದು ಸಚಿವಾಲಯ ಹೇಳಿದೆ.

ಕೆರೆಯಲ್ಲಿ ಈಜಲು ಹೋದವನ ಮೇಲೆ ಮೊಸಳೆ ದಾಳಿ: ಭಯಾನಕ ವಿಡಿಯೋ ವೈರಲ್

ಮಕ್ಕಳು ಧರಿಸುವ ಈ ಸುರಕ್ಷತಾ ಸರಂಜಾಮು ಕೋಟ್​ ರೀತಿಯಲ್ಲಿ ಇರಲಿದ್ದು ಇದನ್ನು ಮಗುವಿನ ಅಳತೆಗೆ ತಕ್ಕಂತೆ ಸರಿಹೊಂದಿಸಬಹುದಾಗಿದೆ. ಈ ಧಿರಿಸಿಗೆ ಅಳವಡಿಸಲಾದ ಪಟ್ಟಿಗಳನ್ನು ಚಾಲಕ ಧರಿಸಬೇಕು. ಈ ಮೂಲಕ ಮಗು ಬೈಕ್​ನಲ್ಲಿ ಸುರಕ್ಷಿತವಾಗಿ ಇರಲಿದೆ ಎಂದು ಸಚಿವಾಲಯ ವಿವರಿಸಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...