alex Certify BIG BREAKING: ಹಾಡ ಹಗಲೇ ಕಾರಿನಲ್ಲಿ ಬಂದು ಯುವತಿಯನ್ನು ಕಿಡ್ನಾಪ್ ಮಾಡಿದ ಯುವಕರ ಗ್ಯಾಂಗ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ಹಾಡ ಹಗಲೇ ಕಾರಿನಲ್ಲಿ ಬಂದು ಯುವತಿಯನ್ನು ಕಿಡ್ನಾಪ್ ಮಾಡಿದ ಯುವಕರ ಗ್ಯಾಂಗ್

ಮಡಿಕೇರಿ: ಹಾಡ ಹಗಲೇ ಯುವಕರ ಗ್ಯಾಂಗ್ ಒಂದು ಯುವತಿಯನ್ನು ಕಿಡ್ನಾಪ್ ಮಾಡಿರುವ ಘಟನೆ ಕೊಡಗು ಜಿಲ್ಲೆ ಮಡಿಕೇರಿ ಹೊರವಲಯದಲ್ಲಿ ನಡೆದಿದೆ.

ಮಧ್ಯಾಹ್ನದ ವೇಳೆ ಅಂಗಡಿಗೆ ಬಂದ ಯುವತಿಯೊಬ್ಬಳು 500 ರೂ ಕ್ಯಾಶ್ ಬೇಕು ಗೂಗಲ್ ಪೇ ಮೂಲಕ ಹಣ ಪಾವತಿ ಮಾಡುವುದಾಗಿ ಅಂಗಡಿಯ ಮಾಲೀಕನಿಗೆ ಹೇಳಿದ್ದಾಳೆ. ಅಂಗಡಿಯ ಮಾಲೀಕ 500 ರೂಪಾಯಿ ಕ್ಯಾಶ್ ನೀಡಿದ್ದು, ಹಣ ಪಡೆದ ಯುವತಿ ಗೂಗಲ್ ಪೇ ಮೂಲಕ ಪಾವತಿಸಿದ್ದಾಳೆ. ಇದೇ ವೇಳೆ ಇನ್ನೋವಾ ಕಾರಿನಲ್ಲಿ ಬಂದ ಯುವಕರ ಗ್ಯಾಂಗ್ ಯುವತಿಯನ್ನು ಕಾರಿನಲ್ಲಿ ಹೊತ್ತೊಯ್ದಿದ್ದಾರೆ.

ಈ ಬಗ್ಗೆ ಅಂಗಡಿಯ ಮಾಲೀಕ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿರುವ ಮಡಿಕೇರಿ ನಗರ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ಅಂಗಡಿ ಮಾಲೀಕ ಹೇಳುವ ಪ್ರಕಾರ ಯುವತಿ 500 ರೂ ಹಣವನ್ನು ಗೂಗಲ್ ಪೇ ಮೂಲಕ ಪಾವತಿಸಿದ್ದಾಳೆ. ಅಷ್ಟರಲ್ಲಿ ಗ್ರೇ ಕಲರ್ ಇನ್ನೋವಾ ಕಾರಿನಲ್ಲಿ ಬಂದ ಮೂವರು ಯುವಕರು ಹಾಗೂ ಓರ್ವ ಯುವತಿ, ಈ ಹುಡುಗಿಯನ್ನು ಎಳೆದೊಯ್ದಿದ್ದಾರೆ. ಆಕೆ ತಾನು ಬರುವುದಿಲ್ಲ ಎಂದು ಕಣ್ಣೀರಿಟ್ಟರೂ ಕೆಳದೇ ಹೊತ್ತೊಯ್ದಿದ್ದು, ವಾಹನ ಮೈಸೂರು ರಸ್ತೆ ಮಾರ್ಗವಾಗಿ ಹೋಗಿದೆ ಎಂದು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...