alex Certify BIG NEWS: ಉರಿಗೌಡ, ನಂಜೇಗೌಡ ಸಿನಿಮಾ ವಿಚಾರ; ಆದಿಚುಂಚನಗಿರಿ ಶ್ರೀ ಭೇಟಿಯಾಗುವವರೆಗೆ ಈ ಬಗ್ಗೆ ಮಾತನಾಡಲ್ಲ ಎಂದ ಸಚಿವ ಮುನಿರತ್ನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಉರಿಗೌಡ, ನಂಜೇಗೌಡ ಸಿನಿಮಾ ವಿಚಾರ; ಆದಿಚುಂಚನಗಿರಿ ಶ್ರೀ ಭೇಟಿಯಾಗುವವರೆಗೆ ಈ ಬಗ್ಗೆ ಮಾತನಾಡಲ್ಲ ಎಂದ ಸಚಿವ ಮುನಿರತ್ನ

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ಉರಿಗೌಡ, ನಂಜೇಗೌಡ ಸಿನಿಮಾ ನಿರ್ಮಾಣ ವಿಚಾರ ನಿರ್ಮಾಲಾನಂದನಾಥ ಶೀಗಳ ಅಂಗಳಕ್ಕೆ ತಲುಪಿದ್ದು, ಶ್ರೀಗಳ ಭೇಟಿ ಬಳಿಕ ಎಲ್ಲವನ್ನೂ ಮಾತನಾಡುವುದಾಗಿ ಸಚಿವ ಮುನಿರತ್ನ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ತೋಟಗಾರಿಕಾ ಸಚಿವ ಮುನಿರತ್ನ, ನಾನೊಬ್ಬ ನಿರ್ಮಾಪಕನಾಗಿ ಉರಿಗೌಡ, ನಂಜೇಗೌಡ ಅವರ ಸಿನಿಮಾ ಮಾಡೋಣ ಅಂತಿದೀನಿ. ಈ ಬಗ್ಗೆ ಚರ್ಚಿಸಲು ನಾಳೆ ನಿರ್ಮಲಾನಂದನಾಥ ಸ್ವಾಮೀಜಿ ಕರೆದಿದ್ದಾರೆ ಎಂದರು.

ನಾಳೆ ಬೆಳಿಗ್ಗೆ ನಿರ್ಮಲಾನಂದನಾಥ ಶ್ರೀಗಳನ್ನು ಭೇಟಿ ಮಾಡುತ್ತೇನೆ. ಇತಿಹಾಸದ ಬಗ್ಗೆ ಮಾತನಾಡುವವರು ಜಾತಿ ಬಣ್ಣ ಕೊಡಬಾರದು. ಉರಿಗೌಡ, ದೊಡ್ಡ ನಂಜೇಗೌಡ ಕುರಿತ ಸಿನಿಮಾ ವಿಚಾರ ಈಗ ಚರ್ಚೆಯಲ್ಲಿದೆ. ಆದಿಚುಂಚನಗಿರಿ ಶ್ರೀ ಭೇಟಿಯಾಗುವವರೆಗೆ ಚಿತ್ರದ ಬಗ್ಗೆ ಮಾತನಾಡಲ್ಲ ಎಂದು ಹೇಳಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...