alex Certify Big News: ಪರಿಸರಕ್ಕೆ ಮಾರಕವಾದ ಪ್ಲಾಸ್ಟಿಕ್ ಗೆ ಕೊನೆಗೂ ಸಿಗ್ತಿದೆ ಮುಕ್ತಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Big News: ಪರಿಸರಕ್ಕೆ ಮಾರಕವಾದ ಪ್ಲಾಸ್ಟಿಕ್ ಗೆ ಕೊನೆಗೂ ಸಿಗ್ತಿದೆ ಮುಕ್ತಿ..!

ಇಂದಿನ ದಿನಗಳಲ್ಲಿ ಪರಿಸರ ವ್ಯವಸ್ಥೆಗೆ ಪ್ಲಾಸ್ಟಿಕ್ ಬಹಳ ಅಪಾಯಕಾರಿಯಾಗಿದೆ. ಒಂದು ಸಣ್ಣ ಪ್ಲಾಸ್ಟಿಕ್ ತುಂಡು ಒಡೆಯಲು ಮತ್ತು ಕೊಳೆಯಲು 400 ವರ್ಷಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳಬಹುದು.

ಜರ್ಮನಿಯ ಸಂಶೋಧಕರ ತಂಡವು ಖುಷಿ ವಿಚಾರವನ್ನು ಹಂಚಿಕೊಂಡಿದ್ದಾರೆ. ಪ್ಲಾಸ್ಟಿಕ್ ಅನ್ನು ಒಂದು ದಿನಕ್ಕಿಂತ ಕಡಿಮೆ ಅವಧಿಯಲ್ಲಿ ಅದನ್ನು ಒಡೆಯುವ ಕಿಣ್ವವನ್ನು ಸಂಶೋಧಕರು ಕಂಡುಹಿಡಿದಿದ್ದಾರೆ. ಪಿಎಚ್ಎಲ್7 ಎಂದು ಕರೆಯಲ್ಪಡುವ ಕಿಣ್ವವು ಜರ್ಮನ್ ಸ್ಮಶಾನದ ಕಾಂಪೋಸ್ಟ್‌ನಲ್ಲಿ ಕಂಡುಬಂದಿದೆ. ಪಾಲಿಥಿಲೀನ್ ಟೆರೆಫ್ತಾಲೇಟ್ (ಪಿಇಟಿ) ಯೊಂದಿಗೆ ಕಿಣ್ವದ ಮೇಲೆ ಹಲವಾರು ಪರೀಕ್ಷೆಗಳನ್ನು ಮಾಡಿದ ನಂತರ, ಪಿಎಚ್ಎಲ್-7 ಕೇವಲ 16 ಗಂಟೆಗಳಲ್ಲಿ 90 ಪ್ರತಿಶತದಷ್ಟು ಪ್ಲಾಸ್ಟಿಕ್ ಅನ್ನು ಕೊಳೆಯಲು ಸಮರ್ಥವಾಗಿದೆ ಎಂದು ಕಂಡುಬಂದಿದೆ.

ಹೊಸದಾಗಿ ಪತ್ತೆಯಾದ ಪಿಎಚ್ಎಲ್-7 ಮತ್ತು 2016 ರಲ್ಲಿ ಜಪಾನ್‌ನಲ್ಲಿ ಕಂಡುಬಂದ ಪ್ಲಾಸ್ಟಿಕ್-ತಿನ್ನುವ ಕಿಣ್ವಗಳಲ್ಲಿ ಮುಂಚೂಣಿಯಲ್ಲಿರುವ ಎಲ್ಎಲ್ಸಿ ನಡುವೆ ಹೋಲಿಕೆ ಮಾಡಲಾಗಿದೆ. ಲೀಪ್ಜಿಗ್ ವಿಶ್ವವಿದ್ಯಾನಿಲಯದ ಸಂಶೋಧಕರು ಪಿಎಚ್ಎಲ್-7 ಎಲ್ಎಲ್ಸಿ ಕಿಣ್ವಕ್ಕಿಂತ ಎರಡು ಪಟ್ಟು ವೇಗವಾಗಿದೆ ಎಂದು ಕಂಡುಹಿಡಿದಿದ್ದಾರೆ.

ನಮ್ಮಲ್ಲಿ ಹಲವಾರು ಮಂದಿ ಎಲ್ಲೆಂದರಲ್ಲಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಎಸೆಯುತ್ತಿದ್ದಾರೆ. ಇದರಿಂದ ಪರಿಸರಕ್ಕೆ ಹಾನಿಯುಂಟಾಗುತ್ತಿದೆ ಎಂಬ ಆತಂಕದ ಸಮಯದಲ್ಲಿ ಸಂಶೋಧಕರ ಪಿಎಚ್ಎಲ್-7 ನ ಆವಿಷ್ಕಾರವು ನಿಟ್ಟುಸಿರುಬಿಟ್ಟಂತಾಗಿದೆ. ಈಗ ಅಭಿವೃದ್ಧಿಪಡಿಸಲಾದ ಬಯೋಕ್ಯಾಟಲಿಸ್ಟ್ ಬಳಸಿದ ಪಿಇಟಿ ಆಹಾರ ಪ್ಯಾಕೇಜಿಂಗ್‌ನ ಕ್ಷಿಪ್ರ ವಿಭಜನೆಯಲ್ಲಿ ಮತ್ತು ಪರಿಸರ ಸ್ನೇಹಿ ಮರುಬಳಕೆ ಪ್ರಕ್ರಿಯೆಯಲ್ಲಿ ಅದರ ಸಮರ್ಥನೀಯ ಬಳಕೆಯಲ್ಲಿ ಹೆಚ್ಚು ಪರಿಣಾಮಕಾರಿಯಾಗಿದೆ ಎಂದು ತೋರಿಸಲಾಗಿದೆ. ಇದರಲ್ಲಿ ಕೊಳೆಯುವ ಉತ್ಪನ್ನಗಳಿಂದ ಹೊಸ ಪ್ಲಾಸ್ಟಿಕ್ ಅನ್ನು ಉತ್ಪಾದಿಸಬಹುದು ಎಂದು ಸಂಶೋಧಕರು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...