alex Certify ಪೇಟಿಎಂ ಬಳಕೆದಾರರಿಗೆ ಖುಷಿ ಸುದ್ದಿ….! ಇನ್ಮುಂದೆ ಆಧಾರ್, ಚಾಲನಾ ಪರವಾನಗಿ ಜೊತೆಗಿಟ್ಟುಕೊಳ್ಳಬೇಕಾಗಿಲ್ಲ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪೇಟಿಎಂ ಬಳಕೆದಾರರಿಗೆ ಖುಷಿ ಸುದ್ದಿ….! ಇನ್ಮುಂದೆ ಆಧಾರ್, ಚಾಲನಾ ಪರವಾನಗಿ ಜೊತೆಗಿಟ್ಟುಕೊಳ್ಳಬೇಕಾಗಿಲ್ಲ

ಭಾರತ ಬದಲಾಗ್ತಿದೆ. ಭಾರತದ ಡಿಜಿಟಲ್ ನತ್ತ ಮುಖ ಮಾಡಿದೆ. ಬ್ಯಾಂಕ್, ಅಂಚೆ ಸೇವೆಯಿಂದ ಹಿಡಿದು ಎಲ್ಲ ಸೇವೆಗಳು ಡಿಜಿಟಲ್ ಆಗ್ತಿವೆ. ಡಿಜಿಟಲ್ ಪಾವತಿ ಮತ್ತು ಹಣಕಾಸು ಸೇವೆಗಳ ಕಂಪನಿ ಪೇಟಿಎಂ ಬಳಕೆದಾರರಿಗೆ ಖುಷಿ ಸುದ್ದಿ ನೀಡಿದೆ. ಇನ್ಮುಂದೆ ಪೇಟಿಎಂ ಬಳಕೆದಾರರು ಡಿಜಿಲಾಕರ್ ಬಳಸಬಹುದಾಗಿದೆ.

ಟಿ-20 ವಿಶ್ವಕಪ್: ಹೊಸ ಜರ್ಸಿಯಲ್ಲಿ ಟೀಂ ಇಂಡಿಯಾ ಆಟಗಾರರು

ಕಂಪನಿ ತನ್ನ ಮಿನಿ-ಆಪ್ ಸ್ಟೋರ್ ನಲ್ಲಿ ಡಿಜಿಲಾಕರ್ ಸೇರಿಸ್ತಿದೆ. ಡಿಜಿಲಾಕರ್ ಒಂದು ರೀತಿಯ ವರ್ಚುವಲ್ ಲಾಕರ್ ಆಗಿದೆ. ಇದ್ರ ನಂತ್ರ ಪೇಟಿಎಂ ಬಳಕೆದಾರರು ತಮ್ಮ ಎಲ್ಲಾ ಸರ್ಕಾರಿ ದಾಖಲೆಗಳನ್ನು ಡಿಜಿಲಾಕರ್ ನಲ್ಲಿ ಇಡಬಹುದು. ವಿಶೇಷವೆಂದ್ರೆ ಇದಕ್ಕೆ ಇಂಟರ್ನೆಟ್ ಅವಶ್ಯಕತೆಯಿಲ್ಲ. ಬಳಕೆದಾರರು ಆಫ್‌ಲೈನ್‌ನಲ್ಲಿರುವಾಗಲೂ ಇದನ್ನು ಬಳಸಬಹುದು.

ವರುಣನ ಅಬ್ಬರದ ನಡುವೆಯೇ ಈ ದೇಗುಲದಲ್ಲಿ ನಡೆದಿದೆ ಅಚ್ಚರಿ ಘಟನೆ..!

ಆಧಾರ್, ಚಾಲನಾ ಪರವಾನಿಗೆಯನ್ನು ಜೇಬಿನಲ್ಲಿಟ್ಟುಕೊಂಡು ಹೋಗಬೇಕಾಗಿಲ್ಲ. ಡಿಜಿಲಾಕರ್ ನಲ್ಲಿ ಅದನ್ನು ಸುರಕ್ಷಿತವಾಗಿಡಬಹುದು. ವಿಮೆ ದಾಖಲೆಗಳನ್ನು ಕೂಡ ನೀವು ಡಿಜಿಲಾಕರ್ ನಲ್ಲಿ ಇಡಬಹುದು.

ಪೇಟಿಎಂ ಮೂಲಕ ಕೊರೊನಾ ಲಸಿಕೆಯನ್ನು ಕಾಯ್ದಿರಿಸಿದ ಬಳಕೆದಾರರು ಡಿಜಿಲಾಕರ್‌ನಲ್ಲಿ ಲಸಿಕೆ ಪ್ರಮಾಣ ಪತ್ರವನ್ನು ಇಡಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...