alex Certify BIG NEWS: ಪೋರ್ನ್ ಹಬ್​ ವೆಬ್ ​ಸೈಟ್​ ವಿರುದ್ಧ 34 ಕ್ಕೂ ಅಧಿಕ ಮಹಿಳೆಯರಿಂದ ದೂರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಪೋರ್ನ್ ಹಬ್​ ವೆಬ್ ​ಸೈಟ್​ ವಿರುದ್ಧ 34 ಕ್ಕೂ ಅಧಿಕ ಮಹಿಳೆಯರಿಂದ ದೂರು

ಕ್ಯಾಲಿಫೋರ್ನಿಯಾದ ಸರಿ ಸುಮಾರು ಮೂರು ಡಜನ್​ಗೂ ಅಧಿಕ ಮಹಿಳೆಯರು ವಯಸ್ಕರ ವಿಡಿಯೋ ವೆಬ್​ಸೈಟ್​​ ಪೋರ್ನ್​ ಹಬ್​ ವಿರುದ್ಧ ದೂರನ್ನ ದಾಖಲು ಮಾಡಿದ್ದಾರೆ. ಇದರ ಮೂಲ ಕಂಪನಿಯು ಮಕ್ಕಳನ್ನೂ ಸೇರಿದಂತೆ ಅನೇಕರ ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯದ ವಿಡಿಯೋಗಳಿಂದ ಲಾಭ ಗಳಿಸುತ್ತಿದೆ ಎಂದು ಆರೋಪಿಸಿದ್ದಾರೆ.

ವಿಶ್ವದ ಅತಿದೊಡ್ಡ ವಯಸ್ಕ ವಿಡಿಯೋ ವೆಬ್​ಸೈಟ್​ಗಳಲ್ಲಿ ಒಂದಾದ ಈ ಫೋರ್ನ್​ಹಬ್​​, ಮಕ್ಕಳ ಅಶ್ಲೀಲ ವಿಡಿಯೋಗಳಿಗೆ ಮಾರುಕಟ್ಟೆಯನ್ನೇ ಸೃಷ್ಟಿ ಮಾಡುತ್ತಿದೆ. ಅಲ್ಲದೇ ಸಮಾಜದ ಸ್ವಾಸ್ಥ್ಯವನ್ನ ಹಾಳು ಮಾಡುವಂತಹ ಲೈಂಗಿಕ ವಿಡಿಯೋಗಳನ್ನ ಶೇರ್​ ಮಾಡಿದೆ. ಇದರಿಂದ ಉಂಟಾದ ಹಾನಿಯನ್ನ ಕಂಪನಿಯೇ ಭರಿಸಬೇಕು ಎಂದು ದೂರದಾರರ ಪರ ವಕೀಲ ವಾದಿಸಿದ್ದಾರೆ.

ಕ್ಯಾಲಿಫೋರ್ನಿಯಾ ಯುಎಸ್​ ಡಿಸ್ಟ್ರಿಕ್ಟ್​ ಕೋರ್ಟ್​ ಸೆಂಟರ್ಲ್​ ಡಿಸ್ಟ್ರಿಕ್ಟ್​​ನಲ್ಲಿ ಗುರುವಾರ ಕೇಸ್​ನ್ನು ದಾಖಲಿಸಲಾಗಿದೆ. ಈ ಪ್ರಕರಣದಲ್ಲಿ ದೂರುದಾರರಿಗೆ ಉಂಟಾದ ಹಾನಿಗೆ ಮೈಂಡ್​ಗ್ರೀಕ್​ ಕಂಪನಿಯೇ ಹೊಣೆದಾರ ಆಗಬೇಕು ಎಂದು ಉಲ್ಲೇಖಿಸಲಾಗಿದೆ.

ಮಹಿಳೆಯರ ಪರ ವಕೀಲರಾದ ಮೈಕೆಲ್​ ಬೋವ್​, ಮೈಂಡ್​ಗೀಕ್​ ಕಂಪನಿಯು ನಷ್ಟದ ರೂಪವಾಗಿ ಮಹಿಳೆಯರಿಗೆ ನೂರಾರು ಮಿಲಿಯನ್​ ಪಾವತಿ ಮಾಡಲು ಕೋರ್ಟ್ ಆದೇಶ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ಈ ವಿಡಿಯೋ ಪೋಸ್ಟ್​ ಮಾಡಿ ವಾರಗಳೇ ಕಳೆದಿದ್ದರೂ ಸಹ ವಿಡಿಯೋವನ್ನ ಮೈಂಡ್​ಗೀಕ್​ ಕಂಪನಿ ಅಳಿಸಿ ಹಾಕಿರಲಿಲ್ಲ. ಈ ಸಮಯದಲ್ಲಿ ಅನೇಕರು ಇಂತಹ ಸಮಾಜಘಾತುಕ ವಿಡಿಯೋಗಳನ್ನ ಡೌನ್​ಲೋಡ್​ ಮಾಡಿದ್ದಾರೆ.

ಫೋರ್ನ್​ ಹಬ್​ ವಿರುದ್ಧ ಆರೋಪ ಮಾಡಿರುವ ಸೆರೆನಾ ಪ್ಲಾಯಿಟಿಸ್​ ಎಂಬವರು 2014ರಲ್ಲಿ ಈ ಫೋರ್ನ್​ ಹಬ್​ನಲ್ಲಿ ತಮ್ಮ ಅನುಮತಿಯಿಲ್ಲದೇ ತಾವು ಬಾಯ್​ಫ್ರೆಂಡ್​ ಜೊತೆ ಬೆತ್ತಲೆಯಾಗಿದ್ದ ವಿಡಿಯೋವನ್ನ ಹರಿಬಿಡಲಾಗಿತ್ತು ಎಂದು ಆರೋಪಿಸಿದ್ದಾರೆ. ಈ ರೀತಿಯ ವಿಡಿಯೋವನ್ನ ಹರಿಬಿಟ್ಟ ಸಮಯದಲ್ಲಿ ಸೆರೆನಾರ ವಯಸ್ಸು ಕೇವಲ 13 ವರ್ಷ ಆಗಿತ್ತು. ಸೆರೆನಾ ಈ ಬಗ್ಗೆ ಆರೋಪ ಮಾಡಿದ ಹಲವು ವಾರಗಳ ಬಳಿಕ ಫೋರ್ನ್ ಹಬ್​ ವಿಡಿಯೋ ಡಿಲೀಟ್​ ಮಾಡಿತ್ತು ಎಂದು ಹೇಳಿದ್ದಾರೆ.

ಇನ್ನು ಫೋರ್ನ್​ ಹಬ್​ ವಿರುದ್ಧ ಆರೋಪ ಮಾಡಿರುವ ಇನ್ನೊಬ್ಬ ದೂರುದಾರ ಮಹಿಳೆ, ವಿಶ್ವದ ಅತಿದೊಡ್ಡ ವಯಸ್ಕ ವಿಡಿಯೋ ವೆಬ್​ಸೈಟ್​ ಆಗಿರುವ ಫೋರ್ನ್ ಹಬ್​ ಮಕ್ಕಳ ಅಶ್ಲೀಲ ವಿಡಿಯೋ ಪೋಸ್ಟ್​ ಮಾಡೋದು ಹಾಗೂ ಅನುಮತಿಯನ್ನ ಪಡೆಯದೇ ವ್ಯಕ್ತಿಗಳ ಖಾಸಗಿ ಕ್ಷಣಗಳ ವಿಡಿಯೋವನ್ನ ಶೇರ್​ ಮಾಡುತ್ತಿದೆ ಎಂದು ಹೇಳಿದ್ದಾರೆ. ಹೀಗಾಗಿ ಮೈಂಡ್​ಗೀಕ್​ ಕಂಪನಿಯು ಈ ನಷ್ಟವನ್ನ ಭರಿಸಿಕೊಡಬೇಕು. ವೈಯಕ್ತಿಕ ಮನರಂಜನೆಯ ಹೆಸರಿನಲ್ಲಿ ಫೋರ್ನ್​ಹಬ್​ ಅಪರಾಧ ಕೃತ್ಯ ಎಸಗುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...