alex Certify BIG NEWS: ಕೊನೆಗೂ ಮಾರುಕಟ್ಟೆಗೆ ಬಂತು ಐಫೋನ್‌ 14 ಸರಣಿ, ಇಲ್ಲಿದೆ ಆಪಲ್‌ನ ಹೊಸ ಮೊಬೈಲ್‌ಗಳ ಸಂಪೂರ್ಣ ವಿವರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕೊನೆಗೂ ಮಾರುಕಟ್ಟೆಗೆ ಬಂತು ಐಫೋನ್‌ 14 ಸರಣಿ, ಇಲ್ಲಿದೆ ಆಪಲ್‌ನ ಹೊಸ ಮೊಬೈಲ್‌ಗಳ ಸಂಪೂರ್ಣ ವಿವರ

ಕೊನೆಗೂ ಐಫೋನ್‌ ಪ್ರಿಯರ ನಿರೀಕ್ಷೆ ಫಲಿಸಿದೆ. ಆಪಲ್‌ ಕಂಪನಿ ಐಫೋನ್‌ 14 ಸರಣಿಯ ಮೊಬೈಲ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಆಪಲ್‌ನ ‘ಫಾರ್ ಔಟ್’ ಈವೆಂಟ್ನಲ್ಲಿ ಫೋನ್‌ಗಳನ್ನು ರಿವೀಲ್‌ ಮಾಡಲಾಯ್ತು.

ಇದು ಐಫೋನ್‌ ಸರಣಿಯ ಅತ್ಯುತ್ತಮ ಮೊಬೈಲ್‌ ಅಂತಾ ಬಣ್ಣಿಸಲಾಗ್ತಿದೆ. ಹಿಂದಿನ ಆವೃತ್ತಿಗಳಿಗಿಂತ ದೊಡ್ಡದಾದ, ಉತ್ತಮವಾದ  ಮತ್ತು ಹೆಚ್ಚು ಶಕ್ತಿಯುತವಾದ ಫೋನ್‌ಗಳಿವು. iPhone 14 ಸರಣಿಯು iPhone 14, iPhone 14 Plus, iPhone 14 Pro ಮತ್ತು iPhone 14 Pro Max ಅನ್ನು ಒಳಗೊಂಡಿದೆ.

ಎಲ್ಲಾ ಹೊಸ ಪ್ರಮಾಣಿತ ಐಫೋನ್ 14, OLED ಡಿಸ್‌ಪ್ಲೇ, 1200 nits ಗರಿಷ್ಠ ಹೊಳಪು ಮತ್ತು ಡಾಲ್ಬಿ ವಿಷನ್‌ ಅನ್ನು ಹೊಂದಿವೆ. ಐಫೋನ್ 146.1 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಐಫೋನ್ 14 ಪ್ಲಸ್ಗೆ 6.7 ಇಂಚಿನ ಡಿಸ್‌ಪ್ಲೇ ಅಳವಡಿಸಲಾಗಿದೆ. ಅತ್ಯುತ್ತಮ ವೀಕ್ಷಣೆಯ ಅನುಭವಕ್ಕಾಗಿ ಎರಡೂ ಸಾಧನಗಳು ಸೂಪರ್ ರೆಟಿನಾ XDR ಪ್ರದರ್ಶನದೊಂದಿಗೆ ಬರುತ್ತವೆ.

ಹೊಸ iPhone 14 ವಿಶೇಷತೆ…

ಈ ಸ್ಮಾರ್ಟ್‌ಫೋನ್‌ಗಳು A15 ಬಯೋನಿಕ್ SoC ನಿಂದ ಚಾಲಿತವಾಗಿವೆ ಮತ್ತು ಅವುಗಳು 5-ಕೋರ್ GPU ಹೊಂದಿವೆ. Apple iPhone 14 ಮತ್ತು iPhone 14 Plus ಮಾದರಿಗಳಲ್ಲಿ ಹೊಸ 12MP ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ನಿರೀಕ್ಷೆಯಂತೆ, ಕಳೆದ ವರ್ಷ ಬಿಡುಗಡೆಯಾದ ಐಫೋನ್ 13 ಸರಣಿಯಿಂದ, ಆಪಲ್ ನಾಚ್ ಅನ್ನು ಉಳಿಸಿಕೊಳ್ಳಲಾಗಿದೆ. ಕೆಲವು ಹೊಸ ವೈಶಿಷ್ಟ್ಯಗಳೆಂದರೆ ಉಪಗ್ರಹದ ಮೂಲಕ ತುರ್ತು SOS, ಕ್ರ್ಯಾಶ್ ಡಿಟೆಕ್ಷನ್, ಆಕ್ಷನ್ ಮೋಡ್, ಆಟೋ ಫೋಕಸ್‌ನೊಂದಿಗೆ ಹೊಸ ಫ್ರಂಟ್‌ ಕ್ಯಾಮೆರಾ, ರಿಯಲ್‌ ಟೋನ್ ಫ್ಲ್ಯಾಷ್, ಅಲ್ಟ್ರಾವೈಡ್ ಕ್ಯಾಮೆರಾ ಇತ್ಯಾದಿಗಳು ಐಫೋನ್‌ 14ನಲ್ಲಿವೆ.

iPhone 14 128 GB ಬೆಲೆ 79,999 ರೂಪಾಯಿ ಇದ್ದು, 256GB ಫೋನ್‌ನ ಬೆಲೆ 89,900 ರೂಪಾಯಿ. 512 GB ರೂಪಾಂತರಕ್ಕೆ 1,09,900 ರೂಪಾಯಿ ನಿಗದಿಪಡಿಸಲಾಗಿದೆ. iPhone 14 Plus 128 GB ಗೆ 89,900 ರೂಪಾಯಿ, 256 GBಗೆ 99,900 ಮತ್ತು 512 GB ಮಾದರಿಗೆ 1,19,900 ರೂಪಾಯಿ ಇದೆ.  iPhone 14 ಸ್ಟ್ಯಾಂಡರ್ಡ್ ಮಾಡೆಲ್‌ಗಳು ಐದು ಹೊಸ ರೋಮಾಂಚಕ ಬಣ್ಣಗಳಾದ ಮಿಡ್‌ನೈಟ್‌, ಸ್ಟಾರ್‌ಲೈಟ್, ನೀಲಿ, ನೇರಳೆ ಮತ್ತು ಪ್ರಾಡಕ್ಟ್‌ ರೆಡ್‌ ಕಲರ್‌ನಲ್ಲಿ ಲಭ್ಯವಿವೆ.

iPhone 14 Pro ಮತ್ತು iPhone 14 Pro Max ಅತ್ಯಂತ ಶಕ್ತಿಶಾಲಿ A16 ಬಯೋನಿಕ್ ಚಿಪ್‌ಸೆಟ್‌ನೊಂದಿಗೆ ಬರುತ್ತದೆ. ಇತ್ತೀಚಿನ ಪ್ರೊ ಮಾಡೆಲ್‌ಗಳು ಹೊಸ ಪರಿಕಲ್ಪನೆಯನ್ನು ಪರಿಚಯಿಸಿವೆ. ಐಫೋನ್ 14 ಪ್ರೊ 6.1 ಇಂಚಿನ ಡಿಸ್‌ಪ್ಲೇ ಹೊಂದಿದ್ದರೆ, ಐಫೋನ್ 14 ಪ್ರೊ ಮ್ಯಾಕ್ಸ್ 6.7 ಇಂಚಿನ ಡಿಸ್‌ಪ್ಲೇಯೊಂದಿಗೆ ಬರುತ್ತದೆ. ಪ್ರೊ ಮಾದರಿಗಳು 128GB, 256GB, 512GB ಮತ್ತು 1TB ಸ್ಟೋರೇಜ್ ಕಾನ್ಫಿಗರೇಶನ್‌ಗಳಲ್ಲಿ ಲಭ್ಯವಿವೆ. ಈ ಮಾದರಿಗಳು ಸ್ಪೇಸ್‌, ಬ್ಲಾಕ್‌, ಸಿಲ್ವರ್‌, ಗೋಲ್ಡ್‌ ಮತ್ತು ಡೀಪ್‌ ಪರ್ಪಲ್‌ ಬಣ್ಣಗಳಲ್ಲಿ ದೊರೆಯುತ್ತವೆ.

iPhone 14 Pro 128GB ಮಾದರಿಗೆ 1,29,900 ರೂಪಾಯಿ, 256 GBಗೆ 1,39,900 ರೂಪಾಯಿ, 512 GB ಗೆ 1,59,900 ರೂಪಾಯಿ ಮತ್ತು 1TBಗೆ 1,79,900 ರೂಪಾಯಿ ನಿಗದಿಪಡಿಸಲಾಗಿದೆ. iPhone 14 Pro Max 128GBಗೆ 1,39,900 ರೂಪಾಯಿ, 256GB ಗೆ 1,49,900 ರೂಪಾಯಿ, 512GB ಗೆ 1,69,900 ರೂಪಾಯಿ ಮತ್ತು 1TBಗೆ 1,89,900 ರೂಪಾಯಿ ಇದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...