ಲಖನೌ: ಎಸ್ ಪಿ ಮುಖಂಡ ಆಜಂ ಖಾನ್ ಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿ ಉತ್ತರ ಪ್ರದೇಶದ ರಾಂಪುರ ಜನಪ್ರತಿನಿಧಿಗಳ ಕೋರ್ಟ್ ಆದೇಶ ಹೊರಡಿಸಿದೆ.
ದ್ವೇಷದ ಭಾಷಣ ಹಿನ್ನೆಲೆಯಲ್ಲಿ ಆಜಂ ಖಾನ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಪ್ರಕರಣ ಸಂಬಂಧ ಇದೀಗ ರಾಂಪುರ ಕೋರ್ಟ್ ಆಜಂ ಖಾನ್ ಗೆ 25 ಸಾವಿರ ರೂಪಾಯಿ ದಂಡ ಹಾಗೂ 3 ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ.
2019ರಲ್ಲಿ ಆಜಂ ಖಾನ್ ಧ್ವೇಷದ ಭಾಷಣ ಮಾಡಿದ್ದರು. ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ಪ್ರಚೋದನಕಾರಿ ಭಾಷಣ ಮಾಡಿದ್ದ ಹಿನ್ನೆಲೆಯಲ್ಲಿ ಆಜಂ ಖಾನ್ ವಿರುದ್ಧ 153 ಎ, 505ಎ ಸೆಕ್ಷನ್ 125ರ ಅಡಿ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಕೋರ್ಟ್ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಇದೇ ವೇಳೆ ಮೂರು ವರ್ಷ ಜೈಲು ಶಿಕ್ಷೆ ಬೆನ್ನಲ್ಲೇ ಆಜಾಂ ಖಾನ್ ಅವರಿಗೆ ಜಾಮೀನು ಕೂಡು ಮಂಜೂರಾಗಿದೆ ಎಂದು ತಿಳಿದುಬಂದಿದೆ.