alex Certify BIG BREAKING: ನಾಲೆಗೆ ಉರುಳಿ ಬಿದ್ದ ಕ್ರೂಸರ್; 7 ಜನರ ದುರ್ಮರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ನಾಲೆಗೆ ಉರುಳಿ ಬಿದ್ದ ಕ್ರೂಸರ್; 7 ಜನರ ದುರ್ಮರಣ

ಬೆಳಗಾವಿ: ದಿನಗೂಲಿ ನೌಕರರು ತೆರಳುತ್ತಿದ್ದ ಕ್ರೂಸರ್ ವಾಹನ ನಾಲೆಗೆ ಪಲ್ಟಿಯಾಗಿ ಬಿದ್ದ ಪರಿಣಾಮ 7 ಜನರು ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಬೆಳಗಾವಿ ಜಿಲ್ಲೆಯ ಕಣಬರಗಿ ಬಳಿ ನಡೆದಿದೆ.

ವೇಗವಾಗಿ ಬಂದ ಕ್ರೂಸರ್ ವಾಹನ ಚಾಲಕನ ನಿಯಂತ್ರಣ ತಪ್ಪಿ ಬಳ್ಳಾರಿ ನಾಲೆಗೆ ಉರುಳಿದ್ದು, ಅಪಘಾತದ ರಭಸಕ್ಕೆ ಕ್ರೂಸರ್ ಸಂಪೂರ್ಣ ನುಜ್ಜುಗುಜ್ಜಾಗಿದೆ. ಕ್ರೂಸರ್ ನಲ್ಲಿದ್ದ 7 ಜನರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ.

ಅಮಿತಾಬ್ ಬಚ್ಚನ್ ಜೊತೆ ರಶ್ಮಿಕಾ ಮಂದಣ್ಣ ‘ಗುಡ್ ‌ಬೈ’

ಗೋಕಾಕ್ ನ ಅಕ್ಕ-ತಂಗಿಯರ ಹಾಳದಿಂದ ಬೆಳಗಾವಿಗೆ ರೈಲ್ವೆ ಬ್ರಿಡ್ಜ್ ಕಾಮಗಾರಿಗಾಗಿ ದಿನಗೂಲಿ ಕೆಲಸಕ್ಕೆಂದು ಕ್ರೂಸರ್ ನಲ್ಲಿ ಕೆಲಸಗಾರರು ತೆರಳುತ್ತಿದ್ದರು. ಈ ವೇಳೆ ಈ ದುರಂತ ಸಂಭವಿಸಿದೆ.

ಸ್ಥಳಕ್ಕೆ ಮಾರಿಹಾಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...