alex Certify BIG NEWS: ʼಮುಸ್ಲಿಂ ಹುಡುಗಿಯರು 16 ವರ್ಷಕ್ಕೆ ಮದುವೆಯಾಗಬಹುದುʼ; ಅಪ್ರಾಪ್ತೆಯ ವಿವಾಹ ಎತ್ತಿಹಿಡಿದ ಹೈಕೋರ್ಟ್‌ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ʼಮುಸ್ಲಿಂ ಹುಡುಗಿಯರು 16 ವರ್ಷಕ್ಕೆ ಮದುವೆಯಾಗಬಹುದುʼ; ಅಪ್ರಾಪ್ತೆಯ ವಿವಾಹ ಎತ್ತಿಹಿಡಿದ ಹೈಕೋರ್ಟ್‌

ಪಂಜಾಬ್‌ ಮತ್ತು ಹರಿಯಾಣ ಹೈಕೋರ್ಟ್‌ 16 ವರ್ಷ ವಯಸ್ಸಿನ ಮುಸ್ಲಿಂ ಹುಡುಗಿಯ ವಿವಾಹವನ್ನು ಎತ್ತಿಹಿಡಿದಿದೆ. 16ರ ಹುಡುಗಿ ಮತ್ತು 21ರ ಯುವಕ ಮದುವೆಯಾಗಿದ್ದು, ಈ ದಂಪತಿಗೆ ಕುಟುಂಬ ಸದಸ್ಯರಿಂದ ರಕ್ಷಣೆ ಕೂಡ ನೀಡಿದೆ. 16 ವರ್ಷಕ್ಕಿಂತ ಮೇಲ್ಪಟ್ಟ ಮುಸ್ಲಿಂ ಹುಡುಗಿ ತನ್ನ ಆಯ್ಕೆಯ ವ್ಯಕ್ತಿಯೊಂದಿಗೆ ವಿವಾಹದ ಒಪ್ಪಂದಕ್ಕೆ ಒಳಪಡಲು ಸಮರ್ಥಳು ಎಂದು ಹೈಕೋರ್ಟ್‌ ತೀರ್ಪಿತ್ತಿದೆ.

ಪಠಾಣ್‌ಕೋಟ್ ಮೂಲದ ಈ ಮುಸ್ಲಿಂ ದಂಪತಿ ರಕ್ಷಣೆ ಕೋರಿ ಕೋರ್ಟ್‌ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಸ್ಜಿತ್ ಸಿಂಗ್ ಬೇಡಿ ಅವರ ಏಕಸದಸ್ಯ ಪೀಠ ಈ ಆದೇಶ ನೀಡಿದೆ. “ಅರ್ಜಿದಾರರು ತಮ್ಮ ಕುಟುಂಬದ ಸದಸ್ಯರ ಇಚ್ಛೆಗೆ ವಿರುದ್ಧವಾಗಿ ಮದುವೆಯಾದ ಕಾರಣ, ಅವರು ಭಾರತದ ಸಂವಿಧಾನದಲ್ಲಿ ಕಲ್ಪಿಸಿರುವ ಮೂಲಭೂತ ಹಕ್ಕುಗಳಿಂದ ವಂಚಿತರಾಗಲು ಸಾಧ್ಯವಿಲ್ಲ” ಎಂದು ಪೀಠ ಹೇಳಿದೆ.

ಇಸ್ಲಾಮಿಕ್ ಶರಿಯಾ ನಿಯಮವನ್ನು ಉಲ್ಲೇಖಿಸಿದ ನ್ಯಾಯಮೂರ್ತಿ ಬೇಡಿ, ಮುಸ್ಲಿಂ ಹುಡುಗಿಯ ವಿವಾಹವನ್ನು ಮುಸ್ಲಿಂ ವೈಯಕ್ತಿಕ ಕಾನೂನಿನಿಂದ ನಿಯಂತ್ರಿಸಲಾಗುತ್ತದೆ ಎಂದು ಹೇಳಿದ್ರು. ದಿನ್ಶಾ ಫರ್ದುಂಜಿ ಮುಲ್ಲಾ ಅವರ ‘ಪ್ರಿನ್ಸಿಪಲ್ಸ್ ಆಫ್ ಮೊಹಮ್ಮದನ್ ಲಾ’ ಪುಸ್ತಕದ ಆರ್ಟಿಕಲ್ 195ರ ಪ್ರಕಾರ, ಹುಡುಗಿ 16 ವರ್ಷಕ್ಕಿಂತ ಮೇಲ್ಪಟ್ಟವಳಾಗಿದ್ದು, ತನ್ನ ಆಯ್ಕೆಯ ವ್ಯಕ್ತಿಯೊಂದಿಗೆ ವಿವಾಹದ ಒಪ್ಪಂದಕ್ಕೆ ಪ್ರವೇಶಿಸಲು ಸಮರ್ಥಳು.

ಯುವಕನಿಗೂ ಈಗಾಗ್ಲೇ 21 ವರ್ಷವಾಗಿರುವುದರಿಂದ ಅರ್ಜಿದಾರರಿಬ್ಬರೂ ಮುಸ್ಲಿಂ ವೈಯಕ್ತಿಕ ಕಾನೂನಿನ ಪ್ರಕಾರ ಮದುವೆಯ ವಯಸ್ಸಿನವರಾಗಿದ್ದಾರೆ  ಎಂದು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟಿದ್ದಾರೆ. ದಂಪತಿಗೆ ಸೂಕ್ತ ಭದ್ರತೆ ಒದಗಿಸುವಂತೆ ಮತ್ತು ಕಾನೂನಿನ ಪ್ರಕಾರ ಅಗತ್ಯ ಕ್ರಮ ಕೈಗೊಳ್ಳುವಂತೆ ಎಸ್‌ಎಸ್‌ಪಿ ಪಠಾಣ್‌ಕೋಟ್‌ಗೆ ನ್ಯಾಯಾಲಯ ನಿರ್ದೇಶನ ನೀಡಿದೆ.

ಜೂನ್‌ 8 ರಂದು ಇವರ ವಿವಾಹ ಮುಸ್ಲಿಂ ವಿಧಿಗಳ ಅನ್ವಯ ನೆರವೇರಿದೆಯಂತೆ. ಆದರೆ ಪರಸ್ಪರರ ಕುಟುಂಬದವರು ಈ ಮದುವೆಗೆ ಒಪ್ಪಿಲ್ಲ. ಕುಟುಂಬಸ್ಥರು ತಮಗೆ ಬೆದರಿಕೆ ಹಾಕುತ್ತಿದ್ದಾರೆಂದು ದಂಪತಿ ದೂರಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...