alex Certify BIG NEWS: ನನ್ನ ತಂಟೆಗೆ ಬಂದ್ರೆ ಹುಷಾರ್; ಸಿದ್ದರಾಮಯ್ಯಗೆ ಮತ್ತೆ ಎಚ್ಚರಿಕೆ ನೀಡಿದ HDK | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ನನ್ನ ತಂಟೆಗೆ ಬಂದ್ರೆ ಹುಷಾರ್; ಸಿದ್ದರಾಮಯ್ಯಗೆ ಮತ್ತೆ ಎಚ್ಚರಿಕೆ ನೀಡಿದ HDK

ರಾಮನಗರ: ಸಿದ್ದರಾಮಯ್ಯ ಅವರ ಹಂಗಿನಲ್ಲಿ ನಾನು ರಾಜಕಾರಣಕ್ಕೆ ಬಂದಿಲ್ಲ, 1996ರಲ್ಲಿ ಜನಪ್ರತಿನಿಧಿಯಾಗಿ ಆಯ್ಕೆಯಾಗಿದ್ದೆ. ಸಿದ್ದರಾಮಯ್ಯ ಧರಂಸಿಂಗ್ ಕಾಲದಲ್ಲೇ ಜೆಡಿಎಸ್ ಮುಗಿಸಲು ಹೊರಟಿದ್ದರು ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ಮುಂದುವರೆಸಿದ್ದಾರೆ.

ರಾಮನಗರದಲ್ಲಿ ಮಾತನಾಡಿದ ಕುಮಾರಸ್ವಾಮಿ, ವಿಪಕ್ಷ ನಾಯಕನ ಹುದ್ದೆಗೆ ನಾನು ಅಪಮಾನ ಮಾಡಿಲ್ಲ. ಸಿದ್ದರಾಮಯ್ಯನವರಂತ ವ್ಯಕ್ತಿಯಿಂದ ವಿಪಕ್ಷ ನಾಯಕ ಸ್ಥಾನಕ್ಕೆ ಅಪಮಾನ ಎಂದು ಹೇಳಿದ್ದೇನೆ. ದೇವೇಗೌಡರು ವಿಪಕ್ಷನಾಯಕನಾಗಿ ಸಮರ್ಥವಾಗಿ ಕೆಲಸ ಮಾಡಿದ್ದರು. ಅವರಂತೆ ಕೆಲಸ ಮಾಡಲು ಸಿದ್ದರಾಮಯ್ಯನವರಿಗೆ ಸಾಧ್ಯವೇ? ಎಂದು ಪ್ರಶ್ನಿಸಿದರು.

ತಮನ್ನಾ ಭಾಟಿಯಾ ಲೇಟೆಸ್ಟ್ ಫೋಟೋಶೂಟ್

ಸಿದ್ದರಾಮಯ್ಯನವರು ನನ್ನ ಬಗ್ಗೆ ಹಾಗೂ ಜೆಡಿಎಸ್ ಬಗ್ಗೆ ಲಘುವಾಗಿ ಮಾತನಾಡುವುದನ್ನು ಮೊದಲು ನಿಲ್ಲಿಸಲಿ. ಎಲ್ಲಿಯವರೆಗೆ ನಮ್ಮ ಬಗ್ಗೆ ಮಾತನಾಡುತ್ತಿರೋ ಅಲ್ಲಿಯವರೆಗೂ ನಾನು ನಿಮ್ಮ ಬಗ್ಗೆ ಮಾತನಾಡುವುದನ್ನು ಬಿಡುವುದಿಲ್ಲ. ಯಾರೋ ಕಟ್ಟಿರುವ ಹುತ್ತದಲ್ಲಿ ಬಂದು ಸೇರಿಕೊಳ್ಳುವ ನೀವು ನನ್ನ ಬಗ್ಗೆ ಮಾತನಾಡುವ ಅಗತ್ಯವೇನು?, ಜಾತಿ ಗಣತಿಗಾಗಿ 170 ಕೋಟಿ ಕೊಡುವ ಬದಲು ಬಡವರಿಗೆ ಆ ಹಣ ನೀಡಿದ್ದರೆ ಸಿದ್ದರಾಮಯ್ಯನವರನ್ನು ನೆನಪಿಸಿಕೊಳ್ಳುತ್ತಿದ್ದರು. ಇವರ ರಾಜಕೀಯ ನಾಟಕ್ಕಕೆ ಜಾತಿ ಗಣತಿ ಬಳಸಿಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದರು.

ಪೇಟಿಎಂ ಬಳಕೆದಾರರಿಗೆ ಖುಷಿ ಸುದ್ದಿ….! ಇನ್ಮುಂದೆ ಆಧಾರ್, ಚಾಲನಾ ಪರವಾನಗಿ ಜೊತೆಗಿಟ್ಟುಕೊಳ್ಳಬೇಕಾಗಿಲ್ಲ

ಸಿಎಂ ಆದವರು ಹೋಟೆಲ್ ನಲ್ಲಿ ಕುಳಿತು ಆಡಳಿತ ನಡೆಸುತ್ತಾರಾ? ಎಂದು ಪ್ರಶ್ನಿಸಿದ್ದಾರೆ, ಮೈತ್ರಿ ಸರ್ಕಾರದಲ್ಲಿ ಸಿಎಂ ಆಗಿದ್ದಾಗ ನಾನು ತಾಜ್ ವೆಸ್ಟ್ ಎಂಡ್ ನಲ್ಲಿ ಮಜಾ ಮಾಡಲು ಇರಲಿಲ್ಲ. ರೈತರ ಸಾಲ ಮನ್ನಾಕ್ಕಾಗಿ ಕೆಲಸ ಮಾಡುತ್ತಿದ್ದೆ. ಸಿದ್ದರಾಮಯ್ಯನವರಿಂದಾಗಿ ನಾನು ರೈತರ ಸಾಲ ಮನ್ನಾ ಮಾಡಿಲ್ಲ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿಸಿದ್ದೆ ಎಂದರು.

ಹಿಂದೆ ಅಬಕಾರಿ ಇಲಾಖೆ ಕೊಟ್ಟಿಲ್ಲ ಎಂದು ಸಿದ್ದರಾಮಯ್ಯ ಮುನಿಸಿಕೊಂಡು ಮನೆಯಲ್ಲಿ ಮಲಗಿದ್ದರು, ಧರಂಸಿಂಗ್ ಕಾಲದಲ್ಲೇ ಜೆಡಿಎಸ್ ಮುಗಿಸಲು ಹೊರಟಿದ್ರು, ಅಹಿಂದ ಹೆಸರಲ್ಲಿ ನಮ್ಮ ಪಕ್ಷವನ್ನೇ ಮುಗಿಸಲು ಯತ್ನಿಸಿದ್ದವರು ಈ ವಿಚಾರ ಗೊತ್ತಾಗುತ್ತಿದ್ದಂತೆ ನಾನು ಪಕ್ಷ ಉಳಿಸಿದೆ ಎಂದು ಸಿದ್ದರಾಮಯ್ಯ ವಿರುದ್ಧ ಗುಡುಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...