alex Certify BIG NEWS: ಕೇಂದ್ರ ಸಚಿವರ ರ್ಯಾಲಿ ವೇಳೆ ಅವಘಡ; ಪೊಲೀಸರ ಕಾಲಿನ ಮೇಲೆ ಹರಿದ ಜೀಪಿನ ಚಕ್ರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕೇಂದ್ರ ಸಚಿವರ ರ್ಯಾಲಿ ವೇಳೆ ಅವಘಡ; ಪೊಲೀಸರ ಕಾಲಿನ ಮೇಲೆ ಹರಿದ ಜೀಪಿನ ಚಕ್ರ

ಬೆಂಗಳೂರು: ಕೇಂದ್ರ ಸಚಿವರ ರ್ಯಾಲಿ ವೇಳೆ ಅವಘಡವೊಂದು ಸಂಭವಿಸಿದ್ದು, ಪೊಲೀಸರ ಕಾಲಿನ ಮೇಲೆಯೇ ಜೀಪಿನ ಚಕ್ರ ಹರಿದು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಅವರನ್ನು ಸ್ವಾಗತಿಸುವ ಕಾರ್ಯಕ್ರಮದ ವೇಳೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬರುವಾಗ ಈ ದುರ್ಘಟನೆ ಸಂಭವಿಸಿದೆ. ಸಚಿವ ನಾರಾಯಣಸ್ವಾಮಿ ಮೆರವಣಿಗೆ ನಡೆಸುತ್ತಿದ್ದ ಜೀಪ್ ನ ಚಕ್ರ ಪೊಲೀಸ್ ಸಿಬ್ಬಂದಿ ಕಾಲಿನ ಮೇಲೆ ಹರಿದಿದೆ.

ಚಿಕ್ಕಜಾಲಠಾಣೆ ಪೊಲೀಸ್ ಸಿಬ್ಬಂದಿ ಶಿವಕುಮಾರ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳು ಶಿವಕುಮಾರ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...