alex Certify BIG NEWS: ಅರಾಜಕತೆ ಸೃಷ್ಟಿಸಲೆಂದೇ ಇಂತಹ ಸಂಚು; ಮಹಾ ಸರ್ಕಾರದಲ್ಲಿ ಕಾಂಗ್ರೆಸ್ ಪಾಲುದಾರಿಕೆಯಿದೆ; ಸಿ.ಟಿ. ರವಿ ಆಕ್ರೋಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಅರಾಜಕತೆ ಸೃಷ್ಟಿಸಲೆಂದೇ ಇಂತಹ ಸಂಚು; ಮಹಾ ಸರ್ಕಾರದಲ್ಲಿ ಕಾಂಗ್ರೆಸ್ ಪಾಲುದಾರಿಕೆಯಿದೆ; ಸಿ.ಟಿ. ರವಿ ಆಕ್ರೋಶ

ಚಿಕ್ಕಮಗಳೂರು: ಕೆಲವರು ಅರಾಜಕತೆ-ಸಂಘರ್ಷ ಸೃಷ್ಟಿಗಾಗಿಯೇ ಇಂತಹ ಸಂಚು ರೂಪಿಸಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟ ಖಂಡನೀಯ, ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಕನ್ನಡ ಬಾವುಟ ಸುಟ್ಟರು. ಇಲ್ಲಿ ಶಿವಾಜಿ ಪ್ರತಿಮೆಗೆ ಮಸಿ ಬಳಿದರು. ಮಹಾರಾಷ್ಟ್ರ ಸರ್ಕಾರದಲ್ಲಿ ಕಾಂಗ್ರೆಸ್ ಕೂಡ ಪಾಲುದಾರಿಕೆ ಹೊಂದಿದೆ. ಕೆಲವರು ಅರಾಜಕತೆ ಸೃಷ್ಟಿಗಾಗಿಯೇ ಇಂತಹ ಕೃತ್ಯವೆಸಗುತ್ತಿದ್ದಾರೆ ಎಂದು ಕಿಡಿಕಾರಿದರು.

ಪ್ರಾಣಿಗಳ ನಡುವೆಯೂ ಇರುತ್ತಾ ವೈಷಮ್ಯ..? ಶ್ವಾನದ ಮೇಲೆ ಕೋತಿಗಳಿರುವ ದ್ವೇಷದ ಬಗ್ಗೆ ಕೇಳಿದ್ರೆ ಶಾಕ್​ ಆಗ್ತೀರಾ..!

ಕರ್ನಾಟಕ-ಮಹಾರಾಷ್ಟ್ರ ಸಂಘರ್ಷ ನಡೆಯಬೇಕು ಎಂಬುದೇ ಕಿಡಿಗೇಡಿಗಳ ಉದ್ದೇಶ. ಅದಕ್ಕಾಗಿ ಇಂತಹ ಸಂಚು ನಡೆಸುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ಲಕ್ಷಾಂತರ ಕನ್ನಡಿಗರಿದ್ದಾರೆ. ಕರ್ನಾಟಕದಲ್ಲಿ ಲಕ್ಷಾಂತರ ಮರಾಠಿಗರಿದ್ದಾರೆ. ನಮ್ಮೆಲ್ಲರ ಭಾವನೆ ರಾಷ್ಟ್ರೀಯತೆ ಜೊತೆ ಹಾಸುಹೊಕ್ಕಾಗಿದೆ. ಆದರೆ ಕೆಲವರು ರಾಷ್ಟ್ರೀಯತೆಗೆ ಧಕ್ಕೆ ತರುವ ಷಡ್ಯಂತ್ರ ನಡೆಸುತ್ತಿದ್ದಾರೆ. ಅಂತಹ ಷಡ್ಯಂತ್ರಕ್ಕೆ ಯಾರೂ ಒಳಗಾಗದೇ ಶಾಂತಿ, ಸೌಹಾರ್ದತೆ ಕಾಪಾಡುವಂತೆ ಮನವಿ ಮಾಡಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...