alex Certify BIG NEWS: ಆರ್​ಸಿಬಿ ತಂಡಕ್ಕೆ ನಾಯಕನಾಗಿ ಫಾಪ್​ ಡು ಪ್ಲೆಸಿಸ್​ ಆಯ್ಕೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಆರ್​ಸಿಬಿ ತಂಡಕ್ಕೆ ನಾಯಕನಾಗಿ ಫಾಪ್​ ಡು ಪ್ಲೆಸಿಸ್​ ಆಯ್ಕೆ..!

ಕೊಹ್ಲಿ ನಾಯಕತ್ವದಿಂದ ಕೆಳಗಿಳಿದ ಬಳಿಕ ಈ ಬಾರಿಯ ಐಪಿಎಲ್​ ಸೀಸನ್​ನಲ್ಲಿ ಆರ್​ಸಿಬಿ ತಂಡದ ನಾಯಕ ಯಾರಾಗ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿತ್ತು. ಈಗ ಈ ಕುತೂಹಲಕ್ಕೆ ತೆರೆ ಬಿದ್ದಿದ್ದು ಮಾರ್ಚ್​ 26ರಿಂದ ಆರಂಭಗೊಳ್ಳಲಿರುವ ಐಪಿಎಲ್​ ಪಂದ್ಯದಲ್ಲಿ ಆರ್​ಸಿಬಿ ತಂಡವನ್ನು ಫಾಪ್​ ಡು ಪ್ಲೆಸಿಸ್​ ಮುನ್ನಡೆಸಲಿದ್ದಾರೆ. ಸೋಮವಾರ ಬೆಂಗಳೂರಿನಲ್ಲಿ ನಡೆದ ಆರ್​ಸಿಬಿ ಅನ್​ಬಾಕ್ಸ್​ ಇವೆಂಟ್​ನಲ್ಲಿ ಈ ವಿಚಾರ ಹೊರಬಿದ್ದಿದೆ.

ಕಳೆದ ವರ್ಷದವರೆಗೂ ಚೆನ್ನೈ ಸೂಪರ್​ ಕಿಂಗ್ಸ್​ ತಂಡದಲ್ಲಿದ್ದ ಫಾಪ್​ ಡುಪ್ಲೆಸಿಸ್​​ರನ್ನು ಈ ಬಾರಿ 7 ಕೋಟಿ ರೂಪಾಯಿಗಳಿಗೆ ಆರ್​ಸಿಬಿ ಖರೀದಿ ಮಾಡಿತ್ತು.

ಆಸ್ಟ್ರೇಲಿಯಾದ ಗ್ಲೆನ್​ ಮ್ಯಾಕ್ಸ್​ವೆಲ್​, ಟೀಂ ಇಂಡಿಯಾದ ದಿನೇಶ್​ ಕಾರ್ತಿಕ್​ ಹಾಗೂ ಡು ಪ್ಲೆಸಿಸ್​ ನಡುವೆ ಯಾರಾಗ್ತಾರೆ ಆರ್​ಸಿಬಿ ನಾಯಕ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿತ್ತು. ಮ್ಯಾಕ್ಸ್​ವೆಲ್​ ಹಾಗೂ ದಿನೇಶ್​ ಕಾರ್ತಿಕ್​ ಅನುಭವಿ ಆಟಗಾರರಾಗಿದ್ದರೂ ಸಹ ದಕ್ಷಿಣ ಆಫ್ರಿಕಾವನ್ನು ಮುನ್ನಡೆಸಿದ ಡು ಪ್ಲೆಸಿಸ್​ ಅನುಭವವೇ ಹೆಚ್ಚು ಎಂದು ಪರಿಗಣಿಸಿ ಫ್ರಾಂಚೈಸಿ ಡುಪ್ಲೆಸಿಸ್​​ರನ್ನು ತಂಡದ ನಾಯಕರನ್ನಾಗಿ ಆಯ್ಕೆ ಮಾಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...