alex Certify BIG NEWS: ನೆಟ್‌ಫ್ಲಿಕ್ಸ್‌ನಲ್ಲಿ ಬಹು ದೊಡ್ಡ ಬದಲಾವಣೆ; ಸ್ನೇಹಿತರಿಗೆ ಪಾಸ್ವರ್ಡ್‌ ನೀಡಿದರೆ ತಕ್ಷಣ ಕಡಿತವಾಗುತ್ತೆ ಹಣ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ನೆಟ್‌ಫ್ಲಿಕ್ಸ್‌ನಲ್ಲಿ ಬಹು ದೊಡ್ಡ ಬದಲಾವಣೆ; ಸ್ನೇಹಿತರಿಗೆ ಪಾಸ್ವರ್ಡ್‌ ನೀಡಿದರೆ ತಕ್ಷಣ ಕಡಿತವಾಗುತ್ತೆ ಹಣ…..!

ನೆಟ್‌ಫ್ಲಿಕ್ಸ್ ಅನ್ನು ಫ್ರೀಯಾಗಿ ಬಳಸುವವರಿಗೆ ಕೆಟ್ಟ ಸುದ್ದಿಯೊಂದಿದೆ. ನೆಟ್‌ಫ್ಲಿಕ್ಸ್ ಬಳಕೆದಾರರು ತಮ್ಮ ಖಾತೆಯ ಪಾಸ್‌ವರ್ಡ್ ಅನ್ನು ಯಾರೊಂದಿಗಾದರೂ ಹಂಚಿಕೊಂಡರೆ ಸಮಸ್ಯೆಯಾಗೋದು ಖಚಿತ. ಯಾಕಂದ್ರೆ ನೆಟ್‌ಫ್ಲಿಕ್ಸ್ ಈ ವರ್ಷ ಏಪ್ರಿಲ್‌ನಲ್ಲಿ ಪಾಸ್‌ವರ್ಡ್ ಹಂಚಿಕೆಯನ್ನು ಕೊನೆಗೊಳಿಸಲಿದೆ. 100 ಮಿಲಿಯನ್‌ಗಿಂತಲೂ ಹೆಚ್ಚು ಕುಟುಂಬಗಳು ಪ್ರಸ್ತುತ ಖಾತೆ ಹಂಚಿಕೆಯನ್ನು ಬಳಸುತ್ತಿವೆ. ಒಂದು ಖಾತೆ ಒಬ್ಬ ಬಳಕೆದಾರರಿಗೆ ಮಾತ್ರ ಸೀಮಿತವಾಗಿರಬೇಕು ಎಂಬುದು ಕಂಪನಿಯ ಉದ್ದೇಶ.

ಹಾಗಾಗಿ ಇನ್ಮುಂದೆ ಬೆಟ್‌ಫ್ಲಿಕ್ಸ್‌ ಖಾತೆಯ ಪಾಸ್ವರ್ಡ್‌ ಅನ್ನು ಬೇರೆಯವರಿಗೆ ನೀಡಿದರೆ ಅದಕ್ಕೆ ಪ್ರತಿಯಾಗಿ ಹಣ ಪಾವತಿಸಬೇಕಾಗುತ್ತದೆ. ನೆಟ್‌ಫ್ಲಿಕ್ಸ್‌, ತನ್ನ ಫ್ಲಾಟ್‌ಫಾರ್ಮ್ ಸದಸ್ಯರಿಗೆ ಪ್ರೊಫೈಲ್‌ಗಳನ್ನು ಹೊಸ ಖಾತೆಗೆ ವರ್ಗಾಯಿಸುವ ಆಯ್ಕೆಯನ್ನು ನೀಡಿದೆ. ನೆಟ್‌ಫ್ಲಿಕ್ಸ್ ಏಪ್ರಿಲ್ 2023 ರಿಂದ ಪ್ಯಾಡ್ ಹಂಚಿಕೆ ವೈಶಿಷ್ಟ್ಯವನ್ನು ಹೊರತರುವುದಾಗಿ ಘೋಷಿಸಿದೆ. ಈ ಅಪ್ಲಿಕೇಶನ್‌ಗೆ ಆಯ್ಕೆಯನ್ನು ಸೇರಿಸಲಿದೆ. ಸ್ನೇಹಿತರೊಂದಿಗೆ ಅಥವಾ ಬೇರೆ ಯಾರೊಂದಿಗಾದರೂ ಪಾಸ್ವರ್ಡ್‌ ಹಂಚಿಕೊಳ್ಳಲು ಅದಕ್ಕೆ ಹಣ ಪಾವತಿಸುವ ಆಯ್ಕೆಯನ್ನೂ ನೆಟ್‌ಫ್ಲಿಕ್ಸ್‌ ನೀಡಲಿದೆ.

ಹಣ ಪಾವತಿಸಿದ ಬಳಿಕ ಟಿವಿ ಅಥವಾ ಮೊಬೈಲ್‌ನಲ್ಲಿ ನೆಟ್‌ಫ್ಲಿಕ್ಸ್‌ ವಿಡಿಯೋಗಳನ್ನು ಸ್ಟ್ರೀಮ್ ಮಾಡಬಹುದು. IP ವಿಳಾಸ, ಡಿವೈಸ್‌ ID ಮತ್ತು ಖಾತೆ ಚಟುವಟಿಕೆಯ ಮೂಲಕ ನೆಟ್‌ಫ್ಲಿಕ್ಸ್ ಹೊಸ ಪಾಸ್‌ವರ್ಡ್ ಹಂಚಿಕೆ ನಿಯಮವನ್ನು ಕಾರ್ಯಗತಗೊಳಿಸುತ್ತದೆ. ಭಾರತದಲ್ಲಿ 149 ರೂಪಾಯಿ, 199, 499 ಮತ್ತು 649 ರೂಪಾಯಿ ಬೆಲೆಯ ನಾಲ್ಕು ಪ್ಲಾನ್‌ಗಳನ್ನು ನೆಟ್‌ಫ್ಲಿಕ್ಸ್‌ ನೀಡುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...