alex Certify BIG NEWS: ʼಸುಲಭ ಶೌಚಾಲಯʼಕ್ಕೆ ಮೋದಿ ಹೆಸರಿಡಲಿ; ಕಾಂಗ್ರೆಸ್ ಹೇಳಿಕೆಗೆ ತಿರುಗೇಟು ನೀಡಿದ ಈಶ್ವರಪ್ಪ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ʼಸುಲಭ ಶೌಚಾಲಯʼಕ್ಕೆ ಮೋದಿ ಹೆಸರಿಡಲಿ; ಕಾಂಗ್ರೆಸ್ ಹೇಳಿಕೆಗೆ ತಿರುಗೇಟು ನೀಡಿದ ಈಶ್ವರಪ್ಪ

ಬೆಂಗಳೂರು: ವಿಶ್ವವೇ ಮೆಚ್ಚಿಕೊಂಡ ಪ್ರಧಾನಿ ಮೋದಿ ಬಗ್ಗೆ ಕಾಂಗ್ರೆಸ್ ನಾಯಕರು ಲಘುವಾಗಿ ಹೇಳಿಕೆ ನೀಡಿದ್ದಾರೆ. ಇವರಾಡಿದ ಮಾತುಗಳನ್ನು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಒಪ್ಪುತ್ತಾರೆಯೇ? ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಪ್ರಶ್ನಿಸಿದ್ದಾರೆ.

ಕಾಂಗ್ರೆಸ್ ಮುಖಂಡ ಬಿ.ಕೆ.ಹರಿಪ್ರಸಾದ್, ಸುಲಭ ಶೌಚಾಲಯಕ್ಕೆ ಮೋದಿ ಹೆಸರಿಡಲಿ ಎಂದು ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ನಾಯಕರ ಈ ಹೇಳಿಕೆ ಯಾರಿಗೆ ತಾನೆ ಸಿಟ್ಟು ತರಲ್ಲ, ಅದಕ್ಕೆ ನಾನು ಹಾಗೆ ಮಾತನಾಡಿದ್ದೇನೆ. ಬೈದಿದ್ದೇನೆ ಎಂದು ಕೈ ನಾಯಕರ ವಿರುದ್ಧದ ಹೇಳಿಕೆಗೆ ತಿರುಗೇಟು ನೀಡಿದರು.

ಕೂದಲೆಳೆಯಲ್ಲಿ ಪದಕ ವಂಚಿತರಿಗೆ ಟಾಟಾ ಮೋಟರ್ಸ್‌ನಿಂದ ಅರ್ಥಪೂರ್ಣ ಸನ್ಮಾನ

ನನ್ನ ಪದಬಳಕೆ ತಪ್ಪಿನ ಅರಿವಾಗಿ ಕ್ಷಮೆ ಯಾಚಿಸಿದ್ದೇನೆ. ಬಿ.ಕೆ.ಹರಿಪ್ರಸಾದ್ ಆಡಿದ ಮಾತುಗಳನ್ನು ಸ್ವತಃ ಕಾಂಗ್ರೆಸ್ ನಾಯಕರು ಒಪ್ಪಿಕೊಳ್ಳುತ್ತಾರಾ? ಪ್ರಧಾನಿ ಬಗ್ಗೆ ಅವರು ಆಡಿದ ಮಾತು ಸರಿಯೇ? ಹರಿಪ್ರಸಾದ್ ಕ್ಷಮೆ ಕೇಳುವಂತೆ ನಾನು ಒತ್ತಾಯಿಸಲ್ಲ, ಅದು ಅವರಿಗೆ ಬಿಟ್ಟ ವಿಚಾರ ಎಂದು ಹೇಳಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...