ರಾಜ್ಯದಲ್ಲಿ ಮಳೆ ಅವಾಂತರ ಮುಂದುವರೆದಿದ್ದು, ಮಳೆ ನೀರು ತುಂಬಿದ್ದ ಕಾರಣಕ್ಕೆ ರಸ್ತೆ ಗುಂಡಿ ಅರಿಯದೆ ಚಲಿಸಿದ ಮಿನಿ ಟೆಂಪೋ ಪಲ್ಟಿಯಾಗಿದೆ.
ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ಕೊಳೆಮಾರು ಬಳಿ ಟೊಮೊಟೊ ಸಾಗಿಸುತ್ತಿದ್ದ ಟೆಂಪೋ ಕಳೆದ ರಾತ್ರಿ ಉರುಳಿ ಬಿದ್ದಿದೆ.
ರಸ್ತೆ ದುರಸ್ತಿಪಡಿಸದೆ ಇರುವುದೇ ಇದಕ್ಕೆ ಕಾರಣವೆಂದು ಸ್ಥಳೀಯರು ಆರೋಪಿಸಿದ್ದು, ಸ್ಥಳೀಯ ಆಡಳಿತ ಈ ನಿಟ್ಟಿನಲ್ಲಿ ಗಮನಹರಿಸಬೇಕೆಂದು ಆಗ್ರಹಿಸಿದ್ದಾರೆ.