alex Certify BIG NEWS: ಐಪಿಎಲ್‌ಗೂ ಮುನ್ನವೇ ಮುಂಬೈ ಇಂಡಿಯನ್ಸ್‌ಗೆ ಶಾಕ್‌….! ದಿಢೀರನೆ ನಿವೃತ್ತಿ ಘೋಷಿಸಿದ ಆಲ್‌ರೌಂಡರ್‌ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಐಪಿಎಲ್‌ಗೂ ಮುನ್ನವೇ ಮುಂಬೈ ಇಂಡಿಯನ್ಸ್‌ಗೆ ಶಾಕ್‌….! ದಿಢೀರನೆ ನಿವೃತ್ತಿ ಘೋಷಿಸಿದ ಆಲ್‌ರೌಂಡರ್‌

ವೆಸ್ಟ್ ಇಂಡೀಸ್ ಮತ್ತು ಮುಂಬೈ ಇಂಡಿಯನ್ಸ್‌ ತಂಡದ ಅನುಭವಿ ಆಲ್‌ರೌಂಡರ್ ಕೀರಾನ್ ಪೊಲಾರ್ಡ್, ಐಪಿಎಲ್‌ನಿಂದ್ಲೇ ನಿವೃತ್ತಿ ಘೋಷಿಸಿದ್ದಾರೆ. 2023ರ ಐಪಿಎಲ್‌ಗಾಗಿ ಸಂಜೆ 5 ಗಂಟೆಯವರೆಗೂ ರಿಟೆನ್ಷನ್‌ ಇತ್ತು, ಗಡುವು ಮುಗಿಯುವ ಮುನ್ನವೇ ಪೊಲಾರ್ಡ್‌ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ನಿರ್ಧಾರವನ್ನು ಪ್ರಕಟಿಸಿದ್ದಾರೆ.

2010ರಿಂದ್ಲೂ ಪೊಲಾರ್ಡ್‌ ಮುಂಬೈ ಇಂಡಿಯನ್ಸ್‌ ಪರ ಆಡುತ್ತಿದ್ದರು. ಅತ್ಯುತ್ತಮ ಆಲ್‌ರೌಂಡರ್‌ ಆಗಿ ಗುರುತಿಸಿಕೊಂಡಿದ್ದ ಅವರು ತಂಡದ ಬೆನ್ನೆಲುಬಾಗಿದ್ದರು. ಮುಂಬೈ ಇಂಡಿಯನ್ಸ್‌ನೊಂದಿಗೆ 5 IPL ಮತ್ತು 2 ಚಾಂಪಿಯನ್ಸ್ ಲೀಗ್ ಟ್ರೋಫಿಗಳನ್ನು ಪಡೆದಿದ್ದಾರೆ.

ಐಪಿಎಲ್‌ನಿಂದ ನಿವೃತ್ತರಾದ್ರೂ ಪೊಲಾರ್ಡ್‌ ಮುಂಬೈ ಇಂಡಿಯನ್ಸ್‌ ತಂಡದ ಬ್ಯಾಟಿಂಗ್‌ ಕೋಚ್‌ ಆಗಿ ಮುಂದುವರಿಯಲಿದ್ದಾರೆ. ಪೊಲಾರ್ಡ್ 189 ಐಪಿಎಲ್ ಪಂದ್ಯಗಳನ್ನು ಆಡಿದ್ದಾರೆ. 16 ಅರ್ಧಶತಕಗಳೊಂದಿಗೆ 3,412 ರನ್ ಗಳಿಸಿದ್ದಾರೆ. 147.32 ಸ್ಟ್ರೈಕ್ ರೇಟ್‌ ಅನ್ನು ಕಾಪಾಡಿಕೊಂಡಿದ್ದರು. ತಮ್ಮ ಐಪಿಎಲ್ ವೃತ್ತಿ ಜೀವನದಲ್ಲಿ 31.59 ಸರಾಸರಿಯಲ್ಲಿ 69 ವಿಕೆಟ್‌ಗಳನ್ನು ಪಡೆದಿದ್ದಾರೆ.

ಇನ್ಮುಂದೆ ಮುಂಬೈ ಇಂಡಿಯನ್ಸ್‌ಗಾಗಿ ಆಡಲು ಸಾಧ್ಯವಿಲ್ಲ ಎಂದಾದಾಗ, ಎಂಐ ವಿರುದ್ಧವಾಗಿಯೂ ಆಡಲು ಅಸಾಧ್ಯ ಅಂತಾ ತಂಡದ ಜೊತೆಗಿನ ತಮ್ಮ ಬಾಂಧವ್ಯವನ್ನು ಪೊಲಾರ್ಡ್‌ ಬಿಚ್ಚಿಟ್ಟಿದ್ದಾರೆ. ಕಳೆದ 13 ಸೀಸನ್‌ಗಳಲ್ಲಿ ಐಪಿಎಲ್‌ನಲ್ಲಿ ಅತಿದೊಡ್ಡ ಮತ್ತು ಅತ್ಯಂತ ಯಶಸ್ವಿ ತಂಡವನ್ನು ಪ್ರತಿನಿಧಿಸಿದ್ದಕ್ಕಾಗಿ ಅಪಾರ ಹೆಮ್ಮೆ, ಗೌರವ ಇದೆ ಎಂದಿದ್ದಾರೆ. ತಂಡದ ಮಾಲೀಕರಾದ ಮುಖೇಶ್‌ ಅಂಬಾನಿ ಕುಟುಂಬಕ್ಕೂ ಧನ್ಯವಾದ ಹೇಳಿದ್ದಾರೆ.

ಮೈದಾನದಲ್ಲಿ ‘ಪೊಲಾರ್ಡ್ ಮ್ಯಾಜಿಕ್’ ಮಿಸ್ ಮಾಡಿಕೊಳ್ಳುತ್ತೇನೆ ಅಂತಾ ಮುಖೇಶ್‌ ಅಂಬಾನಿ ಹಾಗೂ ನೀತಾ ಅಂಬಾನಿ ಹೇಳಿಕೊಂಡಿದ್ದಾರೆ. ಐಪಿಎಲ್‌ನಿಂದ ನಿವೃತ್ತರಾದ್ರೂ MI ಎಮಿರೇಟ್ಸ್‌ಗಾಗಿ ಪೊಲಾರ್ಡ್‌ ಆಡಲಿದ್ದಾರಂತೆ. ಜೊತೆಗೆ ಬ್ಯಾಟಿಂಗ್‌ ತರಬೇತುದಾರನ ಹುದ್ದೆಯನ್ನೂ ನೀಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...