alex Certify BIG NEWS: ನೊಂದ PSI ಅಭ್ಯರ್ಥಿಗಳಿಂದ ಪ್ರಧಾನಿಗೆ ರಕ್ತದಲ್ಲಿ ಪತ್ರ; ನ್ಯಾಯ ಕೊಡಿಸದಿದ್ದರೆ ಉಗ್ರರ ಜತೆ ಕೈಜೋಡಿಸುತ್ತೇವೆ ಎಂದು ಎಚ್ಚರಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ನೊಂದ PSI ಅಭ್ಯರ್ಥಿಗಳಿಂದ ಪ್ರಧಾನಿಗೆ ರಕ್ತದಲ್ಲಿ ಪತ್ರ; ನ್ಯಾಯ ಕೊಡಿಸದಿದ್ದರೆ ಉಗ್ರರ ಜತೆ ಕೈಜೋಡಿಸುತ್ತೇವೆ ಎಂದು ಎಚ್ಚರಿಕೆ

ಬೆಂಗಳೂರು: ಪಿಎಸ್ಐ ಹುದ್ದೆ ನೇಮಕಾತಿ ಅಕ್ರಮದಿಂದ ನೊಂದ ಪ್ರಾಮಾಣಿಕ ಅಭ್ಯರ್ಥಿಗಳು ಪ್ರಧಾನಿ ನರೇಂದ್ರ ಮೋದಿಯವರಿಗೆ ರಕ್ತದಲ್ಲಿ ಪತ್ರ ಬರೆದಿದ್ದಾರೆ.

2 ಪುಟಗಳ ಪತ್ರ ಬರೆದಿರುವ ನೊಂದ ಅಭ್ಯರ್ಥಿಗಳು ತಮಗೆ ನ್ಯಾಯ ಕೊಡಿಸುವಂತೆ ಮನವಿ ಮಾಡಿದ್ದಾರೆ. ಪತ್ರದಲ್ಲಿ ತಮ್ಮ ಹೆಸರನ್ನು ನಮೂದಿಸದಿರುವ ಅಭ್ಯರ್ಥಿಗಳು ಪಿಎಸ್ಐ ಆಯ್ಕೆಯಲ್ಲಿ ಮೋಸ ಹೋದವರಿಗೆ ನ್ಯಾಯ ಒದಗಿಸಬೇಕು. ಅನ್ಯಾಯ ಮಾಡಿದವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

2021ರಲ್ಲಿ ನಡೆದ ಎಫ್ ಡಿ ಎ ಪರೀಕ್ಷೆಯಲ್ಲಿಯೂ ಅಕ್ರಮವಾಗಿದೆ. ಅದನ್ನು ಕೂಡ ತನಿಖೆ ಮಾಡಿ ನ್ಯಾಯ ಕೊಡಿಸಬೇಕು. ನ್ಯಾಯ ಕೊಡಿಸದಿದ್ದರೆ ಟೆರರಿಸ್ಟ್ ಗಳ ಜತೆ ಕೈಜೋಡಿಸುತ್ತೇವೆ. ಉಗ್ರರ ಬಳಿ ಹಣ ಪಡೆದು ಬಡ ಕುಟುಂಬಕ್ಕೆ ನೆರವಾಗುತ್ತೇವೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...