ಕಾಬೂಲ್: ಅಪ್ಘಾನಿಸ್ತಾನದ ಬಹುಭಾಗವನ್ನು ಆಕ್ರಮಿಸಿಕೊಂಡು, ಅಟ್ಟಹಾಸ ಮುಂದುವರೆಸಿರುವ ತಾಲಿಬಾನ್ ಉಗ್ರರು ಇದೀಗ ಪಂಜಶೀರ್ ಪ್ರಾಂತ್ಯವನ್ನು ಸಂಪೂರ್ಣವಾಗಿ ವಶಕ್ಕೆ ಪಡೆದುಕೊಂಡಿರುವುದಾಗಿ ಘೋಷಿಸಿದ್ದಾರೆ.
ಪಂಜಶೀರ್ ಪ್ರತಿರೋಧವನ್ನು ಮಟ್ಟಹಾಕಿದ್ದು, ಸಂಪೂರ್ಣವಾಗಿ ವಶಪಡಿಸಿಕೊಳ್ಳಲಾಗಿದೆ. ಈ ವಿಜಯದೊಂದಿಗೆ, ನಮ್ಮ ದೇಶವು ಯುದ್ಧದ ಬಿಕ್ಕಟ್ಟಿನಿಂದ ಸಂಪೂರ್ಣವಾಗಿ ಹೊರಬಂದಿದೆ ಎಂದು ತಾಲಿಬಾನ್ ಮುಖ್ಯ ವಕ್ತಾರ ಜಬಿಹುಲ್ಲಾ ಮುಜಾಹಿದ್ ಹೇಳಿಕೆ ನೀಡಿದ್ದಾರೆ.
ಕೊನೆಗೂ 10 ನೇ ತರಗತಿ ಪಾಸಾದ ಮಾಜಿ ಸಿಎಂ…!
ತಾಲಿಬಾನ್ ಕೇವಲ ಪಂಜಶೀರ್ ನ ರಸ್ತೆ ಮಾತ್ರ ವಶಕ್ಕೆ ಪಡೆದಿದೆ. ಪಂಜಶೀರ್ ಕಣಿವೆ ಮೇಲೆ ಇನ್ನೂ ಹಿಡಿತ ನಮಗಿದೆ ಎದು ರೆಸಿಸ್ಟೆನ್ಸ್ ಫ್ರಂಟ್ ಹೇಳಿಕೆ ನೀಡಿತ್ತು. ಇದರ ಬೆನ್ನಲ್ಲೇ ತಾಲಿಬಾನ್ ಉಗ್ರರು ನ್ಯಾಶನಲ್ ರೆಸಿಸ್ಟೆನ್ಸ್ ಆಫ್ ಅಪ್ಘಾನಿಸ್ತಾನ ಪಡೆಯ ವಕ್ತಾರ ಫಾಹಿಮ್ ದಷ್ಟಿ ಮೇಲೆ ದಾಳಿ ನಡೆಸಿ, ಹತ್ಯೆಗೈದಿದ್ದರು.
ದಾಳಿಯಲ್ಲಿ ಅಪ್ಘಾನ್ ಪರ ಹೋರಾಟಗಾರರಾದ ಮೂವರನ್ನು ತಾಲಿಬಾನಿಗಳು ಹತ್ಯೆಗೈದಿದ್ದವು. ಈ ಘಟನೆ ಬೆನ್ನಲ್ಲೇ ಎನ್ ಆರ್ ಎಫ್ ಎ ಕದನ ವಿರಾಮಕ್ಕೆ ಕರೆ ನೀಡಿತ್ತು. ಆದರೀಗ ತಾಲಿಬಾನಿಗಳು ಇಡೀ ಪಂಜಶೀರ್ ಕಣಿವೆ ಸಂಪೂರ್ಣ ವಶಕ್ಕೆ ಪಡೆದುಕೊಂಡಿರುವುದಾಗಿ ಘೋಷಿಸಿದೆ.