alex Certify BIG NEWS: ಅಗ್ನಿಶಾಮಕ ದಳಕ್ಕೆ ಈಗ ಮತ್ತಷ್ಟು ಬಲ; 90 ಮೀಟರ್ ಏರಿಯಲ್ ಲ್ಯಾಡರ್ ಫ್ಲಾಟ್ ಫಾರ್ಮ್ ವಾಹನ ಲೋಕಾರ್ಪಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಅಗ್ನಿಶಾಮಕ ದಳಕ್ಕೆ ಈಗ ಮತ್ತಷ್ಟು ಬಲ; 90 ಮೀಟರ್ ಏರಿಯಲ್ ಲ್ಯಾಡರ್ ಫ್ಲಾಟ್ ಫಾರ್ಮ್ ವಾಹನ ಲೋಕಾರ್ಪಣೆ

ದಕ್ಷಿಣ ಭಾರತದಲ್ಲಿಯೇ ಪ್ರಥಮವೆನ್ನಲಾದ ಏರಿಯಲ್ ಲಾಡರ್ ಪ್ಲಾಟ್ಫಾರ್ಮ್, ರಾಜ್ಯ ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಇಲಾಖೆಗೆ ಸೇರ್ಪಡೆಯಾಗಿದ್ದು, ಇದನ್ನು ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಲೋಕಾರ್ಪಣೆಗೊಳಿಸಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು ಇದರ ಸೇರ್ಪಡೆಯಿಂದಾಗಿ ರಾಜ್ಯದ ಅಗ್ನಿಶಾಮಕ ದಳಕ್ಕೆ ದೊಡ್ಡ ಶಕ್ತಿಯನ್ನು ತುಂಬವ ಕೆಲಸ ಮಾಡಲಾಗಿದೆ. ಎತ್ತರದ ಕಟ್ಟಡಗಳು ಇರುವ ಮೆಟ್ರೋ ನಗರಗಳಲ್ಲಿ ಇದು ಅತ್ಯಗತ್ಯವಾಗಿತ್ತು ಎಂದು ಅಭಿಪ್ರಾಯಪಟ್ಟರು.

ಇದುವರೆಗೆ ಬೆಂಗಳೂರಿನ ಅಗ್ನಿಶಾಮಕದಳಕ್ಕೆ 50 ಮೀಟರ್ ನ ಏಣಿ ಇದ್ದು, ಇದೀಗ 90 ಮೀಟರ್ ಎತ್ತರದ ಏಣಿ ಬಂದಿದೆ. ಮುಂಬೈ ಮಹಾನಗರ ಬಿಟ್ಟರೆ ಬೆಂಗಳೂರಿನಲ್ಲಿ ಮಾತ್ರ ಈ ವ್ಯವಸ್ಥೆ ಇದೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

90 ಮೀಟರ್ ಎತ್ತರದವರೆಗೂ ತಲುಪಿ ಬೆಂಕಿಯನ್ನು ನಂದಿಸುವ ಹಾಗೂ ಅಪಾಯದಲ್ಲಿ ಸಿಲುಕಿದ ನಾಗರಿಕರನ್ನು ರಕ್ಷಿಸಲು ಈ ಏರಿಯಲ್ ಲ್ಯಾಡರ್ ಫ್ಲಾಟ್ ಫಾರಂ ನೆರವಾಗಲಿದ್ದು, ಇದನ್ನು ಫಿನ್ಲ್ಯಾಂಡ್ ದೇಶದಿಂದ ತರಿಸಿಕೊಳ್ಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...