alex Certify BIG NEWS: ಭಾರತದ ಧಾರ್ಮಿಕ ಸ್ವಾತಂತ್ರ್ಯದ ಕುರಿತು ಆಸ್ಟ್ರೇಲಿಯಾ ವಿವಿ ವರದಿ; ಬಯಲಾಯ್ತು ಪಾಶ್ಚಿಮಾತ್ಯ ರಾಷ್ಟ್ರಗಳ ಷಡ್ಯಂತ್ರ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಭಾರತದ ಧಾರ್ಮಿಕ ಸ್ವಾತಂತ್ರ್ಯದ ಕುರಿತು ಆಸ್ಟ್ರೇಲಿಯಾ ವಿವಿ ವರದಿ; ಬಯಲಾಯ್ತು ಪಾಶ್ಚಿಮಾತ್ಯ ರಾಷ್ಟ್ರಗಳ ಷಡ್ಯಂತ್ರ…..!  

'भारत में धार्मिक स्वतंत्रता जीवंत और स्वस्थ', आस्ट्रेलिया की यूनिवर्सिटी ने पश्चिमी रिपोर्टों की खोली कलई

ಅಂತರಾಷ್ಟ್ರೀಯ ಮಾಧ್ಯಮದ ಒಂದು ವಿಭಾಗಕ್ಕೆ ವಿರುದ್ಧವಾಗಿ, ಆಸ್ಟ್ರೇಲಿಯಾದ ವಿಶ್ವವಿದ್ಯಾನಿಲಯವು ಭಾರತದ ಸಾಮಾಜಿಕ ರಚನೆಯ ಬಗ್ಗೆ ಅತ್ಯಂತ ಸಕಾರಾತ್ಮಕ ವರದಿಯನ್ನು ನೀಡಿದೆ. ಕ್ವಾಡ್ರಾಂಟ್ ಆನ್‌ಲೈನ್‌ನಲ್ಲಿ, ಸಿಡ್ನಿ ವಿಶ್ವವಿದ್ಯಾನಿಲಯದ ಅಸೋಸಿಯೇಟ್ ಪ್ರೊಫೆಸರ್ ಸಾಲ್ವಟೋರ್ ಬಾಬೋನ್ಸ್ ಅವರು, ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯವು ಜೀವಂತವಾಗಿರುವುದು ಮಾತ್ರವಲ್ಲ, ಆರೋಗ್ಯಕರ ರೂಪದಲ್ಲಿದೆ ಎಂದು ಬರೆದಿದ್ದಾರೆ.

ಪಾಶ್ಚಿಮಾತ್ಯ ದೇಶಗಳ ಷಡ್ಯಂತ್ರವನ್ನೂ ಬಯಲಿಗೆಳೆದ ಅವರು, ಪ್ರಜಾಸತ್ತಾತ್ಮಕ ಭಾರತ ಒಂದು ರೀತಿಯಲ್ಲಿ ಹಿಂದೂ ರಾಷ್ಟ್ರವಾಗಿದೆ ಎಂಬಂತೆ ತೋರಿಸಲಾಗುತ್ತಿದೆ ಎಂದು ಉಲ್ಲೇಖಿಸಿದ್ದಾರೆ.

ಭಾರತವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ

ಭಾರತವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ, ಅಲ್ಲಿ ವಿಶ್ವದ ಅರ್ಧದಷ್ಟು ಜನರು ಮುಕ್ತ ಮತ್ತು ನ್ಯಾಯಯುತ ಚುನಾವಣೆಗಳ ಮೂಲಕ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ಸಾಧ್ಯವಾಗುತ್ತದೆ ಎಂದು ಬಾಬನ್ಸ್‌ ಹೇಳಿದ್ದಾರೆ. ಭಾರತದಲ್ಲಿ ಆಡಳಿತಾರೂಢ ಬಿಜೆಪಿ, ಆರಾಧನೆ ಮತ್ತು ನಂಬಿಕೆಯ ಸ್ವರೂಪಗಳನ್ನು ಗುರುತಿಸುವುದರಿಂದ ಹಿಂದುತ್ವಕ್ಕೆ ಒತ್ತು ನೀಡುತ್ತದೆ ಎಂದು ಕ್ವಾಡ್ರೆಂಟ್ ಆನ್‌ಲೈನ್ ವರದಿ ಮಾಡಿದೆ.

ಹಿಂದೂಮತ್ತು ಭಾರತಪದಗಳು ಸಂಸ್ಕೃತದಿಂದ ಬಂದಿವೆ

ಹಿಂದೂ’ ಮತ್ತು ‘ಭಾರತ’ ಪದಗಳು ಮೂಲ ಭಾಷೆ ಸಂಸ್ಕೃತದಿಂದ ಬಂದಿವೆ. ಈ ವರ್ಷದ ಜನವರಿಯಲ್ಲಿ ಬಿಡುಗಡೆಯಾದ ಬಿಬಿಸಿ ಸಾಕ್ಷ್ಯಚಿತ್ರ ‘ಇಂಡಿಯಾ: ದಿ ಮೋದಿ ಕ್ವೆಶ್ಚನ್‌’ 2002ರ ಗುಜರಾತ್ ಗಲಭೆಗಳನ್ನು ತಪ್ಪುದಾರಿಗೆಳೆಯುವ ಸಂಗತಿಗಳೊಂದಿಗೆ ತೋರಿಸಿದೆ. ಈ ವಿವಾದಾತ್ಮಕ ಸಾಕ್ಷ್ಯಚಿತ್ರದಿಂದಾಗಿ, ಗುಜರಾತ್‌ನ ಅಂದಿನ ಮುಖ್ಯಮಂತ್ರಿ ನರೇಂದ್ರ ಮೋದಿಯವರಿಗೆ ಸುಪ್ರೀಂ ಕೋರ್ಟ್ ನೀಡಿದ್ದ ಕ್ಲೀನ್ ಚಿಟ್ ಕುರಿತು ಪ್ರಶ್ನೆಗಳು ಎದ್ದಿವೆ.

ಬ್ರಿಟನ್‌ನ ಉದ್ದೇಶಗಳ ಕುರಿತು ಸವಾಲು

ಬ್ರಿಟನ್‌ನ ಉದ್ದೇಶವನ್ನು ಪ್ರಶ್ನಿಸಿರುವ ಬಾಬೋನ್ಸ್, ಡಿಸೆಂಬರ್ 6, 2022 ರಂದು ಬರ್ಮಿಂಗ್‌ಹ್ಯಾಮ್‌ನಲ್ಲಿ ಮೌನವಾಗಿ ಪ್ರಾರ್ಥನೆ ಮಾಡಿದ್ದಕ್ಕಾಗಿ 45 ವರ್ಷದ ಮಹಿಳೆಯನ್ನು ಬಂಧಿಸಲಾಯಿತು. ಆದರೆ ಭಾರತದಲ್ಲಿ ವಿವಿಧ ಧರ್ಮಗಳ ಜನರು ಸಾರ್ವಜನಿಕ ಪ್ರದೇಶಗಳಲ್ಲಿ ದೇವರನ್ನು ಪೂಜಿಸಬಹುದು ಎಂದು ಹೇಳಿದ್ದಾರೆ.

ಬ್ರಿಟನ್ ಸಾಮಾಜಿಕ ದ್ವೇಷವನ್ನು ಬೆಳೆಸುತ್ತಿದೆ ಎಂಬ ಆರೋಪ ಸಹ ಕೇಳಿಬಂದಿದೆ. ವರದಿಯಲ್ಲಿ ಬ್ರಿಟನ್‌ ಅನ್ನು ಟಾರ್ಗೆಟ್‌ ಮಾಡಿರೋ ಬಾಬನ್ಸ್, ಯಾವುದೇ, ನಾಸ್ತಿಕ ಪ್ರವೃತ್ತಿಯ ಬ್ರಿಟನ್‌ ಧರ್ಮದ ಬಗ್ಗೆ ಸಾಮಾಜಿಕ ದ್ವೇಷವನ್ನು ಬೆಳೆಸುತ್ತಿದೆ ಎಂದು ಆರೋಪಿಸಿದ್ದಾರೆ.

ಸಿಡ್ನಿ ವಿಶ್ವವಿದ್ಯಾನಿಲಯದ ವರದಿಯ ಪ್ರಕಾರ ಭಾರತದಲ್ಲಿ ಜನರು ತಮ್ಮ ಧರ್ಮವನ್ನು ಅನುಸರಿಸಲು ಸ್ವತಂತ್ರರು. ಆದರೆ ಹಿಂದೂ-ಬಹುಸಂಖ್ಯಾತ ದೇಶದಲ್ಲಿ ಕೆಲವು ಮುಸ್ಲಿಮರಿಂದ ತಾರತಮ್ಯದ ದೂರುಗಳು ಕೇಳಿಬಂದಿವೆ. ಭಾರತವನ್ನು ಟಾರ್ಗೆಟ್‌ ಮಾಡಿದವರಲ್ಲಿ US ಸ್ಟೇಟ್ ಡಿಪಾರ್ಟ್‌ಮೆಂಟ್‌ನ ಇಂಟರ್‌ನ್ಯಾಶನಲ್ ರಿಲಿಜಿಯಸ್ ಫ್ರೀಡಮ್ (OIRF), ಅಮೆರಿಕ ಸರ್ಕಾರದ ಪ್ರಾಯೋಜಿತ ಯುನೈಟೆಡ್ ಸ್ಟೇಟ್ಸ್ ಕಮಿಷನ್ ಆನ್ ಇಂಟರ್‌ನ್ಯಾಶನಲ್ ರಿಲಿಜನ್ ಫ್ರೀಡಮ್ (USCIRF) ಮತ್ತು ಯುನೈಟೆಡ್ ನೇಷನ್ಸ್ ಆಫೀಸ್ ಆಫ್ ಹ್ಯೂಮನ್ ರೈಟ್ಸ್ (OHCHR) ಕೂಡ ಸೇರಿವೆ.

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...