alex Certify BIG NEWS: ಇನ್‌ಸ್ಟಾಗ್ರಾಮ್‌ ಅನ್ನು ಬೇಕಾಬಿಟ್ಟಿ ಬಳಸುವಂತಿಲ್ಲ; ಇನ್ಮೇಲೆ ಐಡಿ ಕಾರ್ಡ್‌ ಅಪ್ಲೋಡ್‌ ಮಾಡುವುದು ಕಡ್ಡಾಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಇನ್‌ಸ್ಟಾಗ್ರಾಮ್‌ ಅನ್ನು ಬೇಕಾಬಿಟ್ಟಿ ಬಳಸುವಂತಿಲ್ಲ; ಇನ್ಮೇಲೆ ಐಡಿ ಕಾರ್ಡ್‌ ಅಪ್ಲೋಡ್‌ ಮಾಡುವುದು ಕಡ್ಡಾಯ

ಸಾಮಾಜಿಕ ಜಾಲತಾಣಕ್ಕೆ ಮಾರು ಹೋಗಿರುವವರೆಲ್ಲ ಈಗ ಇನ್‌ಸ್ಟಾಗ್ರಾಮ್ನಲ್ಲಿ ಆಕ್ಟಿವ್‌ ಆಗ್ತಿದ್ದಾರೆ. ಚಿಕ್ಕ ಮಕ್ಕಳು ಕೂಡ ಇನ್‌ಸ್ಟಾದಲ್ಲಿ ಎಲ್ಲಾ ಕಂಟೆಂಟ್‌ಗಳನ್ನು ವೀಕ್ಷಿಸಲು ಅವಕಾಶ ಸಿಗ್ತಾ ಇದೆ. ಇದಕ್ಕೆ ಕಡಿವಾಣ ಹಾಕಲು ಮೆಟಾ-ಮಾಲೀಕತ್ವದ ಇನ್‌ಸ್ಟಾಗ್ರಾಮ್ ಮುಂದಾಗಿದೆ. ವಯಸ್ಸಿಗೆ ಸೂಕ್ತವಾದ ಅನುಭವಗಳನ್ನು ಒದಗಿಸಲು ಎಲ್ಲಾ ಬಳಕೆದಾರರಿಗೆ ಐಡಿ ಕಾರ್ಡ್‌ ಕಡ್ಡಾಯ ಮಾಡಲು ಮುಂದಾಗಿದೆ.

ಬಳಕೆದಾರರ ವಯಸ್ಸನ್ನು ಪರಿಶೀಲಿಸಲು ಡ್ರೈವಿಂಗ್‌ ಲೈಸನ್ಸ್‌ನಂತಹ ಐಡಿ ಕಾರ್ಡ್‌ ಅನ್ನು ಅಪ್ಲೋಡ್‌ ಮಾಡುವ ಬಗ್ಗೆ ಪರಿಶೀಲಿಸುತ್ತಿರುವುದಾಗಿ ಹೇಳಿದೆ. ಈ ಪ್ರಯತ್ನ ಅಮೆರಿಕದಿಂದ ಶುರುವಾಗಲಿದೆ. 18 ಅಥವಾ 18ಕ್ಕಿಂತ ಹೆಚ್ಚು ವಯಸ್ಸಿನವರು ಯಾರಾದರೂ ತಮ್ಮ ಜನ್ಮ ದಿನಾಂಕವನ್ನು Instagram ನಲ್ಲಿ ತಿದ್ದಲು ಯತ್ನಿಸಿದರೆ ಅದನ್ನು ಖುದ್ದು ಇನ್‌ಸ್ಟಾದಿಂದಲೇ ಪರಿಶೀಲನೆ ನಡೆಸಲಾಗುತ್ತದೆ.

ಗುರುತಿನ ಚೀಟಿಯನ್ನು ಅಪ್ಲೋಡ್‌ ಮಾಡುವ ಮೂಲಕ ತಮ್ಮ ವಯಸ್ಸನ್ನು ದೃಢೀಕರಿಸಬಹುದು. ವೀಡಿಯೊ ಸೆಲ್ಫಿ ರೆಕಾರ್ಡ್ ಮಾಡಬಹುದು ಅಥವಾ ವಯಸ್ಸನ್ನು ಪರಿಶೀಲಿಸಲು ಪರಸ್ಪರ ಸ್ನೇಹಿತರನ್ನು ಕೇಳಬಹುದು. ದೃಢೀಕರಣ ಮಾಡುವ ವ್ಯಕ್ತಿಯು ಕನಿಷ್ಠ 18 ವರ್ಷ ವಯಸ್ಸಿನವರಾಗಿರಬೇಕು.

ಹದಿಹರೆಯದವರು ಮತ್ತು ವಯಸ್ಕರು ಅವರ ವಯೋಮಾನಕ್ಕೆ ತಕ್ಕಂತೆ ಅನುಭವ ಹೊಂದಬೇಕು. ಈ ಕಾರಣಕ್ಕೆ ವಯಸ್ಸನ್ನು ಖಚಿತಪಡಿಸಿಕೊಳ್ಳಲು ಇನ್‌ಸ್ಟಾ ವೇದಿಕೆ ಮುಂದಾಗಿದೆ. ಜೊತೆಗೆ ಬಳಕೆದಾರರ ಗೌಪ್ಯತೆ ಕಾಪಾಡುವ ನಿಟ್ಟಿನಲ್ಲಿ ಆನ್‌ಲೈನ್‌ನಲ್ಲಿ ವಯಸ್ಸಿನ ಪರಿಶೀಲನೆಯಲ್ಲಿ ಪರಿಣತಿ ಹೊಂದಿರುವ Yoti ಕಂಪನಿಯೊಂದಿಗೆ ಇನ್‌ಸ್ಟಾಗ್ರಾಮ್‌ ಸಹಭಾಗಿತ್ವವನ್ನು ಕೂಡ ಹೊಂದಿದೆ.

ಬಳಕೆದಾರರ IDಯನ್ನು ಸರ್ವರ್‌ಗಳಲ್ಲಿ ಸುರಕ್ಷಿತವಾಗಿ ಸಂಗ್ರಹಿಸುವುದಾಗಿ ಭರವಸೆ ನೀಡಿದೆ. ಅಷ್ಟೇ ಅಲ್ಲ 30 ದಿನಗಳಲ್ಲಿ ಅದನ್ನು ಡಿಲೀಟ್‌ ಕೂಡ ಮಾಡಲಿದೆಯಂತೆ. ಬಳಕೆದಾರರು ತಮ್ಮ ವಯಸ್ಸನ್ನು ಪರಿಶೀಲಿಸಲು ವೀಡಿಯೊ ಸೆಲ್ಫಿಯನ್ನು ಅಪ್‌ಲೋಡ್ ಮಾಡುವ ಆಪ್ಷನ್‌ ಆಯ್ಕೆ ಮಾಡಬಹುದು.

Taboola ಪ್ರಾಯೋಜಿತ ಲಿಂಕ್‌ಗಳಿಂದ ಈ ಪ್ರಕ್ರಿಯೆ ಮಾಡಬಹುದಾಗಿದೆ.

2019 ರಲ್ಲಿ, ಇನ್‌ಸ್ಟಾಗ್ರಾಮ್‌ ಮೊದಲು ಸೈನ್ ಅಪ್ ಮಾಡುವಾಗ ತಮ್ಮ ವಯಸ್ಸನ್ನು ಒದಗಿಸುವಂತೆ ಬಳಕೆದಾರರನ್ನು ಕೇಳುತ್ತಿತ್ತು. ಇನ್‌ಸ್ಟಾಗ್ರಾಮ್‌ಗೆ ಸೈನ್ ಅಪ್ ಮಾಡಲು ಕನಿಷ್ಠ 13 ವರ್ಷ ವಯಸ್ಸಿನವರಾಗಿರಬೇಕು. ಕೆಲವು ದೇಶಗಳಲ್ಲಿ, ಈ ಕನಿಷ್ಠ ವಯಸ್ಸು ಹೆಚ್ಚಾಗಿರುತ್ತದೆ.

ಹದಿಹರೆಯದವರಿಗೆ (ವಯಸ್ಸು 13-17), Instagram ಖಾಸಗಿ ಖಾತೆಗಳಲ್ಲಿ ಡೀಫಾಲ್ಟ್ ಮಾಡುವುದು, ಅವರಿಗೆ ತಿಳಿದಿಲ್ಲದ ವಯಸ್ಕರಿಂದ ಅನಗತ್ಯ ಸಂಪರ್ಕವನ್ನು ತಡೆಯುವುದು ಮತ್ತು ಜಾಹೀರಾತುಗಳೊಂದಿಗೆ ಜಾಹೀರಾತುದಾರರು ಅವರನ್ನು ತಲುಪುವ ಆಯ್ಕೆಗಳನ್ನು ಮಿತಿಗೊಳಿಸಲು ಇನ್‌ಸ್ಟಾಗ್ರಾಮ್‌ ಕ್ರಮ ಕೈಗೊಳ್ಳುತ್ತಿದೆ.

ನಿಮ್ಮ ವಯಸ್ಸನ್ನು ಪರಿಶೀಲಿಸಲು ನೀವು ವೀಡಿಯೊ ಸೆಲ್ಫಿಯನ್ನು ಅಪ್‌ಲೋಡ್ ಮಾಡಿದರೆ ನಿಮ್ಮ ವಯಸ್ಸನ್ನು ದೃಢೀಕರಿಸಿದ ನಂತರ ಮೆಟಾ ಮತ್ತು ಯೋಟಿ ಅದನ್ನು ಅಳಿಸುತ್ತದೆ. ನಿಮ್ಮ ವೀಡಿಯೊವನ್ನು ಬೇರೆ ಯಾವುದಕ್ಕೂ ಬಳಸಲಾಗುವುದಿಲ್ಲ. ನೀವು ಐಡಿಯನ್ನು ಅಪ್‌ಲೋಡ್ ಮಾಡಲು ಮುಂದಾದರೆ ಆ ನಕಲನ್ನು ಕಳುಹಿಸಿ, ಅದನ್ನು ಎನ್‌ಕ್ರಿಪ್ಟ್ ಮಾಡಲಾಗುತ್ತದೆ ಮತ್ತು ಸುರಕ್ಷಿತವಾಗಿ ಸಂಗ್ರಹಿಸಲಾಗುತ್ತದೆ ಎಂದು Instagram ಹೇಳಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...