alex Certify BIG NEWS: ಇಂದು ಮಧ್ಯಾಹ್ನ ನಡೆಯಲಿದೆ ವಿಸ್ಮಯಕಾರಿ ಘಟನೆ, ನಿಮ್ಮ ನೆರಳೇ ನಿಮಗೆ ಕಾಣಿಸದು….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಇಂದು ಮಧ್ಯಾಹ್ನ ನಡೆಯಲಿದೆ ವಿಸ್ಮಯಕಾರಿ ಘಟನೆ, ನಿಮ್ಮ ನೆರಳೇ ನಿಮಗೆ ಕಾಣಿಸದು….!

ಇಂದು ಜೂನ್ 21. ಇದನ್ನು ವರ್ಷದ ಅತಿ ದೊಡ್ಡ ದಿನ ಎಂದೂ ಕರೆಯುತ್ತಾರೆ. ಯಾಕಂದ್ರೆ ಈ ದಿನದಂದು ಬೆಳಕು ದೀರ್ಘಕಾಲ ಉಳಿಯುತ್ತದೆ. ಇನ್ನೊಂದು ವಿಶೇಷ ಅಂದ್ರೆ ಇಂದು ಒಂದು ನಿರ್ದಿಷ್ಟ ಸಮಯದಲ್ಲಿ ನಿಮ್ಮ ನೆರಳು ಸಹ ಕಾಣದಂತೆ ಕಣ್ಮರೆಯಾಗುತ್ತದೆ. ಇಂದು ಮಧ್ಯಾಹ್ನ 12.28ಕ್ಕೆ ನೆರಳು ಮಾಯವಾಗಲಿದೆ, ನಿಮ್ಮ ನೆರಳೇ ನಿಮಗೆ ಕಾಣಿಸುವುದಿಲ್ಲ.

ಮಧ್ಯಪ್ರದೇಶದ ಉಜ್ಜಯನಿಯನ್ನು ವಿಜ್ಞಾನದ ನಗರ ಮತ್ತು ಮಹಾಕಾಲ್ ಧಾರ್ಮಿಕ ನಗರ ಎಂದು ಕರೆಯಲಾಗುತ್ತದೆ. ಅನಾದಿ ಕಾಲದಿಂದಲೂ ಉಜ್ಜಯನಿ ಸಮಯ ಎಣಿಕೆಯ ಕೇಂದ್ರವಾಗಿದೆ. ಇಲ್ಲಿ ಭೂಮಿ, ಸೂರ್ಯ, ಚಂದ್ರ ಮತ್ತು ಕಾಲಚಕ್ರವನ್ನು ವೀಕ್ಷಣಾಲಯದಲ್ಲಿ ಸುಲಭವಾಗಿ ಅರ್ಥಮಾಡಿಕೊಳ್ಳಬಹುದು. ಉಜ್ಜಯನಿಯ ವೀಕ್ಷಣಾಲಯದ ಅಧೀಕ್ಷಕ ರಾಜೇಂದ್ರ ಪ್ರಸಾದ್ ಗುಪ್ತಾ, ಜೂನ್ 21 ರಂದು ಮಧ್ಯಾಹ್ನ 12:28 ಕ್ಕೆ ಕರ್ಕಾಟಕ ಸಂಕ್ರಾಂತಿಯ ಸುತ್ತಲಿನ ಎಲ್ಲಾ ಸ್ಥಳಗಳಲ್ಲಿ ಜನರ ನೆರಳು ಕಣ್ಮರೆಯಾಗುತ್ತದೆ ಎಂದು ಹೇಳುತ್ತಾರೆ.

ಇದು ಮೊದಲ ಬಾರಿಗೆ ಅಲ್ಲ, ಪ್ರತಿ ವರ್ಷ ಸಂಭವಿಸುತ್ತದೆ. ಸೂರ್ಯದೇವನು ವಿಶೇಷ ಸ್ಥಾನದಲ್ಲಿರುವುದರ ಪರಿಣಾಮ ಇದು. ಪ್ರತಿ ವರ್ಷ ಜೂನ್ 21 ರಂದು ಸೂರ್ಯ ಉತ್ತರಾಯಣದಿಂದ ದಕ್ಷಿಣಾಯನಕ್ಕೆ ಪ್ರವೇಶಿಸುತ್ತಾನೆ. ಇದಾದ ಬಳಿಕ ದಿನಗಳು ಕಡಿಮೆಯಾಗುತ್ತವೆ ಮತ್ತು ರಾತ್ರಿಗಳು ಹೆಚ್ಚಾಗುತ್ತವೆ. ಜೂನ್ 21 ರ ದಿನವು 13 ಗಂಟೆ 34 ನಿಮಿಷಗಳು ಮತ್ತು ರಾತ್ರಿ 10 ಗಂಟೆ 26 ನಿಮಿಷಗಳು. ಇದರೊಂದಿಗೆ, ಸೂರ್ಯನ ತೀವ್ರ ಕ್ರಾಂತಿಯು ಈ ದಿನದಂದು 23 ಡಿಗ್ರಿ 26 ನಿಮಿಷಗಳು ಮತ್ತು 15 ಸೆಕೆಂಡುಗಳು. ಈ ದಿನದಂದು ಎಲ್ಲಾ ಜೀವಿಗಳ ನೆರಳು ನಿರ್ದಿಷ್ಟ ಸಮಯದಲ್ಲಿ ಕಣ್ಮರೆಯಾಗಲು ಇದು ಕಾರಣವಾಗಿದೆ.

ವಿಶೇಷ ಸಾಧನದೊಂದಿಗೆ ಉಜ್ಜಯಿನಿಯಲ್ಲಿ ಈ ಘಟನೆಯನ್ನು ನೋಡಬಹುದು. ಭೂಮಿಯು ಸೂರ್ಯನ ಸುತ್ತ ಸುತ್ತುವುದರಿಂದ, ಜೂನ್ 21 ಮತ್ತು 22ರ ನಡುವೆ ಸೂರ್ಯನು ಕರ್ಕಾಟಕ ಸಂಕ್ರಾಂತಿ ವೃತ್ತಕ್ಕೆ ಲಂಬವಾಗಿರುತ್ತದೆ. ಇದರೊಂದಿಗೆ, ಹಗಲನ್ನು ಕಡಿಮೆ ಮಾಡುವ ಮತ್ತು ರಾತ್ರಿ ದೀರ್ಘವಾಗುವ ಪ್ರಕ್ರಿಯೆಯು ಪ್ರಾರಂಭವಾಗುತ್ತದೆ. ಇಂದು ಅಂದರೆ ಜೂನ್ 21 ರಂದು ನೆರಳು ಕಣ್ಮರೆಯಾಗುವ ಈ ಅದ್ಭುತ ಖಗೋಳ ಘಟನೆಯನ್ನು ತೋರಿಸಲು ವಿಶೇಷ ವ್ಯವಸ್ಥೆ ಮಾಡಲಾಗಿದೆ. ಬಿಸಿಲು ಇದ್ದಾಗ, ಮಧ್ಯಾಹ್ನ 12:28 ಕ್ಕೆ ಕೋನ್ ಸಾಧನದ ಮೂಲಕ ನೆರಳು ಮಾಯವಾಗುವುದನ್ನು (ಶೂನ್ಯ) ನೋಡಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...