alex Certify BIG NEWS: ಉಭಯ ಸದನಗಳ ಕಲಾಪ ಅನಿರ್ಧಿಷ್ಟಾವಧಿಗೆ ಮುಂದೂಡಿಕೆ; ಬಿಜೆಪಿ-ಜೆಡಿಎಸ್ ನಡುವೆ ಮ್ಯಾಚ್ ಫಿಕ್ಸಿಂಗ್ ಆಗಿದೆ; ಚರ್ಚೆಗೆ ಅವಕಾಶವನ್ನೇ ಕೊಟ್ಟಿಲ್ಲ ಎಂದು ಸಿದ್ದರಾಮಯ್ಯ ಆರೋಪ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಉಭಯ ಸದನಗಳ ಕಲಾಪ ಅನಿರ್ಧಿಷ್ಟಾವಧಿಗೆ ಮುಂದೂಡಿಕೆ; ಬಿಜೆಪಿ-ಜೆಡಿಎಸ್ ನಡುವೆ ಮ್ಯಾಚ್ ಫಿಕ್ಸಿಂಗ್ ಆಗಿದೆ; ಚರ್ಚೆಗೆ ಅವಕಾಶವನ್ನೇ ಕೊಟ್ಟಿಲ್ಲ ಎಂದು ಸಿದ್ದರಾಮಯ್ಯ ಆರೋಪ

ಬೆಂಗಳೂರು: ವಿಧಾನಮಂಡಲ ಅಧಿವೇಶನದ ಕೊನೇ ದಿನವಾದ ಇಂದು ಉಭಯ ಸದನಗಳು ಯಾವುದೇ ಅರ್ಥಪೂರ್ಣ ಚರ್ಚೆಯಿಲ್ಲದೇ ಗದ್ದಲ-ಕೋಲಾಹಲಗಳಲ್ಲಿಯೇ ಮುಗಿದಿದ್ದು, ಅನಿರ್ಧಿಷ್ಟಾವಧಿಗೆ ಕಲಾಪವನ್ನು ಮುಂದೂಡಲಾಯಿತು.

ಬೆಂಗಳೂರು ಪ್ರವಾಹ, ಪಿ ಎಸ್ ಐ ಹಗರಣ, ಲಗ್ಗೆರೆ ಭೂ ಕಬಳಿಕೆ, ಬಿಎಂಎಸ್ ಟ್ರಸ್ಟ್ ಅಕ್ರಮ ವಿಚಾರದ ಬಗ್ಗೆ ಪ್ರಸ್ತಾಪವಾಯಿತಾದರೂ ಸಮರ್ಪಕವಾದ ಚರ್ಚೆ ನಡೆದಿಲ್ಲ. 40% ಕಮಿಷನ್ ಆರೋಪದ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆಗೂ ಅವಕಾಶ ಸಿಕ್ಕಿಲ್ಲ ಎಂದು ಕಾಂಗ್ರೆಸ್ ಆರೋಪಿಸಿದೆ.

ವಿಧಾನಸಭಾ ಕಲಾಪ ಬೆಳಿಗ್ಗೆ ಆರಂಭವಾಗುತಿದ್ದಂತೆಯೇ ಬಿಎಂಎಸ್ ಅಕ್ರಮದ ಬಗ್ಗೆ ಜೆಡಿಎಸ್ ಸದಸ್ಯರು ವಿಷಯ ಪ್ರಸ್ತಾಪಿಸಿ ದಾಖಲೆಗಳನ್ನು ಮುಂದಿಟ್ಟು ಸಚಿವ ಅಶ್ವತ್ಥನಾರಾಯಣ ರಾಜೀನಾಮೆಗೆ ಆಗ್ರಹಿಸಿದರು. ಸದನದಲ್ಲಿ ಧರಣಿ ಆರಂಭವಾಗುತ್ತಿದ್ದಂತೆ ಸ್ಪೀಕರ್ ಕಾಗೇರಿ ಸಂಧಾನ ಸಭೆ ನಡೆಸಿದರು ಆದರೆ ಸರ್ಕಾರ ತನಿಖೆಗೆ ಒಪ್ಪದ ಕಾರಣ ಸಭೆ ವಿಫಲವಾಯಿತು. ಬಳಿಕ ಆರಂಭವಾದ ಕಲಾಪದ ವೇಳೆ ಜೆಡಿಎಸ್ ಸದಸ್ಯರು ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಪ್ರತಿಭಟನೆ ಮುಂದುವರೆಸಿದರು. ಮತ್ತೊಂದೆಡೆ ಕಾಂಗ್ರೆಸ್ ಸದಸ್ಯರು ಪೇಸಿಎಂ ಪೋಸ್ಟರ್ ಹಿಡಿದು ಧರಣಿ ನಡೆಸಿದರು. ಗದ್ದಲ-ಕೋಲಾಹಲಗಳ ನಡುವೆಯೇ ಸ್ಪೀಕರ್ ಕಾಗೇರಿ ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ವಿಧೇಯಕಗಳ ಮಂಡನೆಗೆ ಸೂಚಿಸಿದ್ದರಿಂದ ಸಿಎಂ ಕೆಲ ವಿಧೇಯಕಗಳನ್ನು ಮಂಡಿಸಿದರು.

ಬಳಿಕ ರಾಜ್ಯ ಸರ್ಕಾರದ 40% ಕಮಿಷನ್ ಬಗ್ಗೆ ಕಾಂಗ್ರೆಸ್ ನಾಯಕರು ಪ್ರಸ್ತಾಪಿಸುತ್ತಿದ್ದಂತೆ ಕಾಂಗ್ರೆಸ್ ವಿರುದ್ಧ ಬಿಜೆಪಿ ನಾಯಕರು ಭ್ರಷ್ಟಾಚಾರದ ಪೋಸ್ಟರ್ ಹಿಡಿದು ಘೋಷಣೆ ಕೂಗಲಾರಂಭಿಸಿದರು. 40% ಕಮಿಷನ್ ಬಗ್ಗೆ ಚರ್ಚಿಸಲು ಸರ್ಕಾರ ಅವಕಾಶಾವನ್ನೇ ನೀಡುತ್ತಿಲ್ಲ. ಕೊನೆ ದಿನದ ಅಧಿವೇಶನದ ವೇಳೆ ಜೆಡಿಎಸ್ ಹಾಗೂ ಬಿಜೆಪಿ ನಾಯಕರು ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡು ಬಂದಿದ್ದಾರೆ. ಹಾಗಾಗಿ ಕಾಂಗ್ರೆಸ್ ನವರಿಗೆ ಚರ್ಚೆಗೆ ಅವಕಾಶ ಕೊಡುತ್ತಿಲ್ಲ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು. ಸದದಲ್ಲಿ ಗದ್ದಲ ಆರಂಭವಾಗುತ್ತಿದ್ದಂತೆ ಸ್ಪೀಕರ್ ಕಾಗೇರಿ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದರು.

ಇತ್ತ ವಿಧಾನಪರಿಷತ್ ನಲ್ಲಿಯೂ ಬಿಎಂಎಸ್ ಅಕ್ರಮದ ಬಗ್ಗೆ ಸಚಿವರ ವಿರುದ್ಧ ಜೆಡಿಎಸ್ ಸದಸ್ಯರು ಧರಣಿ ನಡೆಸಿದರು. ಮತ್ತೊಂದೆಡೆ ಸರ್ಕಾರದ ಭ್ರಷ್ಟಾಚಾರ ಹಾಗೂ ಪಿಎಸ್ ಐ ಸ್ಕ್ಯಾಮ್, ಪೇಸಿಎಂ ಪೋಸ್ಟರ್ ಹಿಡಿದು ಕಾಂಗ್ರೆಸ್ ಸದಸ್ಯರು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ಗಲಾಟೆ ನಡುವೆಯೂ ಸಭಾಪತಿ ಮಲ್ಕಾಪೂರೆ ಹಲವು ವಿಧೇಯಕಗಳು ಅಂಗೀಕಾರವಾಗಿರುವುದಾಗಿ ಘೋಷಿಸಿದರು. ಜೆಡಿಎಸ್ ಸದಸ್ಯರು ಒಂದು ಹಂತದಲ್ಲಿ ಪರಿಷತ್ ಬಾವಿಗಿಳಿದು ಸಚಿವ ಅಶ್ವತ್ಥನಾರಾಯಣ ರಾಜೀನಾಮೆಗೆ ಒತ್ತಾಯಿಸಿ ಧರಣಿ ನಡೆಸಿದರು. ಪರಿಷತ್ ಕಲಾಪದಲ್ಲಿಯೂ ಕೊನೇ ದಿನ ಅರ್ಥಪೂರ್ಣ ಚರ್ಚೆಗಳು ನಡೆಯದೇ ಜೆಡಿಎಸ್ ಸದಸ್ಯರ ಗದ್ದಲಕ್ಕೆ ಕಲಾಪ ಬಲಿಯಾಯಿತು. ಬಳಿಕ ಸಭಾಪತಿಗಳು ಅನಿರ್ಧಿಷ್ಟಾವಧಿಗೆ ಕಲಾಪ ಮುಂದೂಡಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...