alex Certify BIG NEWS: ನಾಗ, ತಿಮ್ಮ, ಬೊಮ್ಮ… ಇವರೆಲ್ಲ ಯಾರು ಎಂದು ನನಗೆ ಗೊತ್ತಿಲ್ಲ ಎಂದ ಸಚಿವ ಸೋಮಣ್ಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ನಾಗ, ತಿಮ್ಮ, ಬೊಮ್ಮ… ಇವರೆಲ್ಲ ಯಾರು ಎಂದು ನನಗೆ ಗೊತ್ತಿಲ್ಲ ಎಂದ ಸಚಿವ ಸೋಮಣ್ಣ

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ರೌಡಿ ರಾಜಕೀಯ ಕೆಸರೆರಚಾಟ ಮುಂದುವರೆದಿದೆ. ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗ ವಸತಿ ಸಚಿವ ವಿ.ಸೋಮಣ್ಣ ನಿವಾಸಕ್ಕೆ ಭೇಟಿ ನೀಡಿರುವುದು ಹೊಸ ಚರ್ಚೆಗೆ ಕಾರಣವಾಗಿದ್ದು, ಬಿಜೆಪಿ ರೌಡಿ ಮೋರ್ಚಾ ಸ್ಥಾಪನೆಗೆ ಮುಂದಾಗಿದೆ ಎಂದು ಕಾಂಗ್ರೆಸ್ ಕಿಡಿಕಾರಿದೆ.

ರೌಡಿ ನಾಗ ವಿ.ಸೋಮಣ್ಣ ಭೇಟಿಗೆ ಕಾರಣವೇನು ಎಂದು ಸರಣಿ ಟ್ವೀಟ್ ಮೂಲಕ ಪ್ರಶ್ನಿಸಿದ್ದು, ಈ ಬಗ್ಗೆ ಉತ್ತರ ನೀಡಿರುವ ಸಚಿವ ಸೋಮಣ್ಣ, ವಿಲ್ಸನ್ ಗಾರ್ಡನ್ ನಾಗ ಯಾರು ಎಂದೇ ನನಗೆ ಗೊತ್ತಿಲ್ಲ ಎಂದು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಸಚಿವರು, ನಾಗ ಯಾರು ಅಂತ ನನಗೆ ಗೊತ್ತಿಲ್ಲ. ನಾನು ಆತನನ್ನು ಭೇಟಿಯೂ ಆಗಿಲ್ಲ. ಒಂದೇ ಒಂದು ನಿಮಿಷಾನೂ ನಾನು ಅವನನ್ನು ನೋಡಿಲ್ಲ. ಪ್ರತಿದಿನ ಸಾವಿರಾರು ಜನರು ನನ್ನ ಭೇಟಿಗೆ ಬರುತ್ತಾರೆ. ಹೀಗಿರುವಾಗ ನಾಗ ಯಾರು? ತಿಮ್ಮ ಯಾರು? ಬೊಮ್ಮ ಯಾರು ಅಂತ ನಾನು ಗಮನಿಸಲ್ಲ. ಆತ ಯಾರು ಎಂದೇ ಗೊತ್ತಿಲ್ಲ ಎಂದು ಹೇಳಿದರು.

ವಿಲ್ಸನ್ ಗಾರ್ಡನ್ ನಾಗನ ಜೊತೆ ನನಗೆ ಯಾವುದೇ ವ್ಯವಹಾರವೂ ಇಲ್ಲ, ಅನಗತ್ಯವಾಗಿ ಹೇಳುವುದು ತಪ್ಪು. ನಾನು ಯಾವತ್ತೂ ಬೇರೆ ಕೆಲಸ ಮಾಡಿದವನಲ್ಲ, 55 ವರ್ಷಗಳಿಂದ ರಾಜಕೀಯ ಮಾಡುತ್ತಿದ್ದೇನೆ. 11 ಚುನಾವಣೆ ಎದುರಿಸಿದ್ದೇನೆ. ನನ್ನ ವಯಸ್ಸಿಗೆ ಬೆಲೆ ಕೊಡಬೇಕು. ಹೀಗೆಲ್ಲ ಹೇಳಿದರೆ ನನಗೆ ಮಾನಸಿಕವಾಗಿ ನೋವಾಗುತ್ತೆ. ನಾನು ನಾಗನನ್ನು ನೋಡಿಯೂ ಇಲ್ಲ, ಮಾತಾಡಿಯೂ ಇಲ್ಲ ಎಂದು ಸ್ಪಷ್ಟಪಡಿಸಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...