alex Certify BIG NEWS: ಉತ್ತರ ಕರ್ನಾಟಕವನ್ನು ಇನ್ನಿಲ್ಲದಂತೆ ಕಾಡಲಿದೆ ಮೈ ಕೊರೆಯುವ ಚಳಿ; ಹವಾಮಾನ ಇಲಾಖೆ ಮುನ್ಸೂಚನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಉತ್ತರ ಕರ್ನಾಟಕವನ್ನು ಇನ್ನಿಲ್ಲದಂತೆ ಕಾಡಲಿದೆ ಮೈ ಕೊರೆಯುವ ಚಳಿ; ಹವಾಮಾನ ಇಲಾಖೆ ಮುನ್ಸೂಚನೆ

ಚಳಿಗಾಲದ ಆರಂಭದಲ್ಲೇ ಕರ್ನಾಟಕದಲ್ಲಿ ದಾಖಲೆ, ಬಾಗಲಕೋಟೆಯಲ್ಲಿ ಕೇವಲ 9.80 ಡಿಗ್ರಿ ತಾಪಮಾನ  ದಾಖಲು!- Kannada Prabhaಬೆಂಗಳೂರು: ಈ ಬಾರಿ ಮಳೆಯ ಅಬ್ಬರದಂತೆಯೇ ರಾಜ್ಯದ ಜನರನ್ನು ಚಳಿ ಕೂಡ ಕಾಡಲಿದ್ದು, ಅದರಲ್ಲಿಯೂ ವಿಶೇಷವಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಮೈಕೊರೆಯುವ ಚಳಿಗೆ ಜನರು ತತ್ತರಿಸಲಿದ್ದಾರೆ ಎಂದು ತಜ್ಞರು ಮಾಹಿತಿ ನೀಡಿದ್ದಾರೆ.

ಧಾರವಾಡ ಕೃಷಿ ವಿಸ್ವವಿದ್ಯಾಲಯದ ಕೃಷಿ ಹವಾಮಾನ ಮುನ್ಸೂಚನಾ ಕೇಂದ್ರದ ಡಾ. ಆರ್.ಹೆಚ್.ಪಾಟೀಲ್ ಈ ಬಾರಿ ಚಳಿ ಬಗ್ಗೆ ಮುನ್ಸೂಚನೆ ನೀಡಿದ್ದು, ರಾಜ್ಯದಲ್ಲಿ ಚಳಿ ಡಿಸೆಂಬರ್ ಮೂರನೇ ವಾರದ ಬಳಿಕ ಹೆಚ್ಚಾಗಬೇಕಿತ್ತು. ಆದರೆ ಈ ಬಾರಿ ನವೆಂಬರ್ ಆರಂಭದಿಂದಲೇ ಶುರುವಾಗಿದೆ. ನವೆಂಬರ್ 24ರ ಬಳಿಕ ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಚಳಿ ಇನ್ನಷ್ಟು ಹೆಚ್ಚಾಗಲಿದ್ದು, ಜನರನ್ನು ನಡುಗಿಸಲಿದೆ ಎಂದು ತಿಳಿಸಿದ್ದಾರೆ.

ಈಗಾಗಲೇ ಹುಬ್ಬಳ್ಳಿ-ಧಾರವಾಡ, ಗದಗ, ರಾಯಚೂರು, ಕೊಪ್ಪಳ, ಬೆಳಗಾವಿ ಸೇರಿದಂತೆ ಹಲವೆಡೆಗಳಲ್ಲಿ ಮೈ ಕೊರೆಯುವ ಚಳಿಗೆ ಜನರು ಬೆ. 10 ಗಂಟೆಯಾದರೂ ಮನೆಯಿಂದ ಹೊರಬರಲಾಗದ ಸ್ಥಿತಿ ನಿರ್ಮಾಣವಾಗಿದೆ. ಇನ್ನು ನವೆಂಬರ್ 24ರ ಬಳಿಕ ಆರಂಭವಾಗಲಿರುವ ಚಳಿ ಜನರ ಇನ್ನಿಲ್ಲದಂತೆ ಕಾಡಲಿದೆ ಎಂದು ಹೇಳಲಾಗುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...