alex Certify BIG NEWS: ದಂಡ ಹಾಗೂ ಶಿಕ್ಷೆಗೆ ಗುರಿ ಮಾಡಬಹುದು ನಿಮಗೆ ಗೊತ್ತಿರದ ಈ ಸಂಚಾರಿ ನಿಯಮಗಳು….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ದಂಡ ಹಾಗೂ ಶಿಕ್ಷೆಗೆ ಗುರಿ ಮಾಡಬಹುದು ನಿಮಗೆ ಗೊತ್ತಿರದ ಈ ಸಂಚಾರಿ ನಿಯಮಗಳು….!

ಟಾಟಾ ಸನ್ಸ್‌ನ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಅವರ ಸಾವಿಗೆ ಕಾರಣವಾದ ಅಪಘಾತದಿಂದಾಗಿ ಸಂಚಾರ ನಿಯಮಗಳು, ಸುರಕ್ಷತೆ ಮತ್ತು ನಿಯಮ ಉಲ್ಲಂಘನೆಗಳ ಬಗ್ಗೆ ಸರ್ಕಾರ ತಲೆಕೆಡಿಸಿಕೊಂಡಿದೆ. ಸಂಚಾರ ನಿಯಮಗಳು ಮತ್ತು ರಸ್ತೆಯ ಸುರಕ್ಷತಾ ನಿಯಮಗಳ ಉಲ್ಲಂಘನೆಗಳ ಬಗ್ಗೆ ಹೆಚ್ಚು ಕಟ್ಟುನಿಟ್ಟಾದ ರೂಲ್ಸ್‌ ಅಳವಡಿಸಲು ಕೇಂದ್ರ ಮುಂದಾಗಿದೆ.

ವಾಹನ ಚಾಲಕರು ಮತ್ತು ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಕೆಲವೊಂದು ಬದಲಾವಣೆಗಳನ್ನು ಮಾಡುವಂತೆ ಈಗಾಗ್ಲೇ ವಾಹನ ತಯಾರಿಕಾ ಕಂಪನಿಗಳಿಗೆ ಕೇಂದ್ರ ಸಚಿವ ನಿತಿನ್‌ ಗಡ್ಕರಿ ಸೂಚಿಸಿದ್ದಾರೆ.

ಒಮ್ಮೊಮ್ಮೆ ನಮಗೆ ಗೊತ್ತಿಲ್ಲದೆಯೇ ಕೆಲವೊಂದು ಸಂಚಾರಿ ನಿಯಮಗಳನ್ನು ಉಲ್ಲಂಘಿಸಿ ನಾವು ಸಂಕಷ್ಟಕ್ಕೆ ಸಿಲುಕಿಕೊಳ್ಳುತ್ತೇವೆ. ಬಹುತೇಕರಿಗೆ ಗೊತ್ತಿರದ ಅಂತಹ ಕೆಲವೊಂದು ಸಂಚಾರಿ ನಿಯಮಗಳನ್ನು ನಾವಿಲ್ಲಿ ಪಟ್ಟಿ ಮಾಡಿದ್ದೇವೆ. ಈ ನಿಯಮಗಳನ್ನು ಪಾಲಿಸಿದ್ರೆ ದಂಡದಿಂದ ನೀವು ಪಾರಾಗಬಹುದು.

ವಾಹನ ಚಾಲನೆ ಮಾಡುವಾಗ ಉಡುಪು ಗೊಂದಲ…

ಮೋಟಾರು ವಾಹನ ಕಾಯಿದೆಯ ಪ್ರಕಾರ ನೀವು ಭಾರತದಲ್ಲಿ ಸವಾರಿ ಮಾಡುವಾಗ ಅಥವಾ ವಾಹನ ಚಾಲನೆ ಮಾಡುವಾಗ ಸ್ಥಿರವಾದ ಉಡುಪನ್ನು ಧರಿಸಬೇಕು. ನಿಯಮಗಳ ಪ್ರಕಾರ ದ್ವಿಚಕ್ರ ವಾಹನ ಚಾಲನೆ ಮಾಡುವಾಗ ಸಂಪೂರ್ಣವಾಗಿ ಮುಚ್ಚಿದ ಶೂಗಳನ್ನು ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಈ ಕಾನೂನು ಉಲ್ಲಂಘಿಸಿದ್ರೆ 1,000 ರೂಪಾಯಿ ದಂಡ ಹಾಕಲಾಗುತ್ತದೆ. ಹಿಂಬದಿ ಸವಾರ ಉದ್ದದ ಪ್ಯಾಂಟ್‌ ಶರ್ಟ್‌ ಅಥವಾ ಟೀ-ಶರ್ಟ್ ಅನ್ನು ಧರಿಸಬೇಕು. ಇಲ್ಲದೇ ಹೋದಲ್ಲಿ ಅವರಿಗೆ 2,000 ರೂಪಾಯಿ ದಂಡ ವಿಧಿಸಬಹುದು.

ಒಂದಕ್ಕಿಂತ ಹೆಚ್ಚು ಚಾಲನಾ ಪರವಾನಗಿ…

ಯಾರಾದರೂ ಎರಡು ಡ್ರೈವಿಂಗ್ ಲೈಸೆನ್ಸ್ ಹೊಂದಿರುವುದು ಕಂಡುಬಂದರೆ ಅವರು ದಂಡವನ್ನು ಪಾವತಿಸಬೇಕಾಗುತ್ತದೆ. ನಿಮ್ಮ ಹಳೆಯ ಚಾಲನಾ ಪರವಾನಗಿಗಳಲ್ಲಿ ಒಂದನ್ನು ಮತ್ತು ನಿಮ್ಮ ಹೊಸದನ್ನು ನೀವು ಹೊಂದಿರಬಹುದು ಎಂಬುದು ಒಂದು ಸಾಧ್ಯತೆಯಾಗಿದೆ. ನೀವು ಎರಡೂ ಪರವಾನಗಿಗಳನ್ನು ಹೊಂದಿದ್ದರೆ ದಂಡ ಹಾಕಲಾಗುತ್ತದೆ.

ಫೋನ್ ಬಳಕೆ…

ನಿಯಮದ ಪ್ರಕಾರ ವಾಹನ ಚಾಲನೆ ಮಾಡುವಾಗ ಫೋನ್‌ನಲ್ಲಿ ಮಾತನಾಡುವಂತಿಲ್ಲ, ಮೊಬೈಲ್‌ ಬಳಸುವಂತಿಲ್ಲ. ಹಾಗೇನಾದ್ರೂ ಮಾಡಿದ್ರೆ ಟ್ರಾಫಿಕ್‌ ಪೊಲೀಸರು ನಿಮಗೆ ದಂಡ ಹಾಕಬಹುದು. ಆದರೆ ವಾಹನ ಸವಾರ ಅಥವಾ ಚಾಲಕ ನ್ಯಾವಿಗೇಷನ್‌ಗಾಗಿ ಫೋನ್‌ ಬಳಸಲು ಅನುಮತಿಯಿದೆ. ಈ ಕಾನೂನು ಉಲ್ಲಂಘಿಸಿದ್ರೆ 5,000 ರೂಪಾಯಿವರೆಗೆ ದಂಡ ಹಾಕಬಹುದು.

ತುರ್ತು ವಾಹನಗಳ ಸಂಚಾರಕ್ಕೆ ಅಡ್ಡಿ…

ತುರ್ತು ವಾಹನಗಳಿಗೆ ಮುಂದಕ್ಕೆ ಹೋಗಲು ಅನುವು ಮಾಡಿಕೊಡುವುದು ಪ್ರತಿಯೊಬ್ಬ ನಾಗರಿಕನ ನೈತಿಕ ಹೊಣೆಗಾರಿಕೆ.  ಯಾರಾದರೂ ಅಂತಹ ವಾಹನವನ್ನು ತಡೆಯುವುದು ಅಥವಾ ಅಡ್ಡಿಪಡಿಸುವುದು ಕಂಡುಬಂದರೆ ಅವರಿಗೆ 6 ತಿಂಗಳವರೆಗೆ ಜೈಲು ಶಿಕ್ಷೆ ಅಥವಾ 10,000 ರೂಪಾಯಿ ದಂಡ ವಿಧಿಸಬಹುದು. ಅಗ್ನಿಶಾಮಕ ವಾಹನ, ಆಂಬ್ಯುಲೆನ್ಸ್, ಪೊಲೀಸ್ ಕಾರು ಮತ್ತು ಇತರ ತುರ್ತು ವಾಹನಗಳು ಅವುಗಳಲ್ಲಿ ಸೇರಿವೆ.

ಓಡಿಸಲು ಯೋಗ್ಯವಲ್ಲದ ಸ್ಥಿತಿ…

ಮದ್ಯ ಸೇವಿಸಿ ಅಥವಾ ಯಾವುದೇ ಅಮಲಿನ ಪದಾರ್ಥ ಸೇವನೆ ಮಾಡಿ ವಾಹನ ಚಲಾಯಿಸುವುದು ಕಾನೂನಿಗೆ ವಿರುದ್ಧವಾಗಿದೆ. ಮಾನಸಿಕ ಮತ್ತು ದೈಹಿಕವಾಗಿ ಅಸಮರ್ಥರಾಗಿದ್ದುಕೊಂಡು ವಾಹನ ಚಲಾಯಿಸಿದ್ರೆ ಅದು ಕೂಡ ಕಾನೂನಿನ ಪ್ರಕಾರ ಅಪರಾಧವೇ ಆಗಿರುತ್ತದೆ. ಈ ರೀತಿ ಮಾಡಿ ಸಿಕ್ಕಿಬಿದ್ದರೆ ಮೊದಲ ಬಾರಿ 1,000 ರೂಪಾಯಿ ಮತ್ತು ಎರಡನೆ ಬಾರಿ 2,000 ರೂಪಾಯಿ ದಂಡ ಪಾವತಿಸಬೇಕಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...