alex Certify BIG NEWS: ಉಕ್ರೇನ್ ನಗರಗಳನ್ನು ರಷ್ಯಾ ದಿಗ್ಬಂಧಿಸುತ್ತಿದೆ ಎಂದ ​ಮೇಯರ್​​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಉಕ್ರೇನ್ ನಗರಗಳನ್ನು ರಷ್ಯಾ ದಿಗ್ಬಂಧಿಸುತ್ತಿದೆ ಎಂದ ​ಮೇಯರ್​​

ರಷ್ಯಾದ ಸೇನೆಯು ಉಕ್ರೇನ್​ನ ಮೇಲೆ ದಾಳಿ ನಡೆಸಿದಾಗಿನಿಂದ ಉಕ್ರೇನ್​ನ ಸ್ಥಿತಿಯು ದಿನದಿಂದ ದಿನಕ್ಕೆ ಹದಗೆಡುತ್ತಿದೆ.

ಉಕ್ರೇನ್​ ರಷ್ಯಾದ ಆಕ್ರಮಣಗಳಿಗೆ ತಕ್ಕ ಪ್ರತಿಕ್ರಿಯೆಯನ್ನು ನೀಡುತ್ತಿದ್ದರೂ ಸಹ ದೈತ್ಯ ರಾಷ್ಟ್ರದ ಆಕ್ರಮಣವು ಉಕ್ರೇನ್​​ಗೆ ಭಾರೀ ಸಂಕಷ್ಟವನ್ನು ನೀಡುತ್ತಿದೆ.

ಈ ನಡುವೆ ಮಾರಿಯುಪೋಲ್​ನ ಮೇಯರ್​ ವಾಡಿಮ್​ ಬೊಯಿಚೆಂಕೋ ರಷ್ಯಾದ ಪಡೆಗಳು ನಗರವನ್ನು ದಿಗ್ಭಂಧನ ಮಾಡಲು ಯತ್ನಿಸುತ್ತಿವೆ ಎಂದು ಹೇಳಿದ್ದಾರೆ. ವಿಶ್ವಸಂಸ್ಥೆ ಹಕ್ಕುಗಳ ಮುಖ್ಯಸ್ಥರು ಉಕ್ರೇನ್​ನಲ್ಲಿ ಹತ್ತಾರು ಮಿಲಿಯನ್​ ಜನರು ಮಾರಣಾಂತಿಕ ಅಪಾಯದಲ್ಲಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ.
ನಮಗೆ ವಿದ್ಯುತ್​ ಇಲ್ಲ, ನೀರು ಪೂರೈಕೆ ಇಲ್ಲ, ನಮಗೆ ವ್ಯವಸ್ಥೆ ಕೂಡ ಸರಿಯಾಗಿ ಸಿಗುತ್ತಿಲ್ಲ. ರಷ್ಯಾದವರು ನಮ್ಮ ನಗರವನ್ನು ಸಂಪೂರ್ಣವಾಗಿ ನಾಶ ಮಾಡುತ್ತಿದ್ದಾರೆ ಎಂದು ವಿಡಿಯೋ ಸಂದರ್ಶನದಲ್ಲಿ ವಾಡಿಮ್​ ಬೊಯಿಚೆಂಕೋ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...