alex Certify Big News: ಓಮಿಕ್ರಾನ್​ಗೂ ಬಂತು ಲಸಿಕೆ…! ಸಿಹಿ ಸುದ್ದಿ ನೀಡಿದ ಫೈಜರ್​ ಕಂಪನಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Big News: ಓಮಿಕ್ರಾನ್​ಗೂ ಬಂತು ಲಸಿಕೆ…! ಸಿಹಿ ಸುದ್ದಿ ನೀಡಿದ ಫೈಜರ್​ ಕಂಪನಿ

ಪ್ರಪಂಚದಲ್ಲಿ ಹೆಚ್ಚುತ್ತಿರುವ ಓಮಿಕ್ರಾನ್​ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ನಿರ್ದಿಷ್ಟವಾಗಿ ಕೊರೊನಾ ವೈರಸ್​ನ ಓಮಿಕ್ರಾನ್​ ರೂಪಾಂತರಿಯನ್ನೇ ಗುರಿಯಾಗಿಸುವ ಮರುವಿನ್ಯಾಸಗೊಳಿಸಿದ ಕೋವಿಡ್ ಲಸಿಕೆಗಳನ್ನು ಶೀಘ್ರದಲ್ಲಿಯೇ ಮಾರುಕಟ್ಟೆಗೆ ತರುವುದಾಗಿ ಫೈಜರ್​​ ಮುಖ್ಯ ಕಾರ್ಯನಿರ್ವಾಹಕ ಆಲ್ಬರ್ಟ್​ ಬೌರ್ಲಾ ಹೇಳಿಕೆ ನೀಡಿದ್ದಾರೆ.

ಜೆಪಿ ಮಾರ್ಗನ್​ ಹೆಲ್ತ್​ಕೇರ್​ ಕಾನ್ಪರೆನ್ಸ್​ನಲ್ಲಿ ಮಾತನಾಡಿದ ಆಲ್ಬರ್ಟ್ ಬೌರ್ಲಾ, ಫೈಜರ್​ ಹಾಗೂ ಬಯೋ ಎನ್​ಟೆಕ್​ ಒಟ್ಟಾಗಿ ಓಮಿಕ್ರಾನ್​​ ವಿರುದ್ಧ ಪ್ರಬಲ ಹಾಗೂ ಹಿಂದಿನ ಲಸಿಕೆಗಳನ್ನು ಹೋಲುವಂತಹ ಲಸಿಕೆಗಳನ್ನು ಹೊರತರುವಲ್ಲಿ ಕೆಲಸ ಮಾಡುತ್ತಿದೆ ಎಂದು ಹೇಳಿದ್ದಾರೆ.

ಮರು ವಿನ್ಯಾಸಗೊಳಿಸಲಾದ ಲಸಿಕೆಗಳಿಗೆ ಅನುಮೋದನೆಯನ್ನು ಕೇಳಿ ಅರ್ಜಿ ಸಲ್ಲಿಸಲು ಕಂಪನಿಯು ಸಿದ್ಧವಾಗಿದೆ. ಮಾರ್ಚ್​ ತಿಂಗಳಿನಿಂದ ಲಸಿಕೆಯ ಉತ್ಪಾದನೆ ಆರಂಭವಾಗಬಹುದು ಎಂದು ಬೌರ್ಲಾ ಹೇಳಿದ್ದಾರೆ.

ಈ ನಡುವೆ ದಕ್ಷಿಣ ಆಫ್ರಿಕಾದ ವೈದ್ಯರು ಓಮಿಕ್ರಾನ್​ ರೂಪಾಂತರಿಯು ಡೆಲ್ಟಾ ರೂಪಾಂತರಿಗಿಂತ ಸೌಮ್ಯ ಲಕ್ಷಣಗಳನ್ನು ಹೊಂದಿದೆ ಎಂದು ಹೇಳಿದ್ದಾರೆ. ಈ ಪ್ರಸ್ತುತ ಸಮಯದಲ್ಲಿ ಓಮಿಕ್ರಾನ್​ ಒಂದು ಸೌಮ್ಯ ಕಾಯಿಲೆಯಂತೆ ಕಾಣುತ್ತಿದೆ ಎಂದು ಆಫ್ರಿಕಾ ಆರೋಗ್ಯ ಸಂಶೋಧನಾ ಸಂಸ್ಥೆಯ ನಿರ್ದೇಶಕ ವಿಲ್ಲೆಮ್​ ಹೆನ್​ಕೋಮ್​ ಹೇಳಿದ್ದಾರೆ. ಆದರೆ ಇದು ಓಮಿಕ್ರಾನ್​ ಆರಂಭದ ದಿನಗಳಾಗಿವೆ. ಹೀಗಾಗಿ ನಾವು ಇನ್ನಷ್ಟು ಮಾಹಿತಿಗಳನ್ನು ಸಂಗ್ರಹಿಸಬೇಕಿದೆ. ಆಸ್ಪತ್ರೆಗೆ ದಾಖಲಾಗುತ್ತಿರುವವರು ಹಾಗೂ ಸಾವಿನ ಸಂಖ್ಯೆಗಳ ಬಗ್ಗೆ ಇನ್ನಷ್ಟು ಮಾಹಿತಿ ಸಿಗಬೇಕಿದೆ. ನಾವು ಕೋವಿಡ್​ನ ಹೊಸ ಅಲೆಗೆ ಕಾಲಿಟ್ಟು ಕೇವಲ 2 ವಾರ ಮಾತ್ರ ಕಳೆದಿದೆ. ಹೀಗಾಗಿ ಈಗಲೇ ಅಂತಿಮ ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...