alex Certify Big News: ಕೊರೊನಾ ಕೇಸ್ ಇಳಿಕೆ ಬೆನ್ನಲ್ಲೇ ಈ ಹಿಂದಿನಂತೆ ಅಂತರರಾಷ್ಟ್ರೀಯ ವಿಮಾನ ಸಂಚಾರಕ್ಕೆ ‘ಗ್ರೀನ್ ಸಿಗ್ನಲ್’ ಸಾಧ್ಯತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Big News: ಕೊರೊನಾ ಕೇಸ್ ಇಳಿಕೆ ಬೆನ್ನಲ್ಲೇ ಈ ಹಿಂದಿನಂತೆ ಅಂತರರಾಷ್ಟ್ರೀಯ ವಿಮಾನ ಸಂಚಾರಕ್ಕೆ ‘ಗ್ರೀನ್ ಸಿಗ್ನಲ್’ ಸಾಧ್ಯತೆ

ದೇಶದಲ್ಲಿ ಅಂತಾರಾಷ್ಟ್ರೀಯ ವಿಮಾನಗಳು ಮಾರ್ಚ್​ 15ರಿಂದ ಪುನಾರಂಭಗೊಳ್ಳುವ ಸಾಧ್ಯತೆಯಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ. ವಿದೇಶಿ ಆಗಮನ ಹಾಗೂ ನಿರ್ಗಮನಗಳಿಗಾಗಿ ಭಾರತೀಯ ವಿಮಾನ ನಿಲ್ದಾಣಗಳಲ್ಲಿ ಪರಿಣಾಮಕಾರಿಯಾದ ಕಾರ್ಯಾಚರಣಾ ವಿಧಾನವನ್ನು ಅನುಸರಿಸಲಾಗುತ್ತದೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.

ಕೋವಿಡ್​ ಸೋಂಕುಗಳ ಪ್ರಮಾಣದಲ್ಲಿ ನಿರಂತರ ಇಳಿಕೆಗಳನ್ನು ಗಮನಿಸಿದ ಬಳಿಕ ಆರೋಗ್ಯ ಸಚಿವಾಲಯದ ಜೊತೆಗೆ ಸಮಾಲೋಚನೆಯನ್ನು ನಡೆಸಿದ ಕೇಂದ್ರ ವಿಮಾನಯಾನ ಸಚಿವಾಲಯವು ನಿಗದಿತ ಅಂತಾರಾಷ್ಟ್ರೀಯ ವಿಮಾನಗಳನ್ನು ಪುನಾರಂಭಿಸುವ ಬಗ್ಗೆ ಬಹುತೇಕ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಆದರೆ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯವು ಇದುವರೆಗೆ ಯಾವುದೇ ಅಧಿಕೃತ ಪ್ರಕಟಣೆಯನ್ನು ನೀಡಿಲ್ಲ.

ಮಾರ್ಚ್​ 15ರಿಂದ ನಿಯಮಿತ ಅಂತಾರಾಷ್ಟ್ರೀಯ ವಿಮಾನಗಳು ಪುನಾರಂಭಗೊಳ್ಳುವ ಸಾಧ್ಯತೆಯಿದೆ. ಫೆಬ್ರವರಿ 14ರಿಂದ ಜಾರಿಗೆ ಬಂದಿರುವ ಅಂತಾರಾಷ್ಟ್ರೀಯ ಆಗಮನದ ಮಾರ್ಗಸೂಚಿಗಳನ್ನೇ ಇನ್ಮುಂದೆ ಪುನಾರಂಭಗೊಳ್ಳಲಿರುವ ನಿಯಮಿತ ವಿಮಾನಯಾನಗಳಿಗೂ ಬಳಕೆ ಮಾಡಲಾಗುತ್ತದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...