alex Certify BIG NEWS:‌ ವಿಲ್​ ಸ್ಮಿತ್​​ಗೆ ಆಸ್ಕರ್​ ಸಮಾರಂಭದಿಂದ 10 ವರ್ಷಗಳ ಕಾಲ ನಿಷೇಧ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS:‌ ವಿಲ್​ ಸ್ಮಿತ್​​ಗೆ ಆಸ್ಕರ್​ ಸಮಾರಂಭದಿಂದ 10 ವರ್ಷಗಳ ಕಾಲ ನಿಷೇಧ

ಆಸ್ಕರ್​ ವೇದಿಕೆಯಲ್ಲಿ ಹಾಸ್ಯ ನಟ ಕ್ರಿಸ್​​ ರಾಕ್​​ರಿಗೆ ವೇದಿಕೆಯ ಮೇಲೆ ಕಪಾಳ ಮೋಕ್ಷ ಮಾಡಿದ್ದ ಪರಿಣಾಮವಾಗಿ ನಟ ವಿಲ್​ ಸ್ಮಿತ್​​ರಿಗೆ 10 ವರ್ಷಗಳ ಕಾಲ ಆಸ್ಕರ್​​ ಸಮಾರಂಭದಿಂದ ನಿಷೇಧ ಹೇರಲಾಗಿದೆ. ಈ ಬಗ್ಗೆ ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ & ಸೈನ್ಸಸ್ ಅಧಿಕೃತ ಹೇಳಿಕೆ ನೀಡಿದೆ.

ಏಪ್ರಿಲ್ 8, 2022 ರಿಂದ 10 ವರ್ಷಗಳ ಅವಧಿಗೆ ವಿಲ್​ ಸ್ಮಿತ್​ರಿಗೆ ನಿಷೇಧ ಹೇರಲು ಬೋರ್ಡ್ ನಿರ್ಧರಿಸಿದೆ. ವಿಲ್​ ಸ್ಮಿತ್​​ ಯಾವುದೇ ಅಕಾಡೆಮಿ ಕಾರ್ಯಕ್ರಮಗಳಿಗೆ ಹಾಜರಾಗಲು ಅನುಮತಿ ನೀಡಬಾರದು ಎಂದು ಅಕಾಡೆಮಿ ಅಧ್ಯಕ್ಷ ಡೇವಿಡ್​ ರೂಬಿನ್​ ಹಾಗೂ ಸಿಇಓ ಡಾನ್​ ಹಡ್ಸನ್​​ ಹೇಳಿಕೆ ನೀಡಿದ್ದಾರೆ.

ಲಾಸ್​ ಏಂಜಲೀಸ್​ನಲ್ಲಿ ನಡೆದ ಆಡಳಿತ ಮಂಡಳಿಯ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಈ ಸಭೆಯನ್ನು ಮೊದಲು ಏಪ್ರಿಲ್​ 18ಕ್ಕೆ ಆಯೋಜಿಸಲಾಗಿತ್ತು. ಅಕಾಡೆಮಿಗೆ ಕಳೆದ ವಾರ ಸ್ಮಿತ್​ ರಾಜೀನಾಮೆ ಘೋಷಿಸಿದ ಬಳಿಕ ಈ ಚಟುವಟಿಕೆಯನ್ನು ಚುರುಕುಗೊಳಿಸಲಾಯಿತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...