alex Certify BIG NEWS: ಭಾರತೀಯ ಷೇರು ಮಾರುಕಟ್ಟೆಯಲ್ಲಿ ಐತಿಹಾಸಿಕ ದಾಖಲೆ; ಸಾರ್ವಕಾಲಿಕ ಏರಿಕೆ ಕಂಡ ಸೆನ್ಸೆಕ್ಸ್‌ ಮತ್ತು ನಿಫ್ಟಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಭಾರತೀಯ ಷೇರು ಮಾರುಕಟ್ಟೆಯಲ್ಲಿ ಐತಿಹಾಸಿಕ ದಾಖಲೆ; ಸಾರ್ವಕಾಲಿಕ ಏರಿಕೆ ಕಂಡ ಸೆನ್ಸೆಕ್ಸ್‌ ಮತ್ತು ನಿಫ್ಟಿ…!

ಭಾರತೀಯ ಷೇರು ಮಾರುಕಟ್ಟೆ ಸಾರ್ವಕಾಲಿಕ ಏರಿಕೆ ಕಂಡಿದೆ. ಸೆನ್ಸೆಕ್ಸ್ ಮತ್ತು ನಿಫ್ಟಿ ಮತ್ತೊಮ್ಮೆ ಸಾರ್ವಕಾಲಿಕ ಉನ್ನತ ಮಟ್ಟಕ್ಕೆ ತಲುಪಿವೆ. ಇದರೊಂದಿಗೆ ಹೊಸ ದಾಖಲೆ ಸಹ ನಿರ್ಮಾಣವಾಗಿದೆ. ಸೆನ್ಸೆಕ್ಸ್ ಚೊಚ್ಚಲ ಬಾರಿಗೆ 63 ಸಾವಿರದ ಗಡಿ ದಾಟಿದರೆ, ನಿಫ್ಟಿ 18800ರ ಗಡಿ ದಾಟಿದೆ. ಇದರೊಂದಿಗೆ ಇಂದಿನ ಮಾರುಕಟ್ಟೆಯಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡರಲ್ಲೂ ಏರಿಳಿತ ಕಂಡಿದೆ.

ಸೆನ್ಸೆಕ್ಸ್ ತನ್ನ ಸಾರ್ವಕಾಲಿಕ ಗರಿಷ್ಠ ಮಟ್ಟ 63,303.01 ಕ್ಕೆ ತಲುಪಿದೆ. ಸೆನ್ಸೆಕ್ಸ್ 417.81 (0.67%) ಪಾಯಿಂಟ್‌ ಏರಿಕೆಯೊಂದಿಗೆ 63,099.65ಕ್ಕೆ ಕೊನೆಗೊಂಡಿತು. ಸೆನ್ಸೆಕ್ಸ್‌ನ 52 ವಾರಗಳ ಕನಿಷ್ಠ ಬೆಲೆ 50,921.22 ಆಗಿದೆ. ಇತ್ತ ನಿಫ್ಟಿಯಲ್ಲೂ ಜಿಗಿತ ಕಂಡು ಬಂದಿದೆ. ನಿಫ್ಟಿ ಸಾರ್ವಕಾಲಿಕ ಗರಿಷ್ಠ 18,816.05 ಮಟ್ಟವನ್ನು ತಲುಪಿತ್ತು. 140.30 (0.75%) ಪಾಯಿಂಟ್‌ ಏರಿಕೆಯೊಂದಿಗೆ ನಿಫ್ಟಿ 18,758.35ಕ್ಕೆ ವಹಿವಾಟನ್ನು ಅಂತ್ಯಗೊಳಿಸಿದೆ. ನಿಫ್ಟಿಯ 52 ವಾರದ ಕನಿಷ್ಠ ಪಾಯಿಂಟ್‌ 15,183.40 ಆಗಿದೆ.

ಜಾಗತಿಕ ಮಾರುಕಟ್ಟೆಗಳ ಚಂಚಲತೆ ಕಡಿಮೆಯಾಗಿರುವುದೇ ಈ ಏರಿಕೆಗೆ ಕಾರಣ. ಆದರೆ ನಿಫ್ಟಿ ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕಗಳು ಇನ್ನೂ ಈ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕಿಂತ ಕೆಳಗಿವೆ. ಸಮಾಧಾನಕರ ಸಂಗತಿ ಎಂದರೆ ಮಾರುಕಟ್ಟೆಗೆ ಪ್ರತಿದಿನವೂ ಹೊಸ ಹೊಸ ವಲಯಗಳಿಂದ ಬೆಂಬಲ ಸಿಗುತ್ತಿದೆ. 2022ರ ದ್ವಿತೀಯಾರ್ಧದಲ್ಲಿ ಭಾರತೀಯ ಷೇರು ಮಾರುಕಟ್ಟೆಗಳಲ್ಲಿ ಉತ್ತಮ ಕಾರ್ಯಕ್ಷಮತೆ ಕಂಡು ಬಂದಿದೆ. ಪ್ರಬಲವಾದ ಮೂಲಭೂತ ಅಂಶಗಳು ಮತ್ತು ದೇಶೀಯ ನಿಧಿಗಳಿಂದ ಬಲವಾಗಿ ಬೆಂಬಲಿತವಾಗಿರುವುದರಿಂದ ಷೇರು ಮಾರುಕಟ್ಟೆ ಚೇತರಿಕೆಯ ದಿಶೆಯಲ್ಲಿ ಸಾಗುತ್ತಿದೆ. ಈ ಪ್ರವೃತ್ತಿಯು ಮುಂದುವರಿಯುವ ಸಾಧ್ಯತೆಯಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...