alex Certify BIG NEWS: ಪ್ರಚಾರದ ವೇಳೆ ತಲೆ ಸುತ್ತಿ ಕುಸಿದ ಸಚಿವ ವಿ. ಸೋಮಣ್ಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಪ್ರಚಾರದ ವೇಳೆ ತಲೆ ಸುತ್ತಿ ಕುಸಿದ ಸಚಿವ ವಿ. ಸೋಮಣ್ಣ

ಚಾಮರಾಜನಗರ: ವರುಣಾ ಹಾಗೂ ಚಾಮರಾಜನಗರ ಎರಡು ಕ್ಷೇತ್ರಗಳಿಂದ ಚುನಾವಣಾ ಅಖಾಡಕ್ಕಿಳಿದಿರುವ ವಸತಿ ಸಚಿವ ವಿ. ಸೋಮಣ್ಣ ಅಬ್ಬರದ ಚುನಾವಣಾ ಪ್ರಚಾರ ನಡೆಸಿದ್ದಾರೆ.

ಚಾಮರಾಜನಗರ ಜಿಲ್ಲೆಯ ಕೋಡಿಮಳೆ ಗ್ರಾಮದಲ್ಲಿ ಸಚಿವ ಸೋಮಣ್ಣ ಪ್ರಚಾರಕ್ಕೆ ತೆರಳಿದ್ದ ವೇಳೆ ಬಿಸಿಲ ಝಳ, ಲೋ ಬಿಪಿಯಿಂದಾಗಿ ತಲೆ ಸುತ್ತಿ ಕುಸಿದ ಘಟನೆ ನಡೆದಿದೆ.

ತಕ್ಷಣ ಬೆಂಬಲಿಗರು ಗ್ರಾಮದಲ್ಲಿಯೇ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದು, ಚೇತರಿಸಿಕೊಂಡ ಬಳಿಕ ಸಚಿವರು ಮತ್ತೆ ಚುನಾವಣಾ ಪ್ರಚಾರ ಮುಂದುವರೆಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...