alex Certify ಕೆರೆಯಲ್ಲಿ ಈಜಲು ಹೋದವನ ಮೇಲೆ ಮೊಸಳೆ ದಾಳಿ: ಭಯಾನಕ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೆರೆಯಲ್ಲಿ ಈಜಲು ಹೋದವನ ಮೇಲೆ ಮೊಸಳೆ ದಾಳಿ: ಭಯಾನಕ ವಿಡಿಯೋ ವೈರಲ್

He Tried To Get Away": Swimmer Attacked By Alligator In Terrifying Videoಕೆರೆಯೊಂದರಲ್ಲಿ ಈಜುತ್ತಿದ್ದ ವ್ಯಕ್ತಿ ಮೇಲೆ ಮೊಸಳೆ ಬೆನ್ನಟ್ಟಿ ದಾಳಿ ಮಾಡಿರುವ ಭಯಾನಕ ಘಟನೆ ಬ್ರೆಜಿಲ್ ನಲ್ಲಿ ನಡೆದಿದೆ. ಈ ವಿಡಿಯೋವೊಂದು ಸದ್ಯ ವೈರಲ್ ಆಗಿದೆ.

ಹೆಂಡತಿ ಕಾಟಕ್ಕಿಂತ ಜೈಲು ವಾಸವೇ ಲೇಸು ಎಂದ ಭೂಪ…!

ಕ್ಯಾಂಪೊ ಗ್ರಾಂಡೆಯಲ್ಲಿರುವ ಲಾಗೊ ಡೊ ಅಮೋರ್ ಸರೋವರದಲ್ಲಿ ಈ ಘಟನೆ ನಡೆದಿದೆ. ಇಲ್ಲಿ ನೀರಿಗೆ ಇಳಿಯುವಂತಿಲ್ಲ ಎಂದಿದ್ದರೂ ಒಬ್ಬ ವ್ಯಕ್ತಿ ಕೆರೆಗೆ ಇಳಿದು, ಈಜಲು ಶುರು ಮಾಡಿದ್ದಾನೆ. ವಿಲಿಯನ್ ಕೇಟಾನೊ ಎಂಬಾತ ನಿಷೇಧಿತ ಕೆರೆಯಲ್ಲಿ ಈಜುತ್ತಿದ್ದ ವ್ಯಕ್ತಿಯನ್ನು ನೋಡಿದ ಕೂಡಲೇ ಅವರು ವಿಡಿಯೋ ಮಾಡಿದ್ದಾರೆ.

ಪ್ರತಿ ದಿನ ಕನಿಷ್ಠ 7 ಗಂಟೆ ನಿದ್ರೆ ಮಾಡದೇ ಇದ್ರೆ ಕಾಡತ್ತೆ ಈ ಸಮಸ್ಯೆ

ಸರೋವರದಲ್ಲಿನ ಮೊಸಳೆಯೊಂದು ಈಜುಗಾರನನ್ನು ಬೆನ್ನಟ್ಟುವ ದೃಶ್ಯವನ್ನು ವಿಡಿಯೋದಲ್ಲಿ ನೋಡಬಹುದು. ಸರೀಸೃಪದಿಂದ ತಪ್ಪಿಸಿಕೊಳ್ಳಲು ವ್ಯಕ್ತಿ ವೇಗವಾಗಿ ಈಜಲು ಪ್ರಯತ್ನಿಸಿದ್ದಾನೆ. ಆದರೂ ಆತನ ತೋಳನ್ನು ಕಚ್ಚಿ ಗಾಯಗೊಳಿಸಿದೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಆತ ಪಾರಾಗಿದ್ದಾನೆ.

ಸ್ಥಳೀಯ ವರದಿಗಳ ಪ್ರಕಾರ, ದಾಳಿಯ ನಂತರ ಜನರು ತುರ್ತು ಸೇವೆಗೆ ಕರೆ ಮಾಡಿದ್ದಾರೆ. ಈಜುಗಾರನ ಒಂದು ಕೈಗೆ ಸಣ್ಣಪುಟ್ಟ ಗಾಯಗಳನ್ನು ಹೊರತುಪಡಿಸಿ ಯಾವುದೇ ಗಾಯವಾಗಿಲ್ಲ ಎಂದು ತಿಳಿದು ಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...