alex Certify ಕೊನೆಗೂ 10 ನೇ ತರಗತಿ ಪಾಸಾದ ಮಾಜಿ ಸಿಎಂ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊನೆಗೂ 10 ನೇ ತರಗತಿ ಪಾಸಾದ ಮಾಜಿ ಸಿಎಂ…!

ಚಂಡಿಗಢ: ಹರಿಯಾಣದ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌತಾಲಾ(86) 10ನೇ ತರಗತಿ ಪರೀಕ್ಷೆ ಪಾಸ್ ಮಾಡಿದ್ದಾರೆ ಇಂಗ್ಲೀಷ್ ವಿಷಯದಲ್ಲಿ ಓಂ ಪ್ರಕಾಶ್ ಚೌತಾಲಾ ಅವರು 88 ಅಂಕ ಪಡೆದಿದ್ದಾರೆ. ಈ ಮೂಲಕ 10ನೇ ತರಗತಿ ಪಾಸ್ ಮಾಡಿದ ಅತ್ಯಂತ ಹಿರಿಯ ವಿದ್ಯಾರ್ಥಿಯಾಗಿದ್ದಾರೆ.

INLD ಪಕ್ಷದ ಅಧ್ಯಕ್ಷರಾಗಿರುವ ಓಂ ಪ್ರಕಾಶ್ ಚೌತಾಲಾ ಆಗಸ್ಟ್ 18 ರಂದು 10ನೇ ತರಗತಿ ಇಂಗ್ಲಿಷ್ ವಿಷಯದ ಪರೀಕ್ಷೆ ಬರೆದಿದ್ದರು. ಸಿರ್ಸಾದ ಬಾಲಕಿಯರ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಅವರು ಪರೀಕ್ಷೆಗೆ ಹಾಜರಾಗಿದ್ದರು. ಪರೀಕ್ಷೆಗೆ ಮೊದಲು ಅವರಿಗೆ ಅಪಘಾತವಾಗಿದ್ದ ಹಿನ್ನೆಲೆಯಲ್ಲಿ 9ನೇ ತರಗತಿಯ ವಿದ್ಯಾರ್ಥಿನಿ ನೆರವಿನೊಂದಿಗೆ ಪರೀಕ್ಷೆ ಬರೆಯಲು ಹರಿಯಾಣ ಶಿಕ್ಷಣ ಮಂಡಳಿ ಅವಕಾಶ ನೀಡಿತತ್ಉ.

ಅಂದ ಹಾಗೇ, ಓಂ ಪ್ರಕಾಶ್ ಚೌತಾಲಾ ಕಳೆದ ವರ್ಷ 12ನೇ ತರಗತಿ ಪರೀಕ್ಷೆ ತೆಗೆದುಕೊಂಡಿದ್ದು, ಕೊರೋನಾ ಕಾರಣದಿಂದ ಪರೀಕ್ಷೆ ರದ್ದಾಗಿ ನಿಯಮದ ಪ್ರಕಾರ ಎಲ್ಲಾ ವಿದ್ಯಾರ್ಥಿಗಳನ್ನು ಪಾಸ್ ಮಾಡಲಾಗಿತ್ತು. ಆದರೆ, ಓಂ ಪ್ರಕಾಶ್ ಚೌತಾಲ 10ನೇ ತರಗತಿ ಪರೀಕ್ಷೆ ಪಾಸ್ ಮಾಡಿರದ ಕಾರಣ ಅವರ 12 ನೇ ತರಗತಿ ಫಲಿತಾಂಶ ತಡೆ ಹಿಡಿಯಲಾಗಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...