alex Certify BIG NEWS: ಗ್ರಾಹಕರಿಗೆ ಮತ್ತೆ ಶಾಕ್; ಶೀಘ್ರದಲ್ಲೇ LPG ಸಿಲಿಂಡರ್ ದರ ಇನ್ನಷ್ಟು ಏರಿಕೆ; 1000 ರೂ. ಗಡಿ ದಾಟಲಿದೆ ಅಡುಗೆ ಅನಿಲ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಗ್ರಾಹಕರಿಗೆ ಮತ್ತೆ ಶಾಕ್; ಶೀಘ್ರದಲ್ಲೇ LPG ಸಿಲಿಂಡರ್ ದರ ಇನ್ನಷ್ಟು ಏರಿಕೆ; 1000 ರೂ. ಗಡಿ ದಾಟಲಿದೆ ಅಡುಗೆ ಅನಿಲ…!

ಬೆಂಗಳೂರು: ಕೊರೊನಾ ಸಂಕಷ್ಟದ ನಡುವೆಯೇ ಅಗತ್ಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಜನ ಸಾಮಾನ್ಯರು ಕಂಗಾಲಾಗಿದ್ದಾರೆ. ನಿನ್ನೆಯಷ್ಟೇ ಅಡುಗೆ ಅನಿಲ ದರ 25 ರೂಪಾಯಿ ಹೆಚ್ಚಿಸಿದ್ದ ಕೇಂದ್ರ ಸರ್ಕಾರ ಇದೀಗ ಮತ್ತಷ್ಟು ಬೆಲೆ ಏರಿಕೆ ಮಾಡಲು ಮುಂದಾಗಿದೆ ಎನ್ನಲಾಗಿದೆ.

ಕೇವಲ ಇನ್ನು 3 ತಿಂಗಳಲ್ಲಿ ಎಲ್.ಪಿ.ಜಿ. ಸಿಲಿಂಡರ್ ದರ 1000 ರೂಪಾಯಿ ಗಡಿ ದಾಟುವ ಸಾಧ್ಯತೆ ದಟ್ಟವಾಗಿದೆ ಎಂದು ಆಲ್ ಇಂಡಿಯಾ ಎಲ್.ಪಿ.ಜಿ. ಫೆಡರೇಷನ್ ರಾಜ್ಯ ಕಾರ್ಯದರ್ಶಿ ರಮೇಶ್ ಕುಮಾರ್ ಸುಳಿವು ನೀಡಿದ್ದಾರೆ.

ವಿಶ್ವ ತೆಂಗಿನಕಾಯಿ ದಿನ: ಇಲ್ಲಿದೆ ತೆಂಗಿನ ಕಾಯಿ ಕುರಿತ ಇಂಟ್ರಸ್ಟಿಂಗ್‌ ವಿಷಯ

ಚಳಿಗಾಲದಲ್ಲಿ ಯುರೋಪ್ ದೇಶಗಳಲ್ಲಿ ಗ್ಯಾಸ್ ಸಿಲಿಂಡರ್ ಬೇಡಿಕೆ ಹೆಚ್ಚುತ್ತದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಎಲ್.ಪಿ.ಜಿ. ಬೇಡಿಕೆ ಹೆಚ್ಚಾಗುವ ಹಿನ್ನೆಲೆಯಲ್ಲಿ ಭಾರತದಲ್ಲಿಯೂ ದರ ಹೆಚ್ಚಾಗುತ್ತದೆ ಎಂದು ಹೇಳಿದ್ದಾರೆ.

ಸೆಪ್ಟೆಂಬರ್ ತಿಂಗಳ ಮೊದಲ ದಿನವೇ ಅಡುಗೆ ಅನಿಲ ದರ 25 ರೂಪಾಯಿ ದಿಢೀರ್ ಏರಿಕೆಯಾಗಿದೆ. ಈ ಮೂಲಕ ಕಳೆದ 15 ದಿನಗಳಲ್ಲಿ ಗ್ಯಾಸ್ ಸಿಲಿಂಡರ್ ದರ 50 ರೂಪಾಯಿ ಏರಿಕೆಯಾಗಿದ್ದು, ಬೆಲೆ ಏರಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ನಡುವೆ ಅಡುಗೆ ಅನಿಲ ಇನ್ನಷ್ಟು ದುಬಾರಿಯಾಗಲಿದೆ ಎಂಬ ಸುಳಿವು ನೀಡುತ್ತಿರುವುದು ಜನಸಾಮಾನ್ಯರನ್ನು ಕಂಗೆಡಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...