alex Certify BIG NEWS: ಕರಾವಳಿ ಜಿಲ್ಲೆಗಳ ಅರಣ್ಯದಲ್ಲಿ ಮತ್ತೆ ಆಕ್ಟೀವ್ ಆದ ಸ್ಯಾಟಲೈಟ್ ಫೋನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕರಾವಳಿ ಜಿಲ್ಲೆಗಳ ಅರಣ್ಯದಲ್ಲಿ ಮತ್ತೆ ಆಕ್ಟೀವ್ ಆದ ಸ್ಯಾಟಲೈಟ್ ಫೋನ್

ಬೆಂಗಳೂರು: ಕರಾವಳಿ ಹಾಗೂ ಮಲೆನಾಡು ಭಾಗದ ಅರಣ್ಯ ಪ್ರದೇಶದಲ್ಲಿ ಮತ್ತೆ ಸ್ಯಾಟಲೈಟ್ ಫೋನ್ ಸಕ್ರಿಯಗೊಂಡಿರುವುದು ಆತಂಕಕ್ಕೆ ಕಾರಣವಾಗಿದೆ.

ಕೇವಲ 10 ದಿನಗಳ ಅಂತರದಲ್ಲಿ ಕರಾವಳಿಯ ನಾಲ್ಕು ಅರಣ್ಯಪ್ರದೇಶದಲ್ಲಿ ವ್ಯಕ್ತಿಗಳು ಸ್ಯಾಟಲೈಟ್ ಫೋನ್ ಸಂಪರ್ಕ ಸಾಧಿಸಿದ್ದಾರೆ. ಈ ಬಗ್ಗೆ ಬೇಹುಗಾರಿಕಾ ಏಜೆನ್ಸಿ ಸ್ಯಾಟಲೈಟ್ ಫೋನ್ ಲೊಕೇಷನ್ ಗಳನ್ನು ಟ್ರೇಸ್ ಮಾಡಿದೆ.

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ-ಶಿರಸಿ ಮಧ್ಯೆ ಇರುವ ಅರಣ್ಯ ಪ್ರದೇಶ, ಮಂಗಳೂರು ಹೊರ ಭಾಗದಲ್ಲಿರುವ ನಾಟಿಕಲ್, ಕುಳಾಯಿ, ಚಿಕ್ಕಮಗಳೂರು ಜಿಲ್ಲೆಯ ಕಡೂರು, ಬೀರೂರು ನಡುವಿನ ಅರಣ್ಯ ಪ್ರದೇಶದಲ್ಲಿ ಸ್ಯಾಟಲೈಟ್ ಸೀಕ್ರೇಟ್ ಫೋನ್ ಆಕ್ಟೀವ್ ಆಗಿದೆ. ಈ ಫೋನ್ ಬಳಸಿರುವ ನಿಗೂಢ ವ್ಯಕ್ತಿಗಳ ಪತ್ತೆಗಾಗಿ ಆಂತರಿಕ ಭದ್ರತಾ ದಳದ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ.

ಸ್ಯಾಟಲೈಟ್ ಫೋನ್ ಹಡಗಿನಲ್ಲಿರುವ ಕ್ಯಾಪ್ಟನ್ ಗಳು ಬಳಸಲು ಅವಕಾಶವಿದೆ ಆದರೆ ದಟ್ಟಾರಣ್ಯ ಪ್ರದೇಶದಲ್ಲಿ ಇಂತಹ ಫೋನ್ ಸಕ್ರಿಯಗೊಂಡಿರುವುದು ನಕ್ಸ್ ಲ್ ಚಟುವಟಿಕೆಗಳಿಗಾಗಿ ಈ ಫೋನ್ ಬಳಕೆಯಾಗುತ್ತಿದೆಯಾ ಎಂಬ ಅನುಮಾನ ಮೂಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...