alex Certify BIG NEWS: ಡಿ.ಕೆ.ಶಿ. ಬಗ್ಗೆ ವಿ.ಎಸ್.ಉಗ್ರಪ್ಪ, ಸಲೀಂ ಸ್ಫೋಟಕ ಹೇಳಿಕೆ; ಕೆಪಿಸಿಸಿ ಅಧ್ಯಕ್ಷರ ವಿರುದ್ಧ ಕಾಂಗ್ರೆಸ್ ನಾಯಕರಿಂದಲೇ ವ್ಯಂಗ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಡಿ.ಕೆ.ಶಿ. ಬಗ್ಗೆ ವಿ.ಎಸ್.ಉಗ್ರಪ್ಪ, ಸಲೀಂ ಸ್ಫೋಟಕ ಹೇಳಿಕೆ; ಕೆಪಿಸಿಸಿ ಅಧ್ಯಕ್ಷರ ವಿರುದ್ಧ ಕಾಂಗ್ರೆಸ್ ನಾಯಕರಿಂದಲೇ ವ್ಯಂಗ್ಯ

ಬೆಂಗಳೂರು; ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಗ್ಗೆ ಸ್ವತಃ ಕಾಂಗ್ರೆಸ್ ನಾಯಕರೇ ಗುಸು ಗುಸು ಎಂದು ಮಾತನಾಡಿಕೊಂಡಿರುವ ಬಗ್ಗೆ ಬಹಿರಂಗವಾಗಿದೆ.

ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಭೆಯ ವೇಳೆ ಕಾಂಗ್ರೆಸ್ ನಾಯಕರಾದ ವಿ.ಎಸ್.ಉಗ್ರಪ್ಪ ಹಾಗೂ ಸಲೀಂ, ಡಿ.ಕೆ.ಶಿವಕುಮಾರ್ ವಿರುದ್ಧ ಸ್ಫೋಟಕ ಮಾತುಗಳನ್ನಾಡಿದ್ದಾರೆ. ಡಿ.ಕೆ.ಶಿವಕುಮಾರ್ ಕಲೆಕ್ಷನ್ ಗಿರಾಕಿ. ಅವರ ಬಳಿ 50-100 ಕೋಟಿ ಇದೆ, ಡಿಕೆಶಿಯವರದ್ದು ದೊಡ್ಡ ಸ್ಕ್ಯಾಮ್ ಎಂದು ಸಲೀಂ ಹೇಳಿದ್ದಾರೆ.

ತಂಬಾಕು ಸೇವನೆ ಆರಂಭಿಸಿ 12,300 ವರ್ಷವಂತೆ…! ವಿಜ್ಞಾನಿಗಳ ಹೊಸ ಪುರಾವೆ

ಇದೇ ವೇಳೆ ಮಾತನಾಡಿದ ವಿ.ಎಸ್.ಉಗ್ರಪ್ಪ ಪಟ್ಟು ಹಿಡಿದು ಡಿ.ಕೆ.ಶಿವಕುಮಾರ್ ಅಧ್ಯಕ್ಷ ಪಟ್ಟ ಗಿಟ್ಟಿಸಿಕೊಂಡರು ಎಂದು ಹೇಳಿದ್ದಾರೆ. ಸಿದ್ದರಾಮಯ್ಯ ಬಗ್ಗೆಯೂ ಮಾತನಾಡಿದ್ದಾರೆ ಎನ್ನಲಾಗಿದೆ. ಕೆಪಿಸಿಸಿ ಕಚೇರಿಯಲ್ಲಿಯೇ ನಡೆದ ಸಭೆ ವೇಳೆ ಉಗ್ರಪ್ಪ ಹಾಗೂ ಸಲೀಂ ನಡೆಸಿರುವ ಗುಸು ಗುಸು ಚರ್ಚೆ ಇದೀಗ ಬಹಿರಂಗವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...