alex Certify BIG NEWS: ಪಿಎಫ್‌ಐ ಹಿಟ್ ಲಿಸ್ಟ್ ನಲ್ಲಿ RSS, ಬಿಜೆಪಿ ನಾಯಕರು; NIA ದಾಳಿಗೆ ಪ್ರತೀಕಾರಕ್ಕೆ ಸಂಚು; ಗುಪ್ತಚರ ಇಲಾಖೆ ಎಚ್ಚರಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಪಿಎಫ್‌ಐ ಹಿಟ್ ಲಿಸ್ಟ್ ನಲ್ಲಿ RSS, ಬಿಜೆಪಿ ನಾಯಕರು; NIA ದಾಳಿಗೆ ಪ್ರತೀಕಾರಕ್ಕೆ ಸಂಚು; ಗುಪ್ತಚರ ಇಲಾಖೆ ಎಚ್ಚರಿಕೆ

ನವದೆಹಲಿ: ಎನ್ ಐಎ ದಾಳಿ ಬೆನ್ನಲ್ಲೇ ದೇಶದಲ್ಲಿ ದುಷ್ಕೃತ್ಯವೆಸಗಲು ಪಿಎಫ್ ಐ ಸಂಚು ರೂಪಿಸಿದೆ ಎಂಬ ಆಘಾತಕಾರಿ ಮಾಹಿತಿ ಬಹಿರಂಗವಾಗಿದೆ. ತನಿಖಾ ಸಂಸ್ಥೆಗಳ ರೇಡ್ ನಿಂದಾಗಿ ಸಿಡಿದೆದ್ದಿರುವ ಪಿಎಫ್ಐ ಪ್ರತೀಕಾರಕ್ಕಾಗಿ ಹವಣಿಸುತ್ತಿದೆ ಎನ್ನಲಾಗಿದೆ.

ಆರ್ ಎಸ್ ಎಸ್ ಹಾಗೂ ಬಿಜೆಪಿ ಮುಖಂಡರನ್ನು ಹಾಗೂ ಸರ್ಕಾರಿ ಸಂಸ್ಥೆಗಳನ್ನು ಪ್ರಮುಖ ಟಾರ್ಗೆಟ್ ಮಾಡಿ ದಾಳಿ ನಡೆಸಲು ಪಿಎಫ್ಐ ಸಂಚು ರೂಪಿಸಿದೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.

ಈ ಹಿನ್ನೆಲೆಯಲ್ಲಿ ಬಿಜೆಪಿ, ಆರ್ ಎಸ್ ಎಸ್ ನಾಯಕರ ಮೇಲೆ ಏಕಾಂಗಿಯಾಗಿ ದಾಳಿ ನಡೆಸುವ ಸಾಧ್ಯತೆ ಇದ್ದು, ಆತ್ಮಾಹುತಿ ದಾಳಿ ನಡೆಸುವ ಸಾಧ್ಯತೆ ಕೂಡ ಇದೆ ಎನ್ನಲಾಗಿದೆ.

ಈ ನಿಟ್ಟಿನಲ್ಲಿ ಹಲವು ಬಿಜೆಪಿ ನಾಯಕರು, ಆರ್ ಎಸ್ ಎಸ್ ಪ್ರಮುಖರ ಭದ್ರತೆ ಹೆಚ್ಚಿಸಲಾಗಿದ್ದು, ಭದ್ರತಾ ನಿಯಮ ಪಾಲಿಸುವಂತೆ ಸೂಚಿಸಲಾಗಿದೆ. ಅಲ್ಲದೇ ದೇಶದಲ್ಲಿನ ಆರ್ ಎಸ್ ಎಸ್ ಶಾಖೆಗಳಿಗೂ ಭದ್ರತೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿದುಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...